'ಸಂಜಯ್‌ ಅಲಿಯಾಸ್‌ ಸಂಜು'ಗೆ ಜೊತೆಯಾದ ರಚಿತಾ ರಾಮ್ ?

Published : Jun 27, 2019, 09:50 AM IST
'ಸಂಜಯ್‌ ಅಲಿಯಾಸ್‌ ಸಂಜು'ಗೆ ಜೊತೆಯಾದ ರಚಿತಾ ರಾಮ್ ?

ಸಾರಾಂಶ

ವಿವಾ​ದವೋ, ವಿಷಾದವೋ, ಸ್ಯಾಂಡ​ಲ್‌​ವು​ಡ್‌ನ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಮಾತ್ರ ಹೊಸ ಹೊಸ ಆಫ​ರ್‌​ಗಳ ಮೂಲಕ ದಿನವೂ ಸುದ್ದಿ ಆಗು​ತ್ತಿ​ದ್ದಾ​ರೆ. ‘ಐ ಲವ್‌ ಯೂ’ಚಿತ್ರದ ಭರ್ಜರಿ ಸಕ್ಸಸ್‌ ನಡು​ವೆಯೇ ಜೋಗಿ ಪ್ರೇಮ್‌ ನಿರ್ದೇ​ಶ​ನದ ‘ಏಕ್‌ ಲವ್‌ ಯಾ’ ಹಾಗೂ ರಮೇಶ್‌ ಅರ​ವಿಂದ್‌ ನಿರ್ದೇ​ಶನ ಮತ್ತು ಅಭಿ​ನ​ಯದ ‘100’ ಚಿತ್ರದ ಚಿತ್ರೀಕ​ರ​ಣ​ದಲ್ಲಿ ಬ್ಯುಸಿ ಇರುವ ರಚಿತಾ, ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ನಾಯಕಿ ಆಗಿ​ದ್ದಾ​ರಂತೆ.

ಈ ಬಾರಿ ಅವರು ನಾಗ​ಶೇ​ಖರ್‌ ನಿರ್ದೇ​ಶ​ನದ ‘ಸಂಜು ಅಲಿ​ಯಾಸ್‌ ಸಂಜು’ ಚಿತ್ರಕ್ಕೆ ನಾಯಕಿ ಆಗಿ​ದ್ದಾ​ರೆ​ನ್ನು​ತ್ತಿವೆ ಮೂಲ​ಗ​ಳು.

ಅಮರ್ ಸಿನಿಮಾದಲ್ಲಿ ದಚ್ಚು, ರಚ್ಚು ಸಖತ್ ಸ್ಟೆಪ್!

‘ಅಮರ್‌’ ಚಿತ್ರದ ನಂತರ ನಿರ್ದೇ​ಶಕ ನಾಗ​ಶೇಖರ್‌ ಅನೌನ್ಸ್‌ ಮಾಡಿದ ಪ್ರಾಜೆಕ್ಟ್ ಇದು. ಅಮರ್‌ ಚಿತ್ರ​ದ ಆವ​ರೇಜ್‌ ಸಕ್ಸಸ್‌ ಬೆನ್ನಲೇ ಸೋಷಲ್‌ ಅವರ ವಿರುದ್ಧ ಕೆಟ್ಟನಿರ್ದೇ​ಶಕ ಎನ್ನುವ ಟೀಕೆ​ಗಳು ಕೇಳಿ ಬಂದಿ​ದ್ದವು. ಆ ನಡು​ವೆಯೇ ನಾಗ​ಶೇ​ಖರ್‌ ತಮ್ಮ ನಿರ್ದೇ​ಶ​ನದ ಹೊಸ ಸಿನಿಮಾ ಸಂಜು ಅಲಿ​ಯಾಸ್‌ ಸಂಜು ಅನೌನ್ಸ್‌ ಮಾಡಿ ಅಚ್ಚರಿ ಗೊಳಿಸಿ​ದ್ದ​ರು. ಈ ಚಿತ್ರ​ಕ್ಕೆ ಇನ್ನು ಹೀರೋ ಫೈನಲ್‌ ಆಗಿಲ್ಲ. ಅದರ ಮಧ್ಯೆಯೇ ನಾಯಕಿ ರಚಿತಾ ರಾಮ್‌ ಎನ್ನುವ ಸುದ್ದಿ ಹೊರ ಬಿದ್ದಿ​ದೆ.‘ ನಿರ್ದೇ​ಶ​ಕ​ ನಾಗ​ಶೇ​ಖರ್‌ ಅವರು ಫೋನ್‌ ಮೂಲಕ ನನ್ನನ್ನು ಸಂಪ​ರ್ಕಿ​ಸಿದ್ದು ನಿಜ, ಆದರೆ ಯಾವುದು ಫೈನಲ್‌ ಆಗಿ​ಲ್ಲ. ಹಾಗಾಗಿ ನಾನು ಅಧಿ​ಕೃತ​ವಾಗಿ ಹೇಳಲು ಆಗು​ವು​ದಿಲ್ಲ. ಯಾವುದೇ ಖಚಿತ ಮಾಹಿತಿ ನೀವು ನಿರ್ದೇ​ಶ​ಕ​ರನ್ನೇ ಸಂಪ​ರ್ಕಿ​ಸಿ​ದರೆ ಒಳ್ಳೆ​ಯ​ದು’ಎನ್ನು​ತ್ತಾರೆ ರಚಿತಾ ರಾಮ್‌.

ಹಾಗಂತ ಈಗಲೇ ಶುರು​ವಾ​ಗುತ್ತಾ ಈ ಸಿನಿಮಾ? ಅದು ಕೂಡ ಖಾತರಿ ಇಲ್ಲ. ನಿರ್ದೇ​ಶಕ ನಾಗ​ಶೇ​ಖರ್‌ ಈಗ ಬಾಲಿ​ವು​ಡ್‌ ಕಡೆ ಮುಖ ಮಾಡಿ​ದ್ದಾ​ರೆ. ಈಗಾಗಲೇ ಬಾಲಿವುಡ್‌ನಲ್ಲೂ ಸಿನಿಮಾ ಅನೌನ್ಸ್‌ ಮಾಡಿ​ದ್ದಾ​ರೆ. ಖ್ಯಾತ ನಿರ್ಮಾಪಕ ಜೋಗಿಂದರ್‌ ಸಿಂಗ್‌ ಪುತ್ರ ಭವೀಶ್‌ಗೆ ಸಿನಿಮಾ ನಿರ್ದೇ​ಶನ ಮಾಡು​ತ್ತಿ​ದ್ದಾರೆ. ಕನ್ನಡದ ‘ಮೈನಾ’ ಹಿಂದಿಗೆ ರಿಮೇಕ್‌ ಆಗು​ತ್ತಿದೆ. ಈ ಸಿನಿಮಾ ಮುಗಿದ ಬಳಿಕವೇ ಬಹು​ತೇಕ ‘ಸಂಜು ಅಲಿ​ಯಾಸ್‌ ಸಂಜು’ ಶುರು​ವಾ​ಗು​ವುದು ಗ್ಯಾರಂಟಿ.

ಹಾಟು-ಗಾಟು-ಬೋಲ್ಡ್ ರಚ್ಚುಗೆ ಸಿಕ್ತು ಇಂಥದ್ದೊಂದು ಕಾಮೆಂಟ್?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಒಂದೇ ದಿನದಲ್ಲಿ ದಾಖಲೆ ಬರೆದ ಸುದೀಪ್​ Mark ಟ್ರೈಲರ್​: ಇಷ್ಟೊಂದು ವ್ಯೂವ್ಸ್​ ಆಗಿದ್ದು ನಿಜನಾ? ಏನಿದು ಚರ್ಚೆ?
ಸಲಗ Vs ರೂಲರ್: ಅಳಿದು ಉಳಿದವರ ಲ್ಯಾಂಡ್ ಲಾರ್ಡ್ ದುನಿಯಾದಲ್ಲಿ ಶೆಟ್ಟರ ವಾರ್!