ಈ ಐದು ಕಾರಣಕ್ಕೆ ನೀವು ಮಿಸ್‌ ಮಾಡದೆ ರಜನಿಕಾಂತ್‌, ಲೋಕೇಶ್‌ ಕನಕರಾಜ್ Coolie Movie ನೋಡಲೇಬೇಕು!

Published : Aug 13, 2025, 09:32 PM IST
Rajinikanth Coolie Star Cast Fees

ಸಾರಾಂಶ

Rajinikanth Coolie Movie: ಸೂಪರ್‌ಸ್ಟಾರ್ ರಜನಿಕಾಂತ್, ಲೋಕೇಶ್ ಕನಗರಾಜ್ ಅವರ Colie Movie ರಿಲೀಸ್‌ ಆಗಲಿದೆ. ಹಾಗಾದರೆ ಯಾವ ಕಾರಣಕ್ಕೆ ಈ ಸಿನಿಮಾ ನೋಡಬೇಕು? 

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಶನ್‌ನ ʼಕೂಲಿʼ ಸಿನಿಮಾ  (Rajinikanth Coolie Movie) ಬಗ್ಗೆ ತುಂಬ ನಿರೀಕ್ಷೆಯಿದೆ. ಆಗಸ್ಟ್ 14 ರಂದು ಜಾಗತಿಕವಾಗಿ ಈ ಸಿನಿಮಾ ಬಿಡುಗಡೆಯಾಗಲಿದೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಟಿಕೆಟ್‌ ಬುಕ್ಕಿಂಗ್‌ ಆಗಿದೆ. ಹಾಗಾದರೆ ಯಾವ ಕಾರಣಕ್ಕೆ ಈ ಸಿನಿಮಾವನ್ನು ನೋಡಬೇಕು?

ರಜನಿಕಾಂತ್‌ ಕ್ಲಾಸಿಕ್ ಶೈಲಿ ಕಂಬ್ಯಾಕ್!

‌ʼಕೂಲಿʼ ಸಿನಿಮಾದ ಅತಿದೊಡ್ಡ ಆಕರ್ಷಣೆಯೆಂದರೆ ರಜನಿಕಾಂತ್. ಈ ಸಿನಿಮಾ ಮೂಲಕ ತಲೈವಾ ತಮ್ಮ ಕ್ಲಾಸಿಕ್ ಶೈಲಿಯಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ಭಯಾನಕ ನಡಿಗೆ, ಸಂಭಾಷಣೆಯ ಶೈಲಿ, ಸ್ವಾಗ್ ನೋಡಿದರೆ ಪಕ್ಕಾ 80-90 ರ ದಶಕದ ರಜನಿಯನ್ನು ನೆನಪಿಸುತ್ತವೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್‌ರ ಪಾತ್ರವು 1983 ರ ತಮಿಳು ಸಿನಿಮಾ ಕೂಲಿಯೊಂದಿಗೆ ಕನೆಕ್ಟ್‌ ಆಗಿರುವ ಸಾಧ್ಯತೆಯಿದೆ. ಉತ್ತಮ ಪಾತ್ರದೊಂದಿಗೆ ರಜನಿ ಕಂಬ್ಯಾಕ್‌ ಮಾಡಲಿದ್ದಾರೆ.

ಲೋಕೇಶ್ ಕನಗರಾಜ್‌ರ ಕಥೆ

ತಮ್ಮ ಸಿನಿಮಾಗಳಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಒಂದಿಷ್ಟು ಆಶ್ಚರ್ಯಕರ ಅಂಶಗಳನ್ನು ಸೇರಿಸುತ್ತಾರೆ. ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಸರ್ಪ್ರೈಸಿಂಗ್‌ ವಿಷಯಗಳು, ಟ್ವಿಸ್ಟ್‌ ಇವೆ ಎಂದು ಹೇಳಿದ್ದಾರೆ. ಕ್ರಿಯೇಟಿವ್‌ ಆಗಿರೋ ದೃಶ್ಯಗಳು, ರೋಮಾಂಚನಕಾರಿ ಕ್ಷಣಗಳು, ಕಥೆಯ ನಿರೂಪಣೆ ಎಲ್ಲವೂ ಚೆನ್ನಾಗಿದೆ. ಇವೆಲ್ಲವೂ ಥಿಯೇಟರ್‌ನಲ್ಲಿ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡುತ್ತ,ವೆ. ಈ ಸಿನಿಮಾ ಮೂಲಕ ಲೋಕೇಶ್ ಕನಗರಾಜ್ ಇನ್ನೊಂದು ಹಿಟ್‌ ಕೊಡಬಹುದು.

ದೊಡ್ಡ ತಾರಾಗಣವಿರುವ ಸಿನಿಮಾ

ಈ ಸಿನಿಮಾದಲ್ಲಿ ರಜನಿಕಾಂತ್, ಆಮಿರ್ ಖಾನ್, ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಶೃತಿ ಹಾಸನ್, ಅವಿನಾಶ್, ಸೌಬಿನ್ ಶಾಹಿರ್ ನಟಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ತಾರಾಗಣ ಇರೋದರಿಂದ ಪಾತ್ರಗಳು ಇನ್ನಷ್ಟು ಗಟ್ಟಿಯಾಗಿ ಸಿನಿಮಾ ಚೆನ್ನಾಗಿ ಮೂಡಿಬರಬಹುದು.

ಅನಿರುದ್ಧ್ ರವಿಚಂದರ್‌ ಸಂಗೀತದ ಜಾದು

ರಜನಿ-ಲೋಕೇಶ್ ಜೋಡಿಗಾಗಿ‌ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಅಭಿಮಾನಿಗಳಲ್ಲಿ ಹಿಟ್ ಆಗಿದ್ದು, BGM ಅತಿದೊಡ್ಡ ಶಕ್ತಿಯಾಗಿರಲಿದೆ. ಅನಿರುದ್ಧ್‌ರ ಸಂಗೀತದ ಜೊತೆಗೆ ಸಿನಿಮಾ ದೃಶ್ಯಗಳು ವೀಕ್ಷಕರಿಗೆ ದೊಡ್ಡ ರೋಮಾಂಚನವನ್ನು ನೀಡುತ್ತದೆ. ಈ ಸಿನಿಮಾಕ್ಕಾಗಿ ವಿಶೇಷ ಥೀಮ್ ಟ್ರ್ಯಾಕ್‌ಗಳನ್ನು ರಚಿಸಲಾಗಿದೆ.

ಕೂಲಿ ಸಿನಿಮಾವು Lokesh Cinematic Universe ಸೇರುತ್ತದೆಯೇ ಎಂಬ ಅನುಮಾನ ಮೂಡಿದೆ. ಲೋಕೇಶ್ ಅವರು ಇದನ್ನು ಸ್ಪಷ್ಟವಾಗಿ ತಿಳಿಸದಿದ್ದರೂ, ಒಂದಷ್ಟು ಗುಸುಗುಸುಗಳಿವೆ. ಇದು LCU ಅಡಿಯಲ್ಲಿ ಬಿಡುಗಡೆಯಾದ ಸಿನಿಮಾವಾದರೂ, ಅಭಿಮಾನಿಗಳಿಗೆ ಖುಷಿಯಾಗುವ ಅಂಶ ಪಕ್ಕಾ ಇದೆ. ಇದನ್ನು ಥಿಯೇಟರ್‌ನಲ್ಲಿ ನೋಡಿಯೇ ಆನಂದಿಸಬೇಕು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?