ರಾಮಾಯಣ ಮೊದಲ ಭಾಗದ ಬಜೆಟ್‌ನ ಸಿಕ್ರೇಟ್ ಬಿಚ್ಚಿಟ್ಟ RGV, ಬೆನ್ನಲ್ಲೇ ಮಲ್ಹೋತ್ರಾ ಮೇಲೆ ಶುರುವಾಯ್ತು ಡೌಟ್

Published : Nov 15, 2026, 05:27 PM IST
Ram Gopal Varma

ಸಾರಾಂಶ

ರಾಮಾಯಣ ಸಿನಿಮಾದ ಮೊದಲ ಭಾಗ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ಇದರ 4000 ಕೋಟಿ ಬಜೆಟ್ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅನುಮಾನ ವ್ಯಕ್ತಪಡಿಸಿದ್ದು, ಅಸಲಿ ಖರ್ಚು 800 ಕೋಟಿಗಿಂತ ಕಡಿಮೆ ಎಂದಿದ್ದಾರೆ. ಹಾಗೆಯೇ ಪಾರ್ಟ್ 2 ದಾಖಲೆ ಬರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು (ನವೆಂಬರ್ 15) : ರಾಕಿಂಗ್ ಸ್ಟಾರ್ ಯಶ್ ಮತ್ತು ರಣಬಿರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾವು ಭರ್ಜರಿ ಕಲೆಕ್ಷನ್ ಮಾಡಿಮುನ್ನುಗ್ಗುತ್ತಿದೆ. ಎರಡು ಭಾಗಗಳಲ್ಲಿ ಸಿನಿ ಪ್ರೇಕ್ಷಕರನ್ನು ರಂಜಿಸುವ ಈ ಚಿತ್ರಕ್ಕೆ 4 ಸಾವಿರ ಕೋಟಿಗಿಂತಲೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. 4000 ಕೋಟಿ ಬಜೆಟ್‌ನಲ್ಲಿ ರಾಮಾಯಣ ಸಿನಿಮಾದ ಮೊದಲ ಭಾಗವು ಪ್ರೇಕ್ಷಕರನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ರಾಮಾಯಣ ಮೊದಲ ಭಾಗಕ್ಕೆ ಹೂಡಿಕೆ ಆಗಿರುವ ಹಣದ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಡುಗಡೆಯಾದ ಮೊದಲ ಭಾಗವು 1288 ಕೋಟಿಗೂ ಅಧಿಕ ಹಣ ಗಳಿಸಿ ಮುನ್ನುಗ್ಗುತ್ತಿದೆ ಎಂಬ ವರದಿಯನ್ನ ಉಲ್ಲೇಖಿಸಿ.. ಎಕ್ಸ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?

ರಾಮಾಯಣ ಪಾರ್ಟ್ 1ರ ನಿಜವಾದ ಖರ್ಚು 800 ಕೋಟಿ ರೂಪಾಯಿಗಿಂತ ಸ್ವಲ್ಪ ಕಡಿಮೆ ಇದೆ ಎಂದು ಗೊತ್ತಾಗಿದೆ. ಪರಸ್ಪರ ಲಾಭದ ಒಪ್ಪಂದಗಳು, ಜಾಗತಿಕ ತೆರಿಗೆ ರಿಯಾಯಿತಿ ಮತ್ತು ಸಬ್ಸಿಡಿಗಳೆಲ್ಲವೂ ಸೇರಿ ಒಟ್ಟಾರೆ ವೆಚ್ಚವನ್ನು ಅದಕ್ಕಿಂತ ಕಡಿಮೆ ಮಾಡುತ್ತವೆ. ನನಗಷ್ಟೇ ಅಲ್ಲ, ತಕ್ಕಮಟ್ಟಿಗೆ ಅನುಭವವಿರುವ ಯಾವ ಸಿನಿಮಾ ನಿರ್ಮಾಪಕರೇ ಆದರೂ ಸಿನಿಮಾ ನೋಡಿದರೆ.. ಇದರ ಖರ್ಚು ಇದಕ್ಕಿಂತ ಹೆಚ್ಚಿರಲು ಸಾಧ್ಯವಿಲ್ಲ ಎಂದು ಸುಲಭವಾಗಿ ಹೇಳಬಲ್ಲರು.

ಒಂದು ಸಿನಿಮಾದ ಇಂಟರ್‌ವಲ್‌ಗಿಂತ ಮುಂಚಿನ ಮತ್ತು ನಂತರದ ಖರ್ಚು ಒಂದೇ ಇರುತ್ತದೆ ಎಂದು ಭಾವಿಸಿದಂತೆ. ಕೇವಲ ಕ್ಲೈಮ್ಯಾಕ್ಸ್‌ಗಾಗಿಯೇ ಶೇ. 50ರಷ್ಟು ಹಣ ಖರ್ಚಾದ ಸಿನಿಮಾಗಳೂ ನನಗೆ ಗೊತ್ತಿವೆ. ಈಗ ಸಿನಿಮಾ ಓಡುತ್ತಿರುವ ರೀತಿ ನೋಡಿದರೆ.. ನಮಿತ್ ಮಲ್ಹೋತ್ರಾ ಪಾರ್ಟ್ 1ರಲ್ಲೇ ಮೊದಲ ಸಂಪೂರ್ಣ ಖರ್ಚನ್ನು ಅಥವಾ ಬಹುಶಃ ಎರಡೂ ಭಾಗಗಳ ಖರ್ಚನ್ನು ಮರಳಿ ಪಡೆಯುವುದು ಸ್ಪಷ್ಟವಾಗಿದೆ. ಆ ನಂತರ ಪಾರ್ಟ್ 1ರ ಥಿಯೇಟರ್‌ಯೇತರ ಆದಾಯ ಮತ್ತು ಪಾರ್ಟ್ 2ರ ಎಲ್ಲಾ ಆದಾಯವೂ ಸಿಗಲಿದೆ ಎಂದಿದ್ದಾರೆ.

ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ.. ನಮಿತ್ ಮಲ್ಹೋತ್ರಾ ತಮ್ಮದೇ ಆದ 'ಪುಷ್ಪಕ ವಿಮಾನ' ಕಟ್ಟಿಕೊಂಡು ಉತ್ತರದಿಂದ ದಕ್ಷಿಣದವರೆಗಿನ ಯಾವ ದೊಡ್ಡ ನಿರ್ಮಾಣ ಸಂಸ್ಥೆಗಳೂ ಇದುವರೆಗೆ ಮಾಡಲಾಗದಂತಹ ಲೆಕ್ಕವಿಲ್ಲದಷ್ಟು ಅದ್ಭುತ ಪ್ರಾಜೆಕ್ಟ್‌ಗಳಲ್ಲಿ ಹಣ ಹೂಡಬಹುದು. ಆಮೇಲೆ ಹಾಲಿವುಡ್‌ನ ಅತ್ಯಂತ ದೊಡ್ಡ ದಿಗ್ಗಜರನ್ನೂ ಅವರು ಮೀರಿಸಬಹುದು.

ಕೆಜಿಎಫ್ 1ಕ್ಕಿಂತ ಕೆಜಿಎಫ್ 2 ಸುಮಾರು 5 ಪಟ್ಟು ಹೆಚ್ಚು ಗಳಿಸಿದ್ದರೆ.. ರಾಮಾಯಣ 2 ಸಿನಿಮಾ 'ರಾಮಾಯಣ ಪಾರ್ಟ್ 1 ಕ್ಕಿಂತ 10 ಪಟ್ಟು ಹೆಚ್ಚು ಗಳಿಸುತ್ತದೆ ಎಂಬ ನಂಬಿಕೆ ಇದೆ. ನನ್ನ ಮಾತನ್ನು ನೀವು ಒಪ್ಪದಿದ್ದರೆ 2028ರಲ್ಲಿ ಮತ್ತೆ ಮಾತನಾಡೋಣ ಎಂದಿದ್ದಾರೆ.

ರಾಮಾಯಣ ಮೊದಲ ಭಾಗವು ನವೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ramya Krishnan: ಪತಿಯೊಂದಿಗೆ ವಿಚ್ಛೇದನ? ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ರಮ್ಯಾ ಕೃಷ್ಣನ್!
ಬಿಗ್ ಬಾಸ್ ಮನೆಯ ಕರ್ಮಕಾಂಡ ಬಿಚ್ಚಿಟ್ಟ ಕುಮಾರಿ; ಉಗಿರಿ ಮಕ್ಕೆ ಎಂದ ಹಳ್ಳಿ ಹುಡುಗಿ ಸಪೋರ್ಟರ್ಸ್