ಊರಿಗೊಬ್ಳೆ ಪದ್ನಾವತಿ ಎನ್ನುವ ಹಾಡು ತುಂಬಾ ಹಿಟ್ ಆಗಿದ್ದು ಆ ಹಾಡಿನಲ್ಲಿ ನಟಿ ರಮ್ಯಾ ಹೆಜ್ಜೆ ಹಾಕಿದ್ದೂ ಒಂದು ಕಾರಣ. ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದ ‘ಜಾನಿ’ ಚಿತ್ರದ ಈ ಪದ್ಮಾವತಿ ಮತ್ತೆ ಬಂದಿದ್ದಾಳೆ.
ಬೆಂಗಳೂರು (ಮಾ. 05): ಊರಿಗೊಬ್ಳೆ ಪದ್ನಾವತಿ ಎನ್ನುವ ಹಾಡು ತುಂಬಾ ಹಿಟ್ ಆಗಿದ್ದು ಆ ಹಾಡಿನಲ್ಲಿ ನಟಿ ರಮ್ಯಾ ಹೆಜ್ಜೆ ಹಾಕಿದ್ದೂ ಒಂದು ಕಾರಣ. ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದ ‘ಜಾನಿ’ ಚಿತ್ರದ ಈ ಪದ್ಮಾವತಿ ಮತ್ತೆ ಬಂದಿದ್ದಾಳೆ.
ಇವರು ಹೊಸ ಪದ್ಮಾವತಿ. ‘ಜಾನಿ ಜಾನಿ ಎಸ್ ಪಾಪ’ ಚಿತ್ರದಲ್ಲಿ ‘ಹೊಸ ಪದ್ಮಾವತಿ’ ಎಂದು ಸಾಗುವ ಈ ಹಾಡಿನಲ್ಲಿ ಚಿತ್ರದ ನಾಯಕ ವಿಜಯ್ ಹಾಗೂ ನಾಯಕಿ ರಚಿತಾ ರಾಮ್ ಸಖತ್ ಹಾಟ್ ಹಾಕಿ ಸ್ಟೆಪ್ಸ್ ಹಾಕಿದ್ದಾರೆ. ಪ್ರೀತಮ್ ಗುಬ್ಬಿ
ನಿರ್ದೇಶನದ ಈ ಚಿತ್ರದ ಹೊಸ ಪದ್ಮಾವತಿಯ ಹಾಡಿನ ಟೀಸರ್ ಈಗಷ್ಟೆ ಬಿಡುಗಡೆಯಾಗಿದೆ. ‘ನಾವು ಜಾನಿ ಚಿತ್ರದಲ್ಲಿ ಊರಿಗೊಬ್ಳೆ ಪದ್ಮಾವತಿ ಹಾಡನ್ನು ಮಾಡಿದಾಗ ತುಂಬಾ ಜನ ನೋಡಿ ಮೆಚ್ಚಿಕೊಂಡರು. ಅದರಷ್ಟೆ ಹಾಟ್ ಆಂಡ್
ಸ್ಪೈಸಿಯಾಗಿ ಈ ಹಾಡನ್ನು ಮಾಡಿದ್ದೇವೆ. ಚೆನ್ನಾಗಿದೆ. ಈ ಕಾರಣಕ್ಕೆ ಹಾಡಿನ ಟೀಸರ್ ಬಿಡುಗಡೆ ಮಾಡಿದ್ದೇವೆ’ ಎಂಬುದು ನಿರ್ದೇಶಕ ಪ್ರೀತಮ್ ಗುಬ್ಬಿ ಮಾತು.
ಸದ್ಯ ಯೂಟ್ಯೂಬ್ನಲ್ಲಿ ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆಯಂತೆ. ಎಲ್ಲದೆ ಹಾಡಿಗೆ ತಕ್ಕಂತೆ ಹೊಸ ಹೊಸ ಸೆಟ್ಗಳನ್ನು ಹಾಕಿದ್ದಾರೆ. ಈ ಸೆಟ್'ಗಳಲ್ಲಿ ಹಾಡಿನ ಚಿತ್ರೀಕರಣ ಮಾಡಿರುವುದರಿಂದ ಕಲರ್ಫುಲ್ಲಾಗಿ ಹಾಡು ಮೂಡಿಬಂದಿದೆಯಂತೆ.