ವಿವಾದಕ್ಕೆ ಕಾರಣವಾದ ರಾಜಮೌಳಿ ಫೋಟೊ!

Published : Nov 20, 2017, 06:56 PM ISTUpdated : Apr 11, 2018, 01:01 PM IST
ವಿವಾದಕ್ಕೆ ಕಾರಣವಾದ ರಾಜಮೌಳಿ ಫೋಟೊ!

ಸಾರಾಂಶ

ರಾಜಮೌಳಿ ರಾಮ್ ಚರಣ್ ತೇಜ ಎನ್​ಟಿಆರ್​ ಒಟ್ಟಿಗೆ ಇರುವ ಈ ಫೋಟೊ ವೈರಲ್ಲಾಗುತ್ತಿದ್ದಂತೆ. ನಿರ್ದೇಶಕ ರಾಮ್​ ಗೋಪಾಲ್ ವರ್ಮ ಕೆಟ್ಟ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ.

ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದ ಬಾಹುಬಲಿ 2 ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ  ಮತ್ತೆ ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡ್ತಿದೆ. ಇದಕ್ಕೆ ಕಾರಣವಾಗಿದ್ದು ಎಸ್‌ಎಸ್ ರಾಜಮೌಳಿ ಪೋಸ್ಟ್ ಮಾಡಿದ ಆ ಫೋಟೋ. ಟಾಲಿವುಡ್'ನ ಸ್ಟಾರ್ ನಟರಾದ ರಾಮ್ ಚರಣ್ ತೇಜ ಮತ್ತು ಎನ್​ಟಿಆರ್ ಜೊತೆಗೆ ಆತ್ಮೀಯವಾಗಿ ತೆಗೆಸಿಕೊಂಡ ಫೋಟೊ ಒಂದು ಈಗ ಟಾಳಿವುಡ್​ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಜಮೌಳಿ ಮುಂದಿನ ಸಿನಿಮಾದಲ್ಲಿ ಇಬ್ಬರು ಬಿಗ್ ಸ್ಟಾರ್ಸ್?

ಎಸ್‌ಎಸ್ ರಾಜಮೌಳಿ  ಈಗಾಗಲೇ ಎನ್​ಟಿಆರ್ ಜೊತೆ ಸಿಂಹಾದ್ರಿ, ಯಮದೊಂಗ ಹಾಗೂ ರಾಮ್ ಚರಣ್ ತೇಜಾ ಮಗಧೀರ ಸಿನಿಮಾ ಮಾಡಿದ್ದಾರೆ. ಇದೀಗ ಇತ್ತಿಚೆಗಷ್ಟೆ ಈ ಇಬ್ಬರು ಸ್ಟಾರ್ ನಟರ ಜೊತೆ ಆತ್ಮೀಯವಾಗಿ ಫೋಟೊ ತೆಗೆಸಿಕೊಂಡಿರೋ ರೀತಿಗೆ ಸಾಕಷ್ಟು ಅನುಮಾನಗಳು ಇಂಡಸ್ಟ್ರಿಯಿಂದ ಎದುರಾಗುತ್ತಿವೆ. ಮ್ತತೊಂದು ಐತಿಹಾಸಿಕ ಸಿನಿಮಾದಲ್ಲಿ ಈ ಇಬ್ಬರು ತಾರೆಯರು ಇರುತ್ತಾರೆಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕಾಗಿಯೇ ರಾಜಮೌಳಿ ಮಾಸ್ಟರ್  ಪ್ಲ್ಯಾನ್ ಮಾಡು ತ್ತಿದ್ದಾರೆನ್ನಲಾಗಿದೆ. ರಾಜಮೌಳಿ ಈ ಫೋಟೊ ಟ್ವೀಟ್ ಮಾಡಿದ್ದೆ ಭಾರೀ ಸಂಚಲನ ಸೃಷ್ಟಿಸಿದೆ.

ರಾಜಮೌಳಿ ಫೋಟೊಗೆ ಕೆಟ್ಟದಾಗಿ ಟ್ವೀಟ್ ಮಾಡಿದ ವರ್ಮ

ರಾಜಮೌಳಿ ರಾಮ್ ಚರಣ್ ತೇಜ ಎನ್​ಟಿಆರ್​ ಒಟ್ಟಿಗೆ ಇರುವ ಈ ಫೋಟೊ ವೈರಲ್ಲಾಗುತ್ತಿದ್ದಂತೆ. ನಿರ್ದೇಶಕ ರಾಮ್​ ಗೋಪಾಲ್ ವರ್ಮ ಕೆಟ್ಟ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ. ಇವರು ಸಲಿಂಗಿಗಳು, ಗೇಸ್ ಎಂದು ಬರೆದಿದ್ದಾರೆ. ಎನ್​ಟಿಆರ್​ ರಾಜಮೌಳಿ ಕಾಲಮೇಲೆ ಕಾಲು ಹಾಕಿರೋ ರೀತಿಗೆ ಮತ್ತೊಂದು ಟ್ವೀಟ್ ನಲ್ಲಿ  ವರ್ಮಾ ಇವರೆಲ್ಲರಿಗೂ ಮದುವೆಯಾಗಿದೆ ಆದರೂ ಯಾಕೋ ಹಿಂಗೆ ಗೇಸ್ ತರ ಆಡ್ತಿದ್ದಾರೆ ಅಂತಲೂ ಬರೆದುಕೊಂಡಿದ್ದಾರೆ. ಇದನ್ನೆಲ್ಲಾ ಕಂಡ ಸ್ಟಾರ್ ಅಭಿಮಾನಿಗಳು ಟ್ವಿಟರ್'ನಲ್ಲೆ ಆರ್.ಜಿ.ವಿ ಸರಿಯಾಗಿ ಬೇವರಿಸಿದ್ದಾರೆ. ಒಂದು ಹಿಟ್ ಸಿನಿಮಾ ಕೊಟ್ಟು ಆಮೇಲೆ ಮಾತಾಡು ಎಂದು ಬಾಣ ಬಿಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?
ಶಾರುಖ್-ದೀಪಿಕಾ ನಟನೆಯ 'ಕಿಂಗ್' ಚಿತ್ರದ ರೊಮ್ಯಾಂಟಿಕ್ ಹಾಡು ಲೀಕ್ ಆಯ್ತಾ? ವಿಡಿಯೋ ವೈರಲ್!