ಆರ್‌ಜಿವಿ 'ಭೈರವ ಗೀತಾ'ದಲ್ಲಿ ಹಾಡು-ಕಿಸ್ ಬಿಟ್ಟು ಮತ್ತೇನಿದೆ?

By Web DeskFirst Published 11, Sep 2018, 8:47 PM IST
Highlights

ರಾಮ್​ ಗೋಪಾಲ್ ವರ್ಮಾ ನಿರ್ಮಾಣದ 'ಭೈರವ ಗೀತಾ' ಮೊದಲಿನಿಂದಲೂ ಸದ್ದು ಮಾಡಿಕೊಂಡೇ ಬಂದಿದೆ. ತನ್ನ ಟ್ರೈಲರ್​ ನಿಂದಲೇ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಸಿಗ್ತಾ  ಇದೆ.

ಕನ್ನಡದ ಕಹಳೆಯ ಊದಿ ಮೊಳಗುತಿರೋ ಪ್ರೇಮ ಗೀತೆ ಎಂಬ ಸಾಲುಗಳು ನಿಜಕ್ಕೂ ಕಿವಿಗೆ ಇಂಪಾಗಿ ಕೇಳುತ್ತವೆ. ಖ್ಯಾತ ಗಾಯಕ ವಿಜಯ್ ಯೇಸುದಾಸ್​ ಹಾಗೂ ಚಿನ್ಮಯ್ ಧ್ವನಿಯಾಗಿದ್ದಾರೆ. ಕೆ.ಕಲ್ಯಾಣ್ ಈ ಗೀತೆ ಬರೆದಿದ್ದು, ರವಿ ಶಂಕರ್ ಸಂಗೀತ ಸಂಯೋಜನೆ ವಿಶಿಷ್ಟವಾಗಿದೆ.

ನಟ ಧನಂಜಯ್ ಗೆ ನಾಯಕಿಯಾಗಿ ಐರಾ ಮೋರ್ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್​ ನಿರ್ದೇಶನ  ಜವಾಬ್ದಾರಿ ಹೊತ್ತಿದ್ದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ  ತೆರೆಗೆ ಬರಲಿದೆ. ಭೈರವ ಗೀತಾ ಅಕ್ಟೋಬರ್ 12 ರಂದು ಬಿಡುಗಡೆಯಾಗುತ್ತಿದ್ದು ಹೇಗೆ ಮೂಡಿ ಬಂದಿದೆ ಎನ್ನುವುದಕ್ಕೆ ಉತ್ತರ ಸಿಗಲಿದೆ.

Last Updated 19, Sep 2018, 9:23 AM IST