ಕಿರುತೆರೆಗೆ ಎಂಟ್ರಿ ಕೊಟ್ಟ ಪಂಚಭಾಷೆ ತಾರೆ!

Published : Jan 12, 2019, 09:25 AM IST
ಕಿರುತೆರೆಗೆ ಎಂಟ್ರಿ ಕೊಟ್ಟ ಪಂಚಭಾಷೆ ತಾರೆ!

ಸಾರಾಂಶ

ಕಿರುತೆರೆ ಪ್ರೇಕ್ಷಕರ ಮುಂದೆ ಮತ್ತೊಂದು ಹೊಸ ಧಾರಾವಾಹಿ ಬಂದಿದೆ. ಹೆಸರು ‘ಚಂದ್ರಕುಮಾರಿ’. ವಿಶೇಷ ಅಂದರೆ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಾಧಿಕಾ ಶರತ್‌ಕುಮಾರ್‌ ಹಾಗೂ ಅರುಣ್‌ ಸಾಗರ್‌.

ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಬೇಡಿಕೆಯ ನಟಿ ಎನಿಸಿಕೊಂಡಿರುವ, ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಶರತ್‌ಕುಮಾರ್‌ ಅವರ ಪತ್ನಿ ರಾಧಿಕಾ ಶರತ್‌ಕುಮಾರ್‌.

ಕಲಾ ನಿರ್ದೇಶಕರಾಗಿ, ನಟರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಅರುಣ್‌ ಸಾಗರ್‌ ಅವರ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಇವರಿಬ್ಬರ ಜುಗಲ್‌ಬಂದಿಯಲ್ಲಿ ಈ ಧಾರಾವಾಹಿಯ ಸಾಗಲಿದ್ದು, ‘ಚಂದ್ರಕುಮಾರಿ’ ಮೂಲಕ ಜ.7ರಿಂದ ಉದಯ ವಾಹಿನಿಯಲ್ಲಿ ನೋಡುಗರ ಮುಂದೆ ಬಂದಿದ್ದಾರೆ.

ರಮಣ ಲೈಫ್ ರಿಯಲ್ ರಾಧಾ ಮಿಸ್! ಬಿಚ್ಚಿಟ್ಟರು ಲವ್ ಸ್ಟೋರಿ

ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿ, ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿದದೆ. ಸುರೇಶ್‌ ಕೃಷ್ಣ ನಿರ್ದೇಶನ ಇರುವ ಗ್ರಾಫಿಕ್ಸ್‌, ಅದ್ದೂರಿ ಸೆಟ್‌ಗಳು, ಮನರಂಜನೆ, ಫ್ಯಾಂಟಸಿ ಜತೆಗೆ ಸಂಬಂಧಗಳ ಮಹತ್ವ, ಪ್ರೀತಿ ಮತ್ತು ಸಾಹಸವನ್ನು ಪ್ರಧಾನವಾಗಿ ಒಳಗೊಂಡಿರುವ ಈ ಧಾರಾವಾಹಿಯನ್ನು ರಾಧಿಕಾ ಶರತ್‌ಕುಮಾರ್‌ ಅವರ ರೆಡಾನ್‌ ಸಂಸ್ಥೆ ನಿರ್ಮಿಸುತ್ತಿದೆ. ಶೋಭಾ ನಾಯ್ಡು ಧಾರಾವಾಹಿಯ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ವಿಷ್ಣು ದಶಾವತಾರ: ಹಿರಣ್ಯ ಕಶ್ಯಪನಾಗಿ ನವೀನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?