
ಸಂಜೆಯಾದಂತೆ ಟಿವಿ ಮುಂದೆ ಕೂರುವ ಕಾಮಿಡಿ ಫ್ಯಾನ್ಸ್‌ಗೆ ಇವರು ಚಿರ ಪರಿಚಿತರು. ಗೊವಿಂದೇ ಗೌಡ ಮೂಲತಃ ದಾವಣಗೆರೆ ಜಿಲ್ಲಿಯ ಕಡಬಗೆರೆಯ ರೈತ. ದಿನಕ್ಕೊಂದು ಹೊತ್ತು ಊಟ ಮಾಡಲೂ ಪರದಾಡುವಷ್ಟು ಕಡು ಬಡತನ. ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಒಂದೊಮ್ಮೆ ಕಾಮಿಡಿ ಕಿಲಾಡಿ ಆಡಿಷನ್‌ಗೆ ತೆರಳಿದ್ದರು. ಅದೃಷ್ಟ ಕೈ ಹಿಡಿಯಿತು. ಸೆಲೆಕ್ಟ್ ಆದರು. ತಮ್ಮ ನಟನೆ ಮೂಲಕ ಎಲ್ಲರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾದರು.
ಆಡಿಷನ್ ಮೂಲಕವೇ ಈ ರಿಯಾಲಿಟಿ ಶೋಗೆ ಬಂದವರು ದಿವ್ಯಾಶ್ರೀ. ದಿವ್ಯಾ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ನಟನೆಯೇ ಬಾರದ ಇವರು ಕ್ರಿಯೇಟಿವ್ ಪಾತ್ರಗಳನ್ನು ಮಾಡಿಕೊಂಡು, ಫಿನಾಲೇ ತಲುಪಿದ್ದರು.
ಈ ಇಬ್ಬರೂ ವೀಕ್ಷಕರನ್ನು ನಗಿಸಿದ್ದೇ ನಗಿಸಿದ್ದು. ಕಾಮಿಡಿ ಶೋನಲ್ಲಿ ಮನೆ ಮಾತಾಗಿದ್ದ ಈ ಜೋಡಿಯ ಮನಸ್ಸೂ ಒಂದಾಯಿತು. ದಾಂಪತ್ಯ ಜೀವನಕ್ಕೆ ಕಾಲಿಡಲು ನಿಶ್ಚಯಿಸಿದೆ ಈಗ.
ಇದೇ ತಿಂಗಳು 27ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ನೆರವೇರಲಿದೆ. ಮಾರ್ಚ್ 14ಕ್ಕೆ ಶೃಂಗೇರಿಯಲ್ಲಿ ಸಪ್ತಪದಿ ತುಳಿಯಲಿದೆ. ಶೋನಲ್ಲಿಯೇ ಒಬ್ಬರನ್ನೊಬ್ಬರು ಇಷ್ಟ ಪಟ್ಟ ಈ ಜೋಡಿ ಕುಟುಂಬದ ಒಪ್ಪಿಗೆಯೊಂದಿಗೆ ನವಜೀವನ ಆರಂಭಿಸಲಿದೆ.
ಎಲ್ಲರನ್ನೂ ನಗೆ ಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿದ್ದ ಈ ಜೋಡಿಯೂ ನಗ್ ನಗ್ತಾ ನೂರ್ಕಾಲ ಬಾಳಲಿ ಎಂಬುವುದು ನಮ್ಮೆಲ್ಲರ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.