
ಬೆಂಗಳೂರು(ನ.20): ಡಬ್ಬಿಂಗ್ ಸಿನಿಮಾಗಳ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ವಾದ ನ್ಯಾಯಾಲಯದಲ್ಲಿ ಹಿನ್ನೆಡೆ ಕಾಣುತ್ತಿದ್ದಂತೆ, ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಕೋಕಿಲಾ ಚಿತ್ರ ಮಂದಿರದಲ್ಲಿ ಸದ್ದಿಲ್ಲದೇ ರೀಮೇಕ್ ಚಿತ್ರ ವೊಂದು ತೆರೆಕಂಡಿದೆ.
ನವೆಂಬರ್ 17ರಂದು, ಕೋಕಿಲಾ ಚಿತ್ರಮಂದಿರದಲ್ಲಿ ಆರ್ಯ, ಅಜಿತ್, ನಯನ ತಾರಾ ಹಾಗೂ ತಾಪ್ಸಿ ಪನ್ನು ನಟಿಸಿರುವ ಆರಂಭಂ ಚಿತ್ರವನ್ನು ಧೀರ ಎಂಬ ಹೆಸರಲ್ಲಿ ಕನ್ನಡಕ್ಕೆ ಡಬ್ ಮಾಡಿ ಪ್ರದರ್ಶಿಸಲಾಗುತ್ತಿದೆ. ಡಬ್ಬಿಂಗ್ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬುಕ್ ಮೈ ಷೋದಲ್ಲಿ ಹೆಚ್ಚಿನ ಪ್ರೇಕ್ಷಕರು ಡಬ್ಬಿಂಗ್ ಆಗಿರುವ ಧೀರ ಚಿತ್ರವನ್ನು ಸ್ವಾಗತಿಸಿದ್ದಾರೆ. ಮೊದಲ ದಿನ ಸಾಧಾರಣ ಪ್ರದರ್ಶನ ಕಂಡಿದ್ದ ಧೀರ ಶನಿವಾರದಿಂದ ಚೇತರಿಸಿಕೊಂಡಿದೆ. ಪ್ರೇಕ್ಷಕರು ಬರುತ್ತಿದ್ದಾರೆ. ಅಚ್ಚುಕಟ್ಟಾಗಿ ಡಬ್ಬಿಂಗ್ ಆಗಿರುವ ಸಿನಿಮಾ ಎಂಬ ಕಾರಣಕ್ಕೆ ಮಿಕ್ಕ ಚಿತ್ರಗಳಿಗಿಂತ ಧೀರ ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಶ್ರೀ ಕೋಕಿಲಾ ಚಿತ್ರಮಂದಿರದ ಮೂಲಗಳ ಪ್ರಕಾರ ಇದುವರೆಗೂ ಡಬ್ಬಿಂಗ್ ಚಿತ್ರಕ್ಕೆ ಯಾವುದೇ ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿಲ್ಲ.
ಅಜಿತ್ ಅಭಿಮಾನಿಗಳ ಜೊತೆಗೆ ಕನ್ನಡ ನಟರ ಅಭಿಮಾನಿಗಳೂ ಬಂದು ಸಿನಿಮಾ ನೋಡುತ್ತಿದ್ದಾರೆ. ತಮಿಳು ಅರ್ಥವಾಗದ ಪ್ರೇಕ್ಷಕರು ಕೂಡ ತಮ್ಮದೇ ಭಾಷೆಯಲ್ಲಿ ತಮಿಳು ಚಿತ್ರವನ್ನು ನೋಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾರೆ. ಮೂಲಚಿತ್ರ ಆರಂಭಂ ತಮಿಳಿನಲ್ಲಿ ಅಕ್ಟೋ ಬರ್ 2013ರಲ್ಲಿ ತೆರೆಕಂಡಿತ್ತು. ಅದೀಗ 4 ವರ್ಷಗಳ ನಂತರ ಕನ್ನಡದಲ್ಲಿ ಡಬ್ ಆಗಿ ಬಿಡು ಗಡೆಯಾಗಿದೆ. ಕೆಂಪೇಗೌಡ ರಸ್ತೆಗೆ ಬರುವುದು ಎಷ್ಟು ತಡ ಎಂಬುದು ಚಿತ್ರರಂಗದ ಮುಂದಿರುವ ಪ್ರಶ್ನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.