ಸಿನಿಮಾ, ದಾಂಪತ್ಯದ ಗುಟ್ಟು ಬಿಚ್ಚಿಟ್ಟ ರಾಧಿಕಾ ಪಂಡಿತ್

Published : Jul 23, 2018, 11:08 AM IST
ಸಿನಿಮಾ, ದಾಂಪತ್ಯದ ಗುಟ್ಟು ಬಿಚ್ಚಿಟ್ಟ ರಾಧಿಕಾ ಪಂಡಿತ್

ಸಾರಾಂಶ

ಮದುವೆಯಾಗಿ ಒಂದು ವರ್ಷ ಕಳೆದಿದೆ. ರಾಧಿಕಾ ಪಂಡಿತ್ ಹೊರಗೆ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ಹಾಗಂತ ಚಿತ್ರರಂಗದಿಂದ ದೂರವಾಗಿಲ್ಲ. ಅತ್ತ  ಪತ್ನಿಯ ಪಾತ್ರವನ್ನು ನಿರ್ವಹಿಸುತ್ತಾ ಇತ್ತ ವಿ ಪ್ರಿಯಾ ನಿರ್ದೇಶನದ, ನಿರೂಪ್ ಭಂಡಾರಿ ನಟನೆಯ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಯಾಗಲಿದೆ. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಅವರು ಸಿನಿಮಾ, ದಾಂಪತ್ಯದ ಕುರಿತು ಮಾತನಾಡಿದ್ದಾರೆ.

ರಾಧಿಕಾ ಪಂಡಿತ್ ಸದ್ಯ ನಿರೂಪ್ ಭಂಡಾರಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಸಂಸಾರ, ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ ರಾಧಿಕಾ. ಈ ಬಗ್ಗೆ ಅವರು ಹೇಳುವುದೇನು? ನೋಡಿ. 

ಬಹಳ ಗ್ಯಾಪ್ ತಗೊಂಡು ವಾಪಾಸ್ ಬಂದೆ ಅನಿಸ್ತಿಲ್ವಾ?
ಖಂಡಿತಾ ಇಲ್ಲ. ನನ್ನ ಪ್ರಕಾರ ಕೆರಿಯರ್ ಅನ್ನೋದು  ಜೀವನದ ಒಂದು ಭಾಗ. ಅದೇ ಜೀವನ ಅಲ್ಲ. ನಾನು ಕೇವಲ ಸಿನಿಮಾದಲ್ಲಿರುವ ಪಾತ್ರಗಳನ್ನಷ್ಟೇ ನಿಭಾಯಿಸಿದರೆ ಸಾಲದು. ನಿಜ ಬದುಕಿನಲ್ಲೂ ಹೆಂಡತಿ, ಸೊಸೆ, ಮಗಳು ಮೊದಲಾದ ಪಾತ್ರಗಳನ್ನೂ ಬ್ಯಾಲೆನ್ಸ್ ಮಾಡಬೇಕಲ್ವಾ. ಫ್ರೊಫೆಷನಲ್ ಲೈಫ್ ಅನ್ನು ಯಾವತ್ತೂ ವೈಯುಕ್ತಿಕ ಬದುಕಿನ ಜೊತೆಗೆ ಮಿಕ್ಸ್ ಮಾಡಲ್ಲ. ಹಾಗಾಗಿ ಈ ಗ್ಯಾಪ್ ಬೇಕಿತ್ತು.

ಹೊಸ ಸಿನಿಮಾದಲ್ಲಿ ನಿಮ್ಮದು ಡಿಫರೆಂಟ್ ಆಗಿರೋ ಪಾತ್ರವಂತೆ?
ಹೌದು. ಲಕ್ಷ್ಮಿ ಅಂತ ಪಾತ್ರದ ಹೆಸರು. ಮೊದಲು ದಪ್ಪಗಿದ್ದು ಮತ್ತೆ ಸಣ್ಣಗಾಗುವ ಹುಡುಗಿಯಾಗಿ ಕಾಣಿಸಿಕೊಳ್ತಿದ್ದೀನಿ. ದಪ್ಪಗಿನ ಹುಡುಗಿಯ ಕೀಳರಿಮೆ, ನೋವುಗಳನ್ನೆಲ್ಲ ಆವಾಹಿಸಿಕೊಂಡ ಪಾತ್ರ. ಬಹಳ ಡಿಫರೆಂಟ್ ಅನಿಸ್ತು. ನಾನು ಈವರೆಗೆ ಇಂಥ ಪಾತ್ರಗಳಲ್ಲಿ ಅಭಿನಯಿಸಿಲ್ಲ. ಶೂಟಿಂಗ್ ಎಲ್ಲ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ವಾರದಲ್ಲಿ ಡಬ್ಬಿಂಗ್ ಇರುತ್ತೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಬಹುದು.

ಭೂಮಿ ಪೆಡ್ನೇಕರ್, ಅನುಷ್ಕಾ ಶೆಟ್ಟಿ ಥರ ನೀವೂ ಪಾತ್ರಕ್ಕಾಗಿ ತೂಕ ಏರಿಸಿಕೊಂಡ್ರಾ?
ಚಬ್ಬಿ ಚಬ್ಬಿಯಾಗಿ ಕಾಣಿಸ್ಕೊಳ್ಬೇಕಿತ್ತು. ಅದಕ್ಕೆ ಒಂಚೂರು ತೂಕ ಜಾಸ್ತಿ ಮಾಡಿಕೊಂಡಿದ್ದೆ. ಆದರೆ ಅವರ ಥರ ಸಿಕ್ಕಾಪಟ್ಟೆ ದಪ್ಪಗಾಗಿಲ್ಲ. ನನ್ನ ಬಾಡಿ ನೇಚರ್‌ಗೆ ಅದು ಅಸಾಧ್ಯ ಅನಿಸುತ್ತೆ. ಆರ್ಟಿಫಿಶಿಯಲ್ ಆಗಿ ದಪ್ಪ ಕಾಣೋ ಹಾಗೆ ಮಾಡಿದ್ದಾರೆ. ಅದನ್ನೆಲ್ಲ ನೀವು ಸಿನಿಮಾದಲ್ಲೇ ನೋಡ್ಬೇಕು.

ಮದುವೆ ಆದ ಮೇಲೆ ಪಾತ್ರಗಳ ಆಯ್ಕೆಯಲ್ಲಿ ವ್ಯತ್ಯಾಸವಾಗಿದೆಯಾ?
ಇಲ್ಲ. ನಾನು ಮೊದಲಿಂದಲೂ ಪಾತ್ರಗಳ ಆಯ್ಕೆಯಲ್ಲಿ  ಬಹಳ ಚ್ಯೂಸಿ. ನನ್ನ ಮನಸ್ಸಿಗೆ ಹಿಡಿಸುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡ್ಕೊಳ್ತೀನಿ. ಇನ್ನೊಬ್ಬರ ಬಲವಂತಕ್ಕೆ ಕಟ್ಟುಬಿದ್ದು ಯಾವತ್ತೂ ಸಿನಿಮಾ ಒಪ್ಕೊಂಡಿಲ್ಲ. ಇಂಥ ಜಾನರ್, ಡ್ರೀಮ್ ರೋಲ್ ಅನ್ನೋದೆಲ್ಲ ನಂಗಿಲ್ಲ  ಮದುವೆಯಾದ ಮೇಲೂ ಆ ಮನಸ್ಥಿತಿಯಲ್ಲೇನೂ ಬದಲಾವಣೆಯಾಗಿಲ್ಲ.

ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳಾದ್ವು. ನಿಮ್ಮ ಪರ್ಫಾಮೆನ್ಸ್ ಬಗ್ಗೆ ತೃಪ್ತಿ ಇದೆಯಾ?
ಕಲಾವಿದರಿಗೆ ಯಾವತ್ತೂ ಆ ತೃಪ್ತಿ ಇರಲ್ಲ. ಅಭಿನಯದಲ್ಲಿ ಇನ್ನಷ್ಟು ಪಳಗಬೇಕು ಅಂತನೇ ಇರುತ್ತೆ. ನಾನೂ ಇದಕ್ಕೆ ಹೊರತಾಗಿಲ್ಲ. ಇನ್ನಷ್ಟು ಚೆನ್ನಾಗಿ ಅಭಿನಯಿಸಬೇಕು ಅನ್ನುವ ಹಪಹಪಿಯೇ ಹೆಚ್ಚಿದೆ.

ಒಬ್ಬ ನಟಿ ಸುದೀರ್ಘವಾಗಿ ಚಿತ್ರರಂಗದಲ್ಲಿ ಕಾಲೂರುವುದು ಸುಲಭದ ಮಾತಲ್ಲ. ನಿಮ್ಮ ಯಶಸ್ಸಿನ ಗುಟ್ಟೇನು?
ನಿಜ. ಸಿನಿಮಾದಲ್ಲಿ ನಟಿಸಬೇಕು ಅನ್ನುವುದು ನನ್ನ ಕನಸಾಗಿರಲಿಲ್ಲ. ನಾನ್ಯಾವತ್ತೂ ನಂ.1 ಆಗಬೇಕು ಅಂತ ಹಂಬಲಿಸಿದವಳಲ್ಲ. ಇಷ್ಟು ಕಾಲ ಚಿತ್ರರಂಗದಲ್ಲಿ ಇರಬೇಕು ಅಂದುಕೊಂಡವಳೂ ಅಲ್ಲ. ಆದರೆ ಚಿತ್ರರಂಗಕ್ಕೆ ಬಂದಮೇಲೆ ಕೆಲಸವನ್ನು ದೇವರು ಅಂದುಕೊಂಡು ಸಂಪೂರ್ಣ ತಲ್ಲೀನತೆಯಿಂದ ತೊಡಗಿಸಿಕೊಂಡಿದ್ದೇನೆ. ಕೆಲಸಕ್ಕೆ ದ್ರೋಹ ಮಾಡಿಲ್ಲ. ಅರ್ಧ ಮನಸ್ಸಿಂದ ಪಾತ್ರ ಒಪ್ಪಿಕೊಂಡಿಲ್ಲ. ಇಷ್ಟವಾದ ಪಾತ್ರಗಳನ್ನಷ್ಟೇ ಒಪ್ಪಿಕೊಂಡಿದ್ದೇನೆ. ಬಹುಶಃ ಇದೇ ನನ್ನನ್ನು ಇಲ್ಲಿಯವರೆಗೆ ಕರೆತಂದಿರಬೇಕು. 

-ಪ್ರಿಯಾ ಕೇರ್ವಾಶೆ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!