'ತಿಮ್ಮನ ಮೊಟ್ಟೆಗಳು' ಚಿತ್ರ ಈಗ 'ಅಮೇಜಾನ್ ಪ್ರೈಮ್' OTTಯಲ್ಲಿ ವೀಕ್ಷಣೆಗೆ ಲಭ್ಯ!

Published : Aug 13, 2025, 11:09 PM IST
Thimmana Mottegalu

ಸಾರಾಂಶ

ಆ ವ್ಯಂಗ್ಯಭರಿತ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳುವ ತಿಮ್ಮನ ದೈನ್ಯಭಾವದ ಬಡವನೊಬ್ಬ ಕೊಂಚ ಬೆಳವಣಿಗೆ ಕಾಣುತ್ತಾನೆ ಎಂದಾಗ ಕೇಂದ್ರೀಕೃತ ವ್ಯವಸ್ಥೆಯೊಂದು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ನೈಜತೆಯಿಂದ ವಿವರಿಸುತ್ತದೆ. ಕಾಳಿಂಗ ಸರ್ಪದ ವಿಚಾರದಲ್ಲಿ ತಿಮ್ಮನ..

ಇದು ರಕ್ಷಿತ್ ತೀರ್ಥಹಳ್ಳಿ (Rakshith Thirthahalli) ಮೊಟ್ಟೆಗಳ ಕಥೆ. ಹೀಗೆ ಹೇಳಿದರೆ ಹಲವರಿಗೆ ಗೊತ್ತಾಗಿರಬಹುದು. ಕಳೆದ ಜೂನ್ 27ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ಪಡೆದಿದ್ದ 'ತಿಮ್ಮನ ಮೊಟ್ಟೆಗಳು' ಚಿತ್ರ 'ಅಮೇಜಾನ್ ಪ್ರೈಮ್ ವಿಡಿಯೋ' ott ಯಲ್ಲಿ ಈ ವಾರ ಬಿಡುಗಡೆಯಾಗಿ ಜನಮನ್ನಣೆ ಪಡೆಯುತ್ತಿದೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಮತ್ತು ಆದರ್ಶ್ ಅಯ್ಯಂಗಾರ್ ನಿರ್ಮಾಣ ಚಿತ್ರಕ್ಕಿದ್ದು ಕಾಳಿಂಗ ಹಾವು ಮತ್ತು ಮನುಷ್ಯನ ಸಂಬಂದವನ್ನು ಪ್ರಕೃತಿ ಜೊತೆಗೆ ಚಿತ್ರಿಸಲಾಗಿದೆ.

ಹೌದು, ತಿಮ್ಮನ ಮೊಟ್ಟೆಗಳು ಈಗ ಒಟಿಟಿಯಲ್ಲಿ ಸಿನಿಮಾಪ್ರೇಮಿಗಳ ಮನಸೂರೆಗೊಳ್ಳುತ್ತಿದೆ. ಕಾರಣ, ಯಾವುದೋ ಕಾರಣಕ್ಕೆ ಅಂದು ಥಿಯೇಟರ್‌ಗೆ ಬರಲಾಗದೇ ಒಂದು ಒಳ್ಳೆಯ ಸಿನಿಮಾ ಮಿಸ್ ಮಾಡಿಕೊಂಡಿದ್ದ ಸಿನಿಮಾಪ್ರಿಯರು ಈಗ ಒಟಿಟಿಯಲ್ಲಿ ನೋಡಿ ಖುಷಿ ಅನುಭವಿಸುತ್ತಿದ್ದಾರೆ. ಈ ಚಿತ್ರವು ಮನುಷ್ಯ ಹಾಗೂ ಪ್ರಾಣಿಗಳ, ಅದರಲ್ಲೂ ಮುಖ್ಯವಾಗಿ ಕಾಳಿಂಗ ಸರ್ಪದ ಬಗ್ಗೆ ಮಾಹಿತಿ ಹಾಗೂ ಕಥೆಯಲ್ಲಿ ಇನ್ನೇನೋ ಹೆಚ್ಚಿನ ಆದ್ಯತೆ ಇರುವ ಸಿನಿಮಾ.

ತಿಮ್ಮನ ಮೊಟ್ಟೆಗಳು ಸಿನಿಮಾದಲ್ಲಿ ಬಹುಮುಖ್ಯವಾಗಿ ಬರುವುದು ಮೂರು ವಿಚಾರಗಳು. 1. ಮಲೆನಾಡಿನ ಮಳೆಗಾಲದ ಚಿತ್ರ 2. ಕಾಳಿಂಗ ಸರ್ಪಗಳು, ಪಶ್ಚಿಮಘಟ್ಟಗಳ ಜೀವ ವೈವಿಧ್ಯ 3. ಮನುಷ್ಯ ಬದುಕಿನ ಸಂಘರ್ಷಗಳು. ಜೊತೆಗೆ ಇಲ್ಲಿನ ಜನಜೀವನದ ಸೂಕ್ಷ್ಮಗಳನ್ನೂ ಚಿತ್ರ ಹೇಳುತ್ತದೆ. ಇದರಲ್ಲಿ, ಕೇಂದ್ರ ಪಾತ್ರವಾಗಿರುವ ತಿಮ್ಮ ತನ್ನ ಮನೆ ಎದುರಿನ ಗುಡ್ಡವನ್ನು ಸಮತಟ್ಟು ಮಾಡಿ, ಅಡಿಕೆ ಸಸಿ ಹಾಕಲು ಹೊರಟ ಸುದ್ದಿಯನ್ನು ಧಣಿಗಳು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಳ್ಳುವುದು.

ಆ ವ್ಯಂಗ್ಯಭರಿತ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳುವ ತಿಮ್ಮನ ದೈನ್ಯಭಾವದ ಬಡವನೊಬ್ಬ ಕೊಂಚ ಬೆಳವಣಿಗೆ ಕಾಣುತ್ತಾನೆ ಎಂದಾಗ ಕೇಂದ್ರೀಕೃತ ವ್ಯವಸ್ಥೆಯೊಂದು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ನೈಜತೆಯಿಂದ ವಿವರಿಸುತ್ತದೆ. ಕಾಳಿಂಗ ಸರ್ಪದ ವಿಚಾರದಲ್ಲಿ ತಿಮ್ಮನ ಸಂಘರ್ಷಗಳನ್ನೂ ಚಿತ್ರ ಪರಿಣಾಮಕಾರಿಯಾಗಿ ಹೇಳಿದೆ. ‘ದೈವದ ಭಯ’ದ ರೂಪಕ ನಮಗೆ ‘ಚೋಮನ ದುಡಿ’ ಕಥೆಯ ಸನ್ನಿವೇಶವೊಂದನ್ನು ನೆನಪಿಸುತ್ತದೆ.

ಇಲ್ಲಿ ಬರುವ ಧಣಿಯ ಪಾತ್ರ ಏಕಕಾಲಕ್ಕೆ ಪ್ರಾಜ್ಞನೊಬ್ಬನ ಸೂಕ್ಷ್ಮ ಮತ್ತು ಅಜ್ಞಾನಗಳೆರಡನ್ನೂ ತೋರಿಸಿದೆ. ಕಥೆಯ ವಿಚಾರಕ್ಕೆ ಬಂದರೆ ಮಲೆನಾಡಿನ ಕಾಡುಗಳಲ್ಲಿನ ಕಾಳಿಂಗ ಸರ್ಪಗಳ ಸಂರಕ್ಷಣೆಗೆಂದು ಬಂದ ರೀಸರ್ಚ್‌ ತಂಡವೊಂದು ತಿಮ್ಮನಿಗೆ ಮುಖಾಮುಖಿಯಾಗುತ್ತದೆ. ಕಾಳಿಂಗ ಸರ್ಪದ ಮೊಟ್ಟೆಗಳನ್ನು ತೋರಿಸುವ ಟಾಸ್ಕ್‌ ಕೊಡುತ್ತದೆ. ಅದಕ್ಕೆ ದೊಡ್ಡ ಮೊತ್ತದ ಹಣದ ಆಮಿಷವನ್ನೂ ಕೊಡುತ್ತದೆ.

ಮಲೆನಾಡಿನ ಮಹಾಮಳೆಗೆ ತನ್ನ ಬಡಜೋಪಡಿಯನ್ನು ಉಳಿಸಿಕೊಳ್ಳಲು ಒದ್ದಾಡುವ ತಿಮ್ಮ ಈ ಟಾಸ್ಕ್‌ ಅನ್ನು ಒಪ್ಪಿಕೊಳ್ಳುತ್ತಾನೆ. ಕಾಳಿಂಗ ಸರ್ಪದ ಮೊಟ್ಟೆಗಳ ಮೇಲೆ ನಡೆಯುವ ಪ್ರಯೋಗವೇನು? ಅದಕ್ಕೆ ಸ್ಥಳೀಯರು ಏನು ಮಾಡ್ತಾರೆ? ಕಥೆಯ ನಿರ್ಣಾಯಕ ಹಂತದಲ್ಲಿ ಪರಿಸ್ಥಿತಿ, ಮನಸಾಕ್ಷಿ ಇವರೆಡರಲ್ಲಿ ತಿಮ್ಮನ ಆಯ್ಕೆ ಯಾವುದು? ಈ

ತಿಮ್ಮನ ಮೊಟ್ಟೆಗಳು ಸಿನಿಮಾ ಮೂಲಕ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ? ಇವೆಲ್ಲವನ್ನೂ ತಿಳಿಯಲು ಈ ಸಿನಿಮಾ ನೋಡಲೇಬೇಕು. ಹೇಗೂ ಒಟಿಟಿಯಲ್ಲಿ ಇದೆ, ತಡ ಯಾಕೆ? ನೋಡಿ..

ತಾರಾಗಣ: ಕೇಶವ್‌ ಗುಟ್ಟಳಿಕೆ, ಆಶಿಕಾ ಸೋಮಶೇಖರ್‌, ಪ್ರಗತಿ ಪ್ರಭು, ಸುಚೇಂದ್ರ ಪ್ರಸಾದ್‌

ನಿರ್ದೇಶನ: ರಕ್ಷಿತ್‌ ತೀರ್ಥಹಳ್ಳಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!