
ಸದ್ಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಡುತ್ತಿರುವ 'ರಾಜು ಕನ್ನಡ ಮೀಡಿಯಂ' ಚಿತ್ರಕ್ಕೆ ವಿದೇಶಿ ಪಯಣದ ಭಾಗ್ಯ ದೊರಕಿದೆ. ನರೇಶ್ ಕುಮಾರ್ ನಿರ್ದೇಶನದ, ಕೆ ಎಸುರೇಶ್ ನಿರ್ಮಾಣದ ಹಾಗೂ ಸುದೀಪ್, ಗುರುನಂದನ್, ಅವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಜತೆಯಾಗಿ ನಟಿಸಿರುವ ಈ ಸಿನಿಮಾ ಓವರ್ ಸೀಸ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೇ ವಾರದಿಂದ ಅಮೆರಿಕ, ಸಿಂಗಾಪುರ್, ಕೆನಾಡ, ಅಸ್ಟೇಲಿಯಾ ಹೀಗೆ ನಾಲ್ಕು ದೇಶಗಳ ೩೦ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಓವರ್ ಸೀಸ್‌ನಲ್ಲಿ ತೆರೆಗೆ ಬರುವ ಸಿನಿಮಾಗಳು ಶನಿವಾರ ಮತ್ತು ಭಾನುವಾರಗಳಿಗೆ ಸೀಮಿತಗೊಂಡಿರುತ್ತವೆ. ಆದರೆ, 'ರಾಜು ಕನ್ನಡ ಮೀಡಿಯಂ' ಸಿನಿಮಾ ಇಡೀ ವಾರ ಪ್ರದರ್ಶನಗೊಳ್ಳುತ್ತಿದ್ದು, ವಾರದಲ್ಲಿ ಯಾವ ದಿನ ಬೇಕಾದರೂ ನೋಡಬಹುದು.
ರಾಜು ಕನ್ನಡ ಮೀಡಿಯಂನಲ್ಲಿ ಕಿಚ್ಚನ ಪಾತ್ರವೇನು?
ಈಗಾಗಲೇ ಒಂದು ವಾರಕ್ಕೆ 30 ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಬುಕ್ ಆಗಿವೆ. ಇಲ್ಲಿ ಕನ್ನಡದ ರಾಜು ಹವಾ ಶುರುವಾಗಲಿದೆ. ಕನ್ನಡ ಭಾಷೆಯ ಮೇಲಿನ ಅಭಿಮಾನ, ಜತೆಗೆ ಕನ್ನಡವನ್ನೇ ನೆಚ್ಚಿಕೊಂಡವರು ನಗರಗಳಿಗೆ ಬಂದಾಗ ಆಗುವ ಸಮಸ್ಯೆಗಳ ಸುತ್ತಲಿನ ಕತೆ ಹಾಗೂ ನಟ ಸುದೀಪ್ ಅವರು ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿರುವ ಕಾರಣಕ್ಕೆ ಹೆಚ್ಚಿನ ಕಡೆ ಸಿನಿಮಾ ತೆರೆಗೆ ಬರುತ್ತಿದೆಯಂತೆ.
ಹಿಂದಿಯಲ್ಲಿಯೂ ರಾಜು ಕನ್ನಡ ಮೀಡಿಯಂ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.