
ಕರ್ನಾಟಕ ಸರ್ಕಾರದ 2021ನೇ ಸಾಲಿನ ರಾಜ್ಯ ಪ್ರಶಸ್ತಿ
ಕರ್ನಾಟಕ ಸರ್ಕಾರದ 2021ನೇ ಸಾಲಿನ ಕನ್ನಡ ಚಲನಚಿತ್ರ ರಾಜ್ಯ ಪ್ರಶಸ್ತಿ (State Award- 2021) ಘೋಷಣೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಪ್ರಶಸ್ತಿಗಳು ತಡವಾಗಿ ಘೋಷಣೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ಇದೀಗ 2021ರ ಸಾಲಿನ ಪ್ರಶಸ್ತಿ ಘೋಷಿಸಲಾಗಿದ್ದು, ಈ ಪ್ರಶಸ್ತಿ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡಿ..
ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ - ಚಾರ್ಲಿ 777
ಅತ್ಯುತ್ತಮ ನಟಿ ಅರ್ಚನಾ ಜೋಯಿಷ್ - ಮ್ಯೂಟ್
ಅತ್ಯುತ್ತಮ ಮೊದಲ ಚಿತ್ರ- ದೊಡ್ಡಹಟ್ಟಿ ಬೈರೇಗೌಡ
ಅತ್ಯುತ್ತಮ ಮನರಂಜನಾ ಚಿತ್ರ - ಯುವರತ್ನ
ಹೀಗೇ ಪ್ರಶಸ್ತಿ ಪಟ್ಟಿ ಸಾಗುತ್ತಿದೆ. ಅನೇಕ ಯುವ ಪ್ರತಿಭೆಗೆ ಆ ಸಾಲಿನ ಪ್ರಶಸ್ತಿಗಳು ಲಭ್ಯವಾಗಿವೆ. ಅದರಲ್ಲಿ ಮುಖ್ಯವಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ 'ಚಾರ್ಲಿ 777' ಸಿನಿಮಾಗೆ ನಿರೀಕ್ಷೆಯಂತೆಯೇ'ಶ್ರೇಷ್ಠ ನಟ' ಪ್ರಶಸ್ತಿ ಲಭ್ಯವಾಗಿದೆ. ಇನ್ನು ದಿವಂಗತ ಪುನೀತ್ ರಾಜ್‌ಕುಮಾರ್ ನಟಿಸಿರುವ 'ಯುವರತ್ನ' ಸಿನಿಮಾಗೆ 'ಶ್ರೇಷ್ಠ ಮನರಂಜನಾ ಚಿತ್ರ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ಶ್ರೇಷ್ಟ ನಟಿ ಪ್ರಶಸ್ತಿಯನ್ನು 'ಮ್ಯೂಟ್' ಚಿತ್ರಕ್ಕಾಗಿ ನಟಿ ಅರ್ಚನಾ ಜೋಯಿಸ್ ಪಡೆದುಕೊಂಡಿದ್ದಾರೆ.
ಕರ್ನಾಟಕ ಸರ್ಕಾರ ಪ್ರತಿವರ್ಷ ಕನ್ನಡ ಸಿನಿಮಾಗಳಿಗಾಗಿ ಕೊಡುವ ರಾಜ್ಯ ಪ್ರಶಸ್ತಿಯಿದು. ಆದರೆ, ಈಗ ಬಂದಿರುವ ಈ ಪಟ್ಟಿ 2021ರ ರಾಜ್ಯ ಪ್ರಶಸ್ತಿಯದು ಎಂಬುದು ಗಮನಸಿಬೇಕಾದ ಸಂಗತಿ. ಈ ಸ್ಟೋರಿಯಲ್ಲಿ ಕೆಳಗೆ ರಾಜ್ಯ ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ ಲಭ್ಯವಿರುವ ಪಟ್ಟಿ ಲಭ್ಯವಿದೆ, ನೋಡಿ ಆನಂದಿಸಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.