ಗಂಟೆಗಟ್ಟಲೆ ವರ್ಕೌಟ್, ಸಸ್ಯಾಹಾರದಲ್ಲೇ ದೈತ್ಯ ದೇಹ: ರಾಮ್ ಚರಣ್ ಲುಕ್ ನೋಡಿ ದಂಗಾದ ಫ್ಯಾನ್ಸ್!

Published : Mar 31, 2026, 05:47 PM IST
Ram Charan

ಸಾರಾಂಶ

'ಪೆದ್ದಿ' ಸಿನಿಮಾಗಾಗಿ ರಾಮ್ ಚರಣ್ ಸಂಪೂರ್ಣ ಸಸ್ಯಾಹಾರ ಸೇವಿಸಿ, 8 ತಿಂಗಳ ಕಠಿಣ ತಾಲೀಮಿನಿಂದ ದೈತ್ಯ ದೇಹವನ್ನು ಪಡೆದಿದ್ದಾರೆ. ಈ ಬಗ್ಗೆ ನಿರ್ದೇಶಕ ಬುಚಿ ಬಾಬು ಸನಾ ಮಾಹಿತಿ ಹಂಚಿಕೊಂಡಿದ್ದಾರೆ.

ಮೆಗಾ ಪ್ರಿನ್ಸ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಪೆದ್ದಿ'ಯ ಹೊಸ ಗ್ಲಿಂಪ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 'ಪೆದ್ದಿ ಪೈಲ್ವಾನ್' ಆಗಿ ರಾಮ್ ಚರಣ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಬಾಡಿ ಟ್ರಾನ್ಸ್‌ಫಾರ್ಮೇಶನ್ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಕುಸ್ತಿಪಟುವಿನ ಪಾತ್ರಕ್ಕಾಗಿ ರಾಮ್ ಚರಣ್ ತಮ್ಮ ದೇಹವನ್ನು ಹುರಿಗೊಳಿಸಿರುವ ರೀತಿ ನಿಜಕ್ಕೂ ಬೆರಗು ಮೂಡಿಸಿದೆ.

ಈ ಬಗ್ಗೆ ಹೈದರಾಬಾದ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಬುಚಿ ಬಾಬು ಸನಾ ಇನ್ನಷ್ಟು ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಚಿತ್ರವು 2026ರ ಏಪ್ರಿಲ್ 30ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರವನ್ನು ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಈ ಬಿಗ್ ಬಜೆಟ್ ಚಿತ್ರವನ್ನು ಅರ್ಪಿಸುತ್ತಿವೆ.

ಗ್ಲಿಂಪ್ಸ್ ವಿಡಿಯೋದಲ್ಲಿ, ರಾಮ್ ಚರಣ್ ಬಲಿಷ್ಠ ದೇಹದೊಂದಿಗೆ, ಕೈಯಲ್ಲಿ ದೊಡ್ಡ ಗದೆ ಹಿಡಿದು ಕುಸ್ತಿ ಕಣದಲ್ಲಿ ಎದುರಾಳಿಗಳನ್ನು ಧೂಳೀಪಟ ಮಾಡುವ ದೃಶ್ಯಗಳಿವೆ. ಈ ದೈತ್ಯ ದೇಹವನ್ನು ಪಡೆಯಲು ರಾಮ್ ಚರಣ್ ಸುಮಾರು ಎಂಟು ತಿಂಗಳ ಕಾಲ ಪ್ರತಿದಿನ ಗಂಟೆಗಟ್ಟಲೆ ತಾಲೀಮು ನಡೆಸಿದ್ದಾರೆ ಎಂದು ಬುಚಿ ಬಾಬು ಸನಾ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅಯ್ಯಪ್ಪ ದೀಕ್ಷೆಯಲ್ಲಿದ್ದ ಕಾರಣ, ಅವರು ಯಾವುದೇ ಮಾಂಸಾಹಾರ ಸೇವಿಸದೆ, ಸಂಪೂರ್ಣ ಸಸ್ಯಾಹಾರಿ ಡಯಟ್ ಮೂಲಕವೇ ಈ ಬಾಡಿ ಬಿಲ್ಡ್ ಮಾಡಿದ್ದಾರೆ ಎಂಬ ಅಚ್ಚರಿಯ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದಾರೆ.

ನೂರಕ್ಕೆ ನೂರರಷ್ಟು ಶಿಸ್ತಿನ ಜೀವನಶೈಲಿಯಿಂದ ಅವರು ಈ ಗುರಿ ಸಾಧಿಸಿದ್ದಾರೆ. ಇದರ ಜೊತೆಗೆ, ಕುಸ್ತಿಪಟುಗಳ ಪ್ರಮುಖ ಅಸ್ತ್ರವಾದ ಗದೆಯನ್ನು ಬಳಸುವ ಬಗ್ಗೆಯೂ ವಿಶೇಷ ತರಬೇತಿ ಪಡೆದಿದ್ದಾರೆ ಎಂದು ನಿರ್ದೇಶಕರು ವಿವರಿಸಿದ್ದಾರೆ. ಚಿತ್ರದಲ್ಲಿ ಕುಸ್ತಿಯ ಜೊತೆಗೆ ಕ್ರಿಕೆಟ್‌ಗೂ ಪ್ರಾಮುಖ್ಯತೆ ಇದೆ. ರಾಮ್ ಚರಣ್ ಪಾತ್ರವು ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವುದು ಸಿನಿಮಾ ನೋಡಿದಾಗಲೇ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದ ನಾಯಕಿಯಾಗಿದ್ದಾರೆ.

ಪ್ರಮುಖ ಪಾತ್ರದಲ್ಲಿ ಶಿವಣ್ಣ

ಕನ್ನಡದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಶಿವಣ್ಣ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ 'ಚಿಕಿರಿ ಚಿಕಿರಿ' ಮತ್ತು 'ರಾಯ್ ರಾಯ್ ರಾ ರಾ' ಹಾಡುಗಳು ಈಗಾಗಲೇ ವಿಶ್ವಾದ್ಯಂತ ಸೂಪರ್ ಹಿಟ್ ಆಗಿವೆ. ಚಿತ್ರದ ಪೋಸ್ಟರ್, ಹಾಡುಗಳು ಮತ್ತು ಗ್ಲಿಂಪ್ಸ್ ವಿಡಿಯೋಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhare: ಕೆಡಿ ಜೆಡಿ ಪ್ಲ್ಯಾನ್ ತಲೆಕೆಳಗಾಯ್ತು… ಅಖಾಡಕ್ಕೆ ಇಳಿದೇ ಬಿಟ್ರು ಭೂಮಿ-ಗೌತಮ್
ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು