
ಇದಿಷ್ಟೂ ಕನಸಿನ ರಾಣಿ, ಆ್ಯಕ್ಷನ್ ಕ್ವೀನ್ ಮಾಲಾಶ್ರೀ ತಮ್ಮ ಮುಂದಿನ ಎರಡು ಸಿನಿಮಾಗಳಿಗಾಗಿ ನಡೆಸುತ್ತಿರುವ ಸಿದ್ಧತೆ . ಈ ಸಲ ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಸಿನಿಮಾಗಳನ್ನು ಬಿಟ್ಟು ಬೇರೆ ಥರದ ಎರಡು ಸಿನಿಮಾ ಮಾಡುತ್ತಿದ್ದಾರೆ.
ಅವರು ಸದ್ಯ ಅಭಿನಯಿಸುತ್ತಿರುವ ಒಂದು ಚಿತ್ರ ಹಾರರ್. ಇನ್ನೊಂದು ಥ್ರಿಲ್ಲರ್. ಹೊಸ ವರ್ಷಕ್ಕೆ ಒಟ್ಟಿಗೆ ಎರಡು ಸಿನಿಮಾಗಳು ಸೆಟ್ಟೇರಲಿವೆಯಂತೆ. ಆ ಮೂಲಕ ಕನಸಿನ ರಾಣಿ, ಆ್ಯಕ್ಷನ್ ಕ್ವೀನ್ ಬಿರುದುಗಳಾಚೆ ಬೇರೆಯದೇ ಆದ ಪಾತ್ರದಲ್ಲಿ ಗುರುತಿಸಿಕೊಳ್ಳುವ ಮಹಾದಾಸೆ ಹೊತ್ತಿದ್ದಾರೆ. ಸದ್ಯಕ್ಕೀಗ ಮಾಲಾಶ್ರೀ ಅಭಿನಯಿಸಿರುವ ‘ಉಪ್ಪು ಹುಳಿ ಖಾರ’ ಇದೇ ತಿಂಗಳು ತೆರೆ ಕಾಣುತ್ತಿದೆ. ಈ ಚಿತ್ರದಲ್ಲೂ ಅವರದ್ದು ಪೊಲೀಸ್ ಪಾತ್ರ. ‘ಮುಂದಿನ ಎರಡು ಸಿನಿಮಾಗಳಿಗೂ ನಾನು ಫಿಟ್ ಆಗಬೇಕಿದೆ.
ಯಾಕಂದ್ರೆ, ಅವೆರಡು ಹೊಸ ರೀತಿಯ ಕತೆಗಳು. ಡಿಫರೆಂಟ್ ಕತೆಗಳಲ್ಲಿ ಅಭಿನಯಿಸುತ್ತಿದ್ದೇನೆ. ಅದಕ್ಕಾಗಿ ಮೊದಲು ವರ್ಕೌಟ್ ಶುರುವಾಯಿತು. ಒಮ್ಮೆ ಜಿಮ್‌ನಲ್ಲಿ ಭಾರ ಎತ್ತುವಾಗ ಎಡಗೈನ ಮುಂಗೈ ಮೂಳೆ ಮುರಿದು, ಅದರ ಚಿಕಿತ್ಸೆಗಾಗಿ ಮೂರು ತಿಂಗಳು ವಿಶ್ರಾಂತಿ ಮಾಡಿದೆ. ಈಗ ಮತ್ತೆ ವರ್ಕೌಟ್ ಶುರು ಮಾಡಿದ್ದೇನೆ. ನಿತ್ಯವೂ ಎರಡು ಗಂಟೆ ವಾಕ್ ಮಾಡುತ್ತಿದ್ದೇನೆ. ಆರು ತಿಂಗಳಲ್ಲಿ ಒಟ್ಟು 9 ಕೆಜಿಯಷ್ಟು ದೇಹದ ತೂಕ ಇಳಿಸಿಕೊಂಡಿದ್ದೇನೆ’ ಎನ್ನುತ್ತಾರೆ ಮಾಲಾಶ್ರೀ. ಎರಡು ಸಿನಿಮಾಗಳಲ್ಲಿ ಹಾರರ್ ಸಿನಿಮಾವನ್ನು ರಾಮು ನಿರ್ಮಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.