'ಕಿಂಗ್‌ಡಮ್' ಕಟ್ಟೋ ಟೈಮಲ್ಲೂ ವೈರಲ್.. ವಿಜಯ್ ದೇವರಕೊಂಡಗೆ ಅಡ್ಡಗಾಲು ಹಾಕಿದ್ರಾ ಆ ಸ್ಟಾರ್?

Published : Jul 27, 2025, 05:55 PM ISTUpdated : Jul 27, 2025, 05:57 PM IST
Vijay Deverakonda

ಸಾರಾಂಶ

ಅಂದು ನಟ ವಿಜಯ್ ದೇವರಕೊಂಡ ಅವರನ್ನು'ಯವಡೇ ಸುಬ್ರಹ್ಮಣ್ಯಂ' ಚಿತ್ರದ ಪ್ರಚಾರದಿಂದ ಹೊರಗಿಟ್ಟಿದ್ದರು. ಅವರಿಗಾಗಿ ಬರೆಯಲಾಗಿದ್ದ ಕೆಲವು ಪ್ರಮುಖ ದೃಶ್ಯಗಳಿಗೆ ಕತ್ತರಿ ಹಾಕಿಸಿದರು ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿವೆ. ಆದರೆ 'ಯವಡೇ ಸುಬ್ರಹ್ಮಣ್ಯಂ’ ಸಿನಿಮಾದ

ಟಾಲಿವುಡ್ ಸ್ಟಾರ್ ಹಾಗೂ ಪ್ಯಾನ್ ಇಂಡಿಯಾ ನಟ ವಿಜಯ್ ದೇವರಕೊಂಡ (Vijay Deverakonda) ನಟನೆಯ 'ಕಿಂಗ್‌ಡಮ್' ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆ ಆಗಲಿದೆ. 31 ಜುಲೈ 2025 ರಲ್ಲಿ ಬಿಡುಗಡೆ ಆಗಲಿರುವ ಕಿಂಗ್‌ಡಮ್ ಸಿನಿಮಾಲ್ಲೆ ಈಗಾಗಲೇ ಅಬ್ಬರದ ಪ್ರಚಾರಕಾರ್ಯ ನಡೆದಿದೆ. ತಿರುಪತಿಯಲ್ಲಿ ನಟ ವಿಜಯ್ ದೇವರಕೊಂಡ ಅವರ 40 ಅಡಿ ಬೃಹತ್ ಕಟ್‌ಔಟ್ ನಿಲ್ಲಿಸಲಾಗಿದ್ದು ಫ್ಯಾನ್ಸ್ ಕ್ರೇಜ್ ಮುಗಿಲುಮುಟ್ಟಿದೆ. ಆದರೆ, ಈ ಸಮಯದಲ್ಲೂ ನಟ ವಿಜಯ್ ದೇವರಕೊಂಡ ಫ್ಯಾನ್ಸ್ ನಟ ನಾನಿ ಬಗ್ಗೆ ಅದೇನು ಹೇಳ್ತಿದಾರೆ ನೋಡಿ..! ಹಾಗಿದ್ರೆ ಅದೆನು..?

ನಟ ವಿಜಯ್ ದೇವರಕೊಂಡ ತುಳಿಯಲು ಟ್ರೈ ಮಾಡಿದ್ದರೇ ಆ ಸ್ಟಾರ್ ನಟ?

ವಿಜಯ್ ದೇವರಕೊಂಡ ಈಗ ತೆಲುಗು ಚಿತ್ರರಂಗದ ಸ್ಟಾರ್ ನಟ. ಆರಂಭದ ದಿನಗಳಲ್ಲಿ ಹಲವು ಸಣ್ಣ ಪುಟ್ಟ ಪಾತ್ರಗಳು, ಸೆಕೆಂಡ್ ಹೀರೋ ಪಾತ್ರಗಳಲ್ಲಿ ನಟಿಸಿ ಈ ಹಂತಕ್ಕೆ ಅವರು ತಲುಪಿದ್ದಾರೆ. ಆದರೆ ಅವರ ಆರಂಭದ ದಿನಗಳಲ್ಲಿ ತೆಲುಗಿನ ಸ್ಟಾರ್ ನಟರೊಬ್ಬರು ವಿಜಯ್ ದೇವರಕೊಂಡ ಅವರನ್ನು ತುಳಿಯುವ ಯತ್ನ ಮಾಡಿದ್ದರು ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಯಾರದು?

ವಿಜಯ್ ದೇವರಕೊಂಡ ಈಗಷ್ಟೇ ಸ್ಟಾರ್ ನಟ. ‘ಅರ್ಜುನ್ ರೆಡ್ಡಿ’ ಸಿನಿಮಾ ಬಳಿಕ ಸ್ಟಾರ್ ನಟರಾಗಿ ಬೆಳೆದರು. ವಿಜಯ್ ದೇವರಕೊಂಡ ಅವರಿಗೆ 'ಅರ್ಜುನ್ ರೆಡ್ಡಿ'ಗೆ ಮುಂಚೆ ಹಲವಾರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ನಾಯಕ, ಎರಡನೇ ನಾಯಕನಾಗಿಯೂ ನಟಿಸಿದ್ದರು. ಆ ಸಮಯದಲ್ಲಿ ಸ್ಟಾರ್ ನಟನೊಬ್ಬ ವಿಜಯ್ ದೇವರಕೊಂಡ ಅನ್ನು ತುಳಿಯುವ ಪ್ರಯತ್ನ ಮಾಡಿದ್ದರು ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದು ಫ್ಯಾನ್ಸ್ ವಾರ್​ಗೆ ಕಾರಣವಾಗಿತ್ತು.

ವಿಜಯ್ ದೇವರಕೊಂಡ 2011 ರಲ್ಲಿ ಬಿಡುಗಡೆ ಆದ 'ನುವ್ವಿಲ' ಹಾಗೂ 2012 ರಲ್ಲಿ ಬಿಡುಗಡೆ ಆದ ಶೇಖರ್ ಕಮ್ಮುಲ ನಿರ್ದೇಶನದ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು. 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದ ಪಾತ್ರ ಸ್ವಲ್ಪ ವಿಲನ್ ಶೇಡ್​ನ ಪಾತ್ರವಾಗಿತ್ತು. ಅದಾದ ಬಳಿಕ ಮೂರು ವರ್ಷ ನಟ ವಿಜಯ್ ದೇವರಕೊಂಡಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ ತದನಂತರ, 2015 ರಲ್ಲಿ ಬಿಡುಗಡೆ ಆದ ‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾದಲ್ಲಿ ಎರಡನೇ ನಾಯಕನ ಪಾತ್ರ ವಿಜಯ್​ಗೆ ದೊರಕಿತು. ಆ ಸಿನಿಮಾದಲ್ಲಿ ಈಗಿನ ಸ್ಟಾರ್ ನಟ ನಾನಿ ನಾಯಕ.

'ಯವಡೇ ಸುಬ್ರಹ್ಮಣ್ಯಂ' ಸಿನಿಮಾ ಬಿಡುಗಡೆ ವೇಳೆಗಾಗಲೇ ನಾನಿ ಜನಪ್ರಿಯ ನಾಯಕ ನಟರಾಗಿದ್ದರು. ‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದ ಪಾತ್ರ, ನಾನಿ ಪಾತ್ರಕ್ಕಿಂತಲೂ ಹೆಚ್ಚು ಚೆನ್ನಾಗಿತ್ತು, ನಾನಿಯ ಪಾತ್ರ ಅಹಂಕಾರಿ, ಅತಿಯಾಸೆಯ ಹೊಂದಿದ ವ್ಯಕ್ತಿಯ ಪಾತ್ರವಾಗಿತ್ತು. ‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾದ ಸಮಯದಲ್ಲಿ ನಾನಿ ಉದ್ದೇಶಪೂರ್ವಕವಾಗಿ ವಿಜಯ್ ದೇವರಕೊಂಡ ಅವರನ್ನು ತುಳಿಯಲು ಯತ್ನಿಸಿದ್ದರು ಎಂಬ ಸುದ್ದಿ ಈಗ ಹರಿದಾಡುತ್ತಿದೆ.

ಅಂದು ನಟ ವಿಜಯ್ ದೇವರಕೊಂಡ ಅವರನ್ನು'ಯವಡೇ ಸುಬ್ರಹ್ಮಣ್ಯಂ' ಚಿತ್ರದ ಪ್ರಚಾರದಿಂದ ಹೊರಗಿಟ್ಟಿದ್ದರು. ಅವರಿಗಾಗಿ ಬರೆಯಲಾಗಿದ್ದ ಕೆಲವು ಪ್ರಮುಖ ದೃಶ್ಯಗಳಿಗೆ ಕತ್ತರಿ ಹಾಕಿಸಿದರು ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇತ್ತೀಚೆಗಷ್ಟೆ 2025ರ ಮಾರ್ಚ್ನಲ್ಲಿ ಆಯೋಜಿಸಲಾಗಿದ್ದ 'ಯವಡೇ ಸುಬ್ರಹ್ಮಣ್ಯಂ’ ಸಿನಿಮಾದ 10ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಇಬ್ಬರೂ ನಟರಾದ ವಿಜಯ್ ದೇವರಕೊಂಡ ಹಾಗೂ ನಾನಿ ಇಬ್ಬರೂ ಅತ್ಯಂತ ಆಪ್ತರಾಗಿದ್ದರು, ವೇದಿಕೆಯಲ್ಲಿ ಚೆನ್ನಾಗಿಯೇ ಕ್ಲೋಸ್ ಆಗಿದ್ದರು.

ಕಾರ್ಯಕ್ರಮದ ವೇಳೆ ನಾನಿ ಹಾಗೂ ವಿಜಯ್ ದೇವರಕೊಂಡ ಸೇರಿದಂತೆ ಆ ಸಿನಿಮಾಕ್ಕೆ ಕೆಲಸ ಮಾಡಿದ ಅನೇಕರು ಭಾಗಿಯಾಗಿದ್ದರು. ಈ ವೇಳೆಯಲ್ಲಿ ವಿಜಯ್ ದೇವರಕೊಂಡ ಸ್ವತಃ 'ನನಗೆ ನಟ ನಾನಿ ಬಹಳ ಸಹಾಯ ಮಾಡಿದ್ದಾರೆ' ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಇಬ್ಬರ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಸೋಷಿಯಲ್ ಮೀಡಿಯಾ ವಾರ್​ಗೆ ಪೂರ್ಣ ವಿರಾಮ ಇಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದೀಗ ಕಿಂಗ್‌ಡಮ್ ಸಿನಿಮಾದ ಪ್ರಚಾರದ ವೇಳೆಯಲ್ಲಿ ಮತ್ಯಾಕೆ ಈ ಸುದ್ದಿ ವೈರಲ್ ಆಗ್ತಿದೆ ಅನ್ನೋದೇ ಅರ್ಥ ಆಗದ ಸಂಗತಿ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!