
ಮುಂಬೈ(ನ.21): ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ರೋಬೋ 2.0 ಚಿತ್ರ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಭಾರೀ ಸುದ್ದಿಮಾಡಿದೆ. ರಜಿನಿ ಮತ್ತು ಶಂಕರ್ ಜೋಡಿ ಈ ಚಿತ್ರದ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾರೆ ಎಂದೇ ಹೇಳಲಾಗುತ್ತಿದೆ. ಹಾಲಿವುಡ್ಡನ್ನ ಮೀರಿಸುವಂತಹ ಗ್ರಾಫಿಕ್ಸ್ ಚಿತ್ರದಲ್ಲಿದೆ.
ಅಂದಹಾಗೆ, ಈ ಚಿತ್ರದ ಹೀರೋ ರಜಿನಿ ಅಲ್ಲವಂತೆ. ಈ ಮಾತನ್ನ ಸ್ವತಃ ರಜಿನಿಕಾಂತ್ ಹೇಳಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಜಿನಿ, ಚಿತ್ರದ ಹೀರೋ ನಾನಲ್ಲ, ನಾನು ವಿಲನ್. ಅಕ್ಷಯ್ ಕುಮಾರ್ ಈ ಚಿತ್ರದ ಹೀರೋ ಎಂದಿದ್ದಾರೆ. ರಜಿನಿಯ ಈ ಮಾತು ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲವನ್ನ ಇಮ್ಮಡಿಗೊಳಿಸಿದೆ.
2010ರಲ್ಲಿ ತೆರೆ ಕಂಡ ರಜಿನಿಕಾಂತ್ ಮತ್ತು ಐಶ್ವರ್ಯ ರೈ ನಟಿಸಿದ್ದ ರೋಬೋ ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಆಮಿ ಜಾಕ್ಸನ್ ಇಲ್ಲಿ ಗಮನ ಸೆಳೆಯಲಿದ್ಧಾರೆ. ಅಕ್ಷಯ್ ಕುಮಾರ್ ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.