
ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಬುಚ್ಚಿಬಾಬು ನಿರ್ದೇಶನದ ಈ ಎಮೋಷನಲ್ ಆಕ್ಷನ್ ಡ್ರಾಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು ರಾಜ್ಯಗಳಲ್ಲಿ ನಾಲ್ಕು ದಿನಗಳಲ್ಲಿ 108 ಕೋಟಿ ಶೇರ್ ಗಳಿಸಿದ್ದು, ವಿಶ್ವಾದ್ಯಂತ 150 ಕೋಟಿ ಶೇರ್ ಸಮೀಪಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ 'ಥ್ಯಾಂಕ್ ಯು ಮೀಟ್' ಆಯೋಜಿಸಿತ್ತು.
ಈ 'ಥ್ಯಾಂಕ್ ಯು ಮೀಟ್' ಕಾರ್ಯಕ್ರಮದಲ್ಲಿ ರಾಮ್ ಚರಣ್, ನಿರ್ದೇಶಕ ಬುಚ್ಚಿಬಾಬು ಹಾಗೂ ನಿರ್ಮಾಪಕರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ರಾಮ್ ಚರಣ್, 'ಪೆದ್ದಿಯಂತಹ ಸಿನಿಮಾ ಮಾಡಲು ಯಾರೂ ನನ್ನನ್ನು ಒತ್ತಾಯಿಸಲಿಲ್ಲ. ನಾನೇ ಸ್ವತಃ ನಿರ್ಧರಿಸಿ ಮಾಡಿದ್ದು. ನಾನು ಇಷ್ಟಪಟ್ಟು ಮಾಡಿದ ಕೆಲಸಕ್ಕೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದು ಖುಷಿ ತಂದಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರಿಗೆ ತಲೆಬಾಗಿ ಧನ್ಯವಾದ ಹೇಳುತ್ತೇನೆ' ಎಂದರು.
ನಾನು ಪ್ರಸಾದ್ ಐಮ್ಯಾಕ್ಸ್‌ನಲ್ಲಿ ಈ ಸಿನಿಮಾ ನೋಡಿದೆ. ಅದು ಕ್ಲಾಸ್ ಥಿಯೇಟರ್ ಅಲ್ವಾ, ಪ್ರೇಕ್ಷಕರು ಸೈಲೆಂಟ್ ಆಗಿ ಇರ್ತಾರೆ ಅಂದ್ಕೊಂಡಿದ್ದೆ. ಆದರೆ, ಅಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಂತೆ ಪ್ರತಿ ಸೀನ್‌ಗೂ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯುತ್ತಿದ್ದರು. ಬುಚ್ಚಿಬಾಬು ಈ ಕಥೆ ಹೇಳಿದಾಗ, ನಾನು ಮನಸ್ಪೂರ್ತಿಯಾಗಿ ಅವರನ್ನು ತಬ್ಬಿಕೊಂಡಿದ್ದೆ' ಎಂದು ರಾಮ್ ಚರಣ್ ಹೇಳಿದರು.
ಆದರೆ, ಇದು ತುಂಬಾ ರಿಸ್ಕ್ ಇರುವ ಕಥೆ ಅಂತ ಆಮೇಲೆ ಅರ್ಥವಾಯಿತು. ಈ ಸಿನಿಮಾ ಹಿಟ್ ಅಥವಾ ಫ್ಲಾಪ್, ಎರಡರಲ್ಲಿ ಏನಾದರೂ ಆಗಬಹುದು ಅಂದುಕೊಂಡಿದ್ದೆ. ಆದರೆ ಈಗ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದ್ರೆ, ಮನಸ್ಪೂರ್ತಿಯಾಗಿ, ಶುದ್ಧ ಮನಸ್ಸಿನಿಂದ ಯಾರು ಕಷ್ಟಪಟ್ಟು ಕೆಲಸ ಮಾಡುತ್ತಾರೋ ಅವರಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಅದು 'ಪೆದ್ದಿ' ಚಿತ್ರದ ಮೂಲಕ ಸಾಬೀತಾಗಿದೆ' ಎಂದು ರಾಮ್ ಚರಣ್ ತಿಳಿಸಿದರು.
ನಿರ್ದೇಶಕ ಬುಚ್ಚಿಬಾಬು ಮಾತನಾಡಿ, 'ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಪ್ರಾಮಾಣಿಕವಾಗಿ ಒಂದು ಕಥೆ ಹೇಳಬೇಕು ಅಂದುಕೊಂಡೆ. ಭಾರತದೊಂದಿಗೆ ಸಂಪರ್ಕವೇ ಇಲ್ಲದ ಅನೇಕ ಹಳ್ಳಿಗಳಿವೆ. ಆ ಹಳ್ಳಿಗಳಲ್ಲಿ ಎಷ್ಟೋ ಪ್ರತಿಭಾವಂತರಿದ್ದಾರೆ. ಹಳ್ಳಿಗಳಲ್ಲಿ ಸುಲಭವಾಗಿ ಭಾರವಾದ ಮೂಟೆಗಳನ್ನು ಹೊರುವವರನ್ನು ನೋಡಿದ್ದೇನೆ. ಅವರು ಭಾರತದ ಪರವಾಗಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾಗವಹಿಸಿದರೆ ಪದಕ ಗೆಲ್ಲಬಹುದು ಅನಿಸುತ್ತಿತ್ತು. ಹಾಗೆಯೇ, ಯಾವುದೇ ಸೇಫ್ಟಿ ಇಲ್ಲದೆ ಸಮುದ್ರದಲ್ಲಿ ಈಜುವವರನ್ನು ನೋಡಿದ್ದೇನೆ. ಅವರೆಲ್ಲರ ಕಥೆಯೇ ಈ 'ಪೆದ್ದಿ' ಚಿತ್ರ' ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.