ಟೋಬಿ ಸಿನಿಮಾ ಯಶಸ್ಸಿಗಾಗಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಮೊರೆ ಹೋದ ರಾಜ್‌ ಬಿ. ಶೆಟ್ಟಿ

By Sathish Kumar KH  |  First Published Aug 20, 2023, 3:33 PM IST

ಕರಾವಳಿಯ ಹುಡುಗ ರಾಜ್‌ ಬಿ. ಶೆಟ್ಟಿ, ತಮ್ಮ ಟೋಬಿ ಸಿನಿಮಾವನ್ನು ಗೆಲ್ಲಿಸುವಂತೆ ಹೊಸಪೇಟೆಯ ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.


ವಿಜಯನಗರ (ಆ.20): ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿಯ ಕೈ ಹಿಡಿದ್ರೆ, ಇನ್ನೂ ಅವರ ಹಾಗೆ ಹಿಡಿದ ನೆನೆಪು ಬರ್ತದೆ. ನನ್ನ ಮೊದಲ ಚಿತ್ರ ಒಂದು ಮೊಟ್ಟೆಯ ಕಥೆ ಗೆದ್ದಾಗ ಸಂಭ್ರಮ ಪಟ್ಟದ್ದು ಪುನೀತ್‌ ಅವರು ಕೈ ಹಿಡಿದಿದ್ದು ಈಗಲೂ ನೆನಪು ಆಗುತ್ತಿದೆ ಎಂದು ಟೋಬಿ ಚಿತ್ರದ ನಾಯಕನಟ ರಾಜ್‌ ಬಿ. ಶೆಟ್ಟಿ ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಜಿಲ್ಲಾಕೇಂದ್ರ ಹೊಸಪೇಟೆ ನಗರದಲ್ಲಿ ಟೋಬಿ ತಂಡ ಪ್ರಮೋಷನ್ ಮಾಡಲಾಯಿತು. ಹೊಸಪೇಟೆಯಲ್ಲಿ ಬೈಕ್‌ ರ್ಯಾಲಿ ಟೋಬಿ ತಂಡವು ಭರ್ಜರಿಯಾಗಿ ಪ್ರಮೋಷನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಟ ರಾಜ್ ಬಿ. ಶೆಟ್ಟಿಗೆ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಹೊಸಪೇಟೆಯ ಕಾಲೇಜು ರಸ್ತೆಯಿಂದ ಡಾ. ಪುನೀತ್ ರಾಜ್‍ಕುಮಾರ್ ವೃತ್ತದವರೆಗೆ ಬೈಕ್ ರ್ಯಾಲಿ ಮಾಡಲಾಯಿತು. ನಂತರ ಡಾ. ಪುನೀತ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಮಾಡಲಾಯಿತು. ಈ ವೇಳೆ ರಾಜ್‌ ಬಿ. ಶೆಟ್ಟಿ ಡಾ. ಪುನೀತ್ ರಾಜ್‍ಕುಮಾರ್ ಪುತ್ಥಳಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಮಾಲೆಯನ್ನು ಮಾಲಾರ್ಪಣೆ ಮಾಡಿದರು. ನಂತರ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ರಾಜ್‌ಬಿ ಶೆಟ್ಟಿಗೆ ಪುನೀತ್‌ ಜೊತೆಗೆ ತೆಗೆಸಿಕೊಂಡಿದ್ದ ಫೊಟೋಗಳನ್ನು ನೀಡಿದರು.

Tap to resize

Latest Videos

undefined

ದಲಿತರನ್ನು ನಿಂದಿಸುವ ಗಾದೆ ಹೇಳಿದ್ದ ನಟ ಉಪೇಂದ್ರನ ವಿರುದ್ಧ, ಬ್ರಾಹ್ಮಣ ಅಧಿಕಾರಿಯಿಂದಲೇ ಎಫ್‌ಐಆರ್‌ ದಾಖಲು..

ಯಾರು ಕೈ ಬಿಟ್ರೂ, ಹೊಸಪೇಟೆ ಜನ ಕೈಬಿಡೊಲ್ಲ: ಪುನೀತ್‌ ರಾಜ್‌ಕುಮಾರ್‌ ಪುತ್ಥಳಿಯ ಕೈ ಹಿಡುದುಕೊಂಡೇ ಮಾತನಾಡಿದ ರಾಜ್‌ ಬಿ. ಶೆಟ್ಟಿ, ಹೊಸಪೇಟೆ ಜನಕ್ಕೆ ನಾನು ಅಭಾರಿಯಾಗಿದ್ದೇನೆ. ಡಾ. ಪುನೀತ್ ರಾಜ್‍ಕುಮಾರ್ ಅವರ ಅಚ್ಚು ಮೆಚ್ಚಿನ ಊರಿದು. ಯಾರು ಕೈ ಬಿಟ್ರೂ ಹೊಸಪೇಟೆ ಜನ  ಕೈ ಬಿಡೋಲ್ಲಾ ಅಂದಿದ್ರು ಪುನೀತ್. ಹೊಸಪೇಟೆ ಜನರಿಗೆ ನಾವು ಅಭಾರಿಯಾಗಿದ್ದೇವೆ. ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿಯ ಕೈ ಹಿಡಿದ್ರೆ, ಇನ್ನೂ ಅವರದ್ದೇ ಕೈ ಹಿಡಿದ ನೆನೆಪು ಬರ್ತದೆ. ಅವರು ನನ್ನ ಕೈ ಹಿಡಿದಿದ್ದು ನೆನಪಾಗುತ್ತದೆ. ನನ್ನ ಮೊದಲ ಚಿತ್ರ ಒಂದು ಮೊಟ್ಟೆಯ ಕಥೆ ಗೆದ್ದಾಗ ಸಂಭ್ರಮ ಪಟ್ಟದ್ದು ನಮಗೆ ನೆನಪು ಇನ್ನೂ ಹಾಗೆ ಇದೆ ಎಂದು ಹೇಳಿದರು.

ಹೊಸಪೇಟೆ, ಬಳ್ಳಾರಿ ಹುಡುಗ್ರೂ ಬಂದು ಸಿನಿಮಾ ಮಾಡಿ: ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ ದೊಡ್ಡ ಅಭಿಮಾನಿ ಆಗಿದ್ದೇನೆ. ಬರೀ ಕರಾವಳಿ ಹುಡುಗರು ಅಷ್ಟೆ ಅಲ್ಲಾ, ಹೊಸಪೇಟೆ, ಬಳ್ಳಾರಿ ಹುಡುಗರು ಕೂಡ ಬಂದು ಸಿನಿಮಾ ಮಾಡಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದೆ. ಈ ಭಾಗದ ಕಥೆಗಳನ್ನು ಸಿನಿಮಾ ಮಾಡಬೇಕಿದೆ. ಇದೇ ಆ.25 ಕ್ಕೆ ನಮ್ಮ ಸಿನಿಮಾ ಟೋಬಿ ರಿಲೀಸ್ ಆಗುತ್ತದೆ. ಎಲ್ಲರೂ ಸಿನಿಮಾ ಮಂದಿರಕ್ಕೆ ಹೋಗಿ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. 

ಶ್ರಾವಣದಲ್ಲಿ ಮಾರಿ ಹಬ್ಬ ಮಾಡುತ್ತೆ ಸ್ಯಾಂಡಲ್‌ವುಡ್‌: ಸಿಕ್ಕಿದೆ ಮಾರಿಗೆ ದಾರಿ..ಶೆಟ್ರ 'ಟೋಬಿ' ಭಾರೀ ಅದ್ಧೂರಿ!

ಟೋಬಿಯ ಈ ಮಾರಿ ಹಬ್ಬಕ್ಕೆ ಅಪ್ಪು ಅಪ್ಪುಗೆ ಕೂಡ ಸಿಕ್ಕಿತ್ತು: ಈಗ ಶ್ರಾವಣ ಮಾಸ. ಈ ಶ್ರಾವಣ ಮಾಸದಲ್ಲಿ ಯಾರಾದ್ರು ಮಾರಿ ಹಬ್ಬ ಮಾಡೋಕೆ ಆಗುತ್ತಾ? ಕಂಡಿತ ಇಲ್ಲ. ಆದ್ರೆ ಸ್ಯಾಂಡಲ್‌ವುಡ್‌ (Sandalwood) ಬಿಗ್ ಸ್ಕ್ರೀನ್ ಮೇಲೆ ದೊಡ್ಡ ಮಾರಿ ಹಬ್ಬಕ್ಕೆ ದಾರಿ ಸಿಕ್ಕಿದೆ. ಅದೇ ಟೋಬಿ(Tobi) ಮಾರಿ ಹಬ್ಬ. ಇದೇ ಆಗಸ್ಟ್ 25ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಟೋಬಿ ಬೆಳ್ಳಿತೆರೆ ಮೇಲೆ ಎಂಟ್ರಿ ಕೊಡ್ತಿದೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಟೋಬಿಯ ಈ ಮಾರಿ ಹಬ್ಬಕ್ಕೆ ಅಪ್ಪು ಅಪ್ಪುಗೆ ಕೂಡ ಸಿಕ್ಕಿತ್ತು. ರಾಜ್ ಬಿ ಶೆಟ್ಟಿ(Raj B Shetty) ಇಂದು ಟೋಬಿಯಾಗಿ ಸಿನಿ ಪ್ರೇಕ್ಷಕರ ಕಣ್ಣಲ್ಲಿ ಹೊಳೆಯುತ್ತಿದ್ದಾರೆ. ಟೋಬಿ ಟ್ರೈಲರ್, ಫಸ್ಟ್‌ಲುಕ್‌ ಸ್ಯಾಂಪಲ್ಸ್ ನೋಡಿ ನಮ್ ಮೊಟ್ಟೆ ಸ್ಟಾರ್ ಈ ಭಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ ಅಂತ ಸಿನಿಮಾ ರಿಲೀಸ್ ಆಗೋ ಮೊದಲೇ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಆದ್ರೆ ಟೋಬಿ ಸ್ಟೋರಿ ಹಿಂದಿನ ಮತ್ತೊಂದು ಸತ್ಯ ಈಗ ರಿವೀಲ್ ಆಗಿದೆ. ಅದೇನ್ ಗೊತ್ತಾ ? ಟೋಬಿ ಸ್ಟೋರಿ ರಾಜ್ ಬಿ ಶೆಟ್ಟಿಯ ಮನ ಮುಟ್ಟೋ ಮೊದಲು ದೊಡ್ಮನೆ ಹುಡುಗ ಅಪ್ಪು ಕೇಳಿದ್ರಂತೆ. ಟೋಬಿಯ ಮಾರಿ ಹಬ್ಬದ ಕತೆ ಕೆತ್ತಿದ್ದು ಫೇಮಸ್ ರೈಟರ್ ಟಿ.ಕೆ ದಯಾನಂದ್, ಈ ಸಿನಿಮಾದ ಕಥೆಯನ್ನು ಮೊದಲು ಹೇಳಿದ್ದೇ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ, ಆದ್ರೆ ಅಪ್ಪು ಇದು ತುಂಬಾ ಎಮೋಷಲಿ ಕಿತ್ತು ತಿನ್ನುವ ಕಥೆ ಎಂದಿದ್ದರಂತೆ.

click me!