ಮೇಕಪ್​ ಮಾಡಿಕೊಂಡು ನಟನ ಅಂತಿಮ ಸಂಸ್ಕಾರಕ್ಕೆ ಬಂದ ರಾಖಿ ಸಾವಂತ್​: ಎಡವಟ್ಟಾಗಿದ್ದು ತಿಳಿದು ಏನಂದ್ರು

Published : Sep 30, 2026, 10:32 PM IST
Rakhi Sawant

ಸಾರಾಂಶ

ಹಿರಿಯ ನಟ ಮುಷ್ತಾಕ್ ಖಾನ್ ಅವರು ಯಕೃತ್ತಿನ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕೆ ನಟಿ ರಾಖಿ ಸಾವಂತ್ ಫುಲ್ ಮೇಕಪ್‌ನಲ್ಲಿ ಬಂದಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಶೂಟಿಂಗ್‌ನಿಂದ ನೇರವಾಗಿ ಬಂದಿದ್ದಾಗಿ ರಾಖಿ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ: ವೆಲ್‌ಕಮ್, ಆಶಿಕಿ, ಮುಜ್‌ಸೆ ಶಾದಿ ಕರೋಗಿ ಮತ್ತು ಹಮ್ ಹೈ ರಹಿ ಪ್ಯಾರ್ ಕೆ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಹಿರಿಯ ನಟ ಮುಷ್ತಾಕ್ ಖಾನ್ ಇದೇ 24 ರಂದು ತಮ್ಮ 56 ನೇ ವಯಸ್ಸಿನಲ್ಲಿ ಯಕೃತ್ತಿನ ಕ್ಯಾನ್ಸರ್ ವಿರುದ್ಧ ಹೋರಾಡಿ ನಿಧನರಾದರು. ಹೊಟ್ಟೆ ನೋವಿನ ಸಮಸ್ಯೆ ಇದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ಅವರಿಗೆ ಕ್ಯಾನ್ಸರ್ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಕಳೆದ ಕೆಲವು ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಅವರ ಪುತ್ರ ಮೊಹ್ಸಿನ್ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಲವಾರು ಸೆಲೆಬ್ರಿಟಿಗಳು ಅವರ ಅಂತಿಮ ದರ್ಶನಕ್ಕೆ ಹೋಗಿದ್ದರು. ಆ ಸಮಯದಲ್ಲಿ ವಿವಾದಿತ ನಟಿ ರಾಖಿ ಸಾವಂತ್​, ಫುಲ್ ಮೇಕಪ್​ ಮಾಡಿಕೊಂಡು ಅಂತಿಮ ದರ್ಶನಕ್ಕೆ ಬಂದಿದ್ದರು. ಅವರನ್ನು ನೋಡಿ ಅಲ್ಲಿ ಬಂದವರೆಲ್ಲಾ ಶಾಕ್​ ಆದರು. ಪಾಪರಾಜಿಗಳು ಇನ್ನು ಕೇಳಬೇಕೆ? ಇಂಥದ್ದನ್ನೇ ಹುಡುಕುತ್ತಿರುವ ಅವರ ಕ್ಯಾಮೆರಾಗಳು ನಟಿ ರಾಖಿ ಸಾವಂತ್​ ಅವರನ್ನೇ ಫೋಕಸ್​ ಮಾಡಿದವು.

ಎಡವಟ್ಟಾಗಿದ್ದು ತಿಳಿಯಿತು...

ನಂತರ ರಾಖಿಗೆ ಏನೋ ಎಡವಟ್ಟಾಗಿದೆ ಎಂದು ತಿಳಿದಿದೆ. ಅಷ್ಟಕ್ಕೂ ಬಹುತೇಕ ಸೆಲೆಬ್ರಿಟಿಗಳನ್ನು ಮೇಕಪ್​ ರಹಿತವಾಗಿ ನೋಡಿದರೆ ಬಹುಶಃ ಯಾರೂ ಗುರುತು ಹಿಡಿಯುವುದು ಕಷ್ಟ ಎನ್ನುವ ಹಾಗಿರುತ್ತದೆ ಅವರ ಅಸಲಿ ರೂಪ. ಅದಕ್ಕಾಗಿಯೇ ಮೇಕಪ್​ ಇಲ್ಲದೇ ಹೋಗುವಾಗ ಎಲ್ಲಿ ಪಾಪರಾಜಿಗಳು ಕಂಡುಬಿಡುತ್ತಾರೆಯೋ ಎಂದು ಮುಖ ಮುಚ್ಚಿಕೊಂಡು ಹೋಗುತ್ತಾರೆ. ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ಸಹಜ ಸೌಂದರ್ಯ ಇರುವ ಕಾರಣ, ಇನ್ನು ಬೆರಳಣಿಕೆಯಷ್ಟು ಮಂದಿ ಮೇಕಪ್​ ಇಲ್ಲದೆಯೂ ಸ್ವಲ್ಪನಾದರೂ ನೋಡಬಹುದು ಎನ್ನುವ ಕಾರಣದಿಂದ ಬಿಂದಾಸ್​ ಆಗಿ ಹೋಗುವುದು ಇದೆ.

ರಾಖಿ ಏನಂದ್ರು?

ಇದೀಗ ರಾಖಿ ಸಾವಂತ್​ ಅವರ ಮೇಕಪ್​ ನೋಡಿ ಜನರು ಪ್ರಶ್ನಿಸಿದಾಗ, ಎಲ್ಲರಿಗೂ ಕೈಮುಗಿದು ರಾಖಿ, ಕ್ಷಮಿಸಿ ನಾನು ಶೂಟಿಂಗ್​ಗೆ ಹೋಗಿದ್ದೆ. ಅಲ್ಲಿ ಮೇಕಪ್​ ಮಾಡಿಕೊಂಡಿದ್ದೆ. ಈ ಸುದ್ದಿ ತಿಳಿದ ತಕ್ಷಣ ಅಲ್ಲಿಂದ ನೇರವಾಗಿ ಬಂದೆ ಎಂದಿದ್ದಾರೆ. ಅಷ್ಟಕ್ಕೂ ಕೆಲಸ ಇಲ್ಲದೇ ಹುಚ್ಚುಚ್ಚರಂತೆ ಟ್ರೋಲ್​ಗೆ ಒಳಗಾಗುವ ರೀಲ್ಸ್​ ಮಾಡುತ್ತಿರುವ ರಾಖಿ ಸಾವಂತ್​ಗೆ ಅದ್ಯಾವ ಶೂಟಿಂಗ್ ಇತ್ತು ಎಂದು ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವರು ಸುಳ್ಳು ಹೇಳಿದ್ರೂ ರಾಖಿ ಕ್ಯೂಟ್​ ಆಗಿ ಹೇಳುವ ಕಾರಣ, ನನಗೆ ಈಕೆಯಂದ್ರೆ ಇಷ್ಟ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

15 ಮನೆಯಲ್ಲಿ ಅಮ್ಮನ ದುಡಿಮೆ, ಅವರಿವರ ಹಳೆ ಬಟ್ಟೆ, ಚಪ್ಪಲಿಗಳೇ ಶ್ರೀರಕ್ಷೆ: ನಟಿ ವಾಣಿ ಗೌಡ ನೆನೆದ ದಿನಗಳು
"ಬಿಗ್ ಬಾಸ್ ಮನೆಯಲ್ಲಿ ರಾಕ್ಷಸರಂತಾಗಿದ್ದರು.. ಆ ಶೋ ನೋಡಲ್ಲ.." ಕವಿತಾ ಗೌಡ ಓಪನ್ ಟಾಕ್