
ಸಹ ನಟರ ಚಿತ್ರಗಳ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿ ತಂಡವನ್ನು ಪೋತ್ಸಾಹಿಸಿ ಬರುವ ನಟ ಪುನೀತ್ ರಾಜ್‌ಕುಮಾರ್, ಈ ಬಾರಿ ಹೋಗಿದ್ದು ಟಾಲಿವುಡ್ ನಟ ಅಲ್ಲು ಸಿರೀಶ್ ಶೂಟಿಂಗ್ ಸ್ಪಾಟ್‌ಗೆ. ಅಲ್ಲು ಸಿರೀಶ್ ಅಭಿನಯದ ‘ಒಕ ಕ್ಷಣಂ’ ಚಿತ್ರಕ್ಕೆ ಬೆಂಗಳೂರು ಹೊರ ವಲಯದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಗೆ ಭೇಟಿ ಕೊಟ್ಟ ಪವರ್‌ಸ್ಟಾರ್ ಅರ್ಧ ಗಂಟೆಗೂ ಹೆಚ್ಚು ಕಾಲ ತಂಡದೊಂದಿಗೆ ಸಮಯ ಕಳೆದರು.
ಇತ್ತೀಚೆಗಷ್ಟೆ ಶಿವರಾಜ್‌ಕುಮಾರ್ ಅಭಿನಯದ ‘ಟಗರು’ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಈ ಇಬ್ಬರು ನಟರು ಮುಖಾಮುಖಿಯಾಗಿದ್ದರು. ಅಲ್ಲು ಸಿರೀಶ್ ಶಿವಣ್ಣ ಜೊತೆ ಟೈಗರ್ ಡಾನ್ಸ್ ಮಾಡಿದ್ದನ್ನು ಇಲ್ಲಿ ನೆನೆಸಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.