ಪುನೀತ್ Birthday: ಹೇಗಿರುತ್ತೆ ಸೆಲೆಬ್ರೇಷನ್?

Published : Mar 15, 2019, 04:12 PM IST
ಪುನೀತ್ Birthday: ಹೇಗಿರುತ್ತೆ ಸೆಲೆಬ್ರೇಷನ್?

ಸಾರಾಂಶ

ಕಿಚ್ಚ, ಯಶ್, ದರ್ಶನ್ ಇದೀಗ ಪವರ್ ಸ್ಟಾರ್ ಪುನೀತ್ ಸರದಿ. ಸ್ಯಾಂಡಲ್‌ವುಡ್ ನಟರು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನು ಒಂದಲ್ಲ ಒಂದು ಕಾರಣಕ್ಕೆ ನಿಲ್ಲಿಸುತ್ತಿದ್ದಾರೆ. ಮಾರ್ಚ್ 17ರಂದು ಹುಟ್ದಬ್ಬ ಆಚರಿಸಿಕೊಳ್ಳುತ್ತಿರುವ ಪುನೀತ್ ನಿರ್ಧಾರವೇನು?

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾರ್ಚ್ 17ಕ್ಕೆ 44 ವಸಂತಗಳನ್ನು ಪೂರೈಸಲಿದ್ದಾರೆ. ಆದರೆ, ಮಾರ್ಚ್ 16ರ ರಾತ್ರಿಯಿಂದಲೇ ಮನೆಯಲ್ಲಿರುವುದಿಲ್ಲ. ಮನೆಯ ಹತ್ತಿರ ಬರುವುದೇ ಬೇಡವೆಂದು ಅಭಿಮಾನಿಗಳಿಗೆ ಮುಂಚಿತವಾಗಿಯೇ ತಿಳಿಸಿದ್ದಾರೆ. ಆ ಮೂಲಕ ಅಭಿಮಾನಿಗಳೊಂದಿಗೆ ಬರ್ತ್‌ ಡೇ ಆಚರಿಸಿಕೊಳ್ಳುವುದಿಲ್ಲವೆಂಬುದನ್ನು ಖಚಿತಪಡಿಸಿದ್ದಾರೆ. ಫ್ಯಾನ್ಸ್‌ ಇದರಿಂದ ಫುಲ್ ಬೇಜಾರಾಗಿದ್ದಾರೆ.

ಒಂದ್ ನಿಮಿಷ...ನಿಲ್ಲಿ. ಇದರೊಂದಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಪವರ್ ಸ್ಟಾರ್. ಮಾರ್ಚ್ 17ರ ಬೆಳಗ್ಗೆ 'ಯುವರತ್ನ' ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಹೇಳಿ, ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಪ್ರತಿವರ್ಷವೂ ಪವರ್ ಬರ್ತ್‌ಡೇ ಪವರ್‌ಫುಲ್ ಆಗಿರುತ್ತದೆ. ಆದರೆ, ಈ ಸಲ ಮಾತ್ರ ಸ್ವಲ್ಪ ಬದಲಾವಣೆ ಆಗಿದೆ. ಅದುವೇ ಮಾರ್ಚ್ 16 ರಂದು ತಾವು ಮನೆಯಲ್ಲಿ ಇರುವುದಿಲ್ಲ ಎಂದು ಪುನೀತ್ ಹೇಳಿಕೊಂಡಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ. ತಮ್ಮ ಮನವಿಗೆ ಓಗೊಟ್ಟರೆ ಮಾರ್ಚ್ 17ಕ್ಕೆ ಸಿಗುವುದು, ಎಂದೂ ಪ್ರೀತಿಯಿಂದಲೇ ಬೆದರಿಸಿದ್ದಾರೆ.

 

ಅಲ್ಲದೇ, ‘ದಯಮಾಡಿ ಯಾರೂ ಕೇಕ್ , ಹಾರ, ಹೂಗುಚ್ಚ ಮತ್ತಿತ್ತರೆ ಗಿಫ್ಟ್ ತರಬೇಡಿ. ಅದರ ಬದಲು ನಿಮಗೆ ಉಪಯೋಗವಾಗುವಂಥದ್ದಕ್ಕೆ ಬಳಸಿ. ಪ್ರೀತಿ, ವಿಶ್ವಾಸದಿಂದ ಬಂದು ಹಾರೈಸಿದರೆ ಸಾಕು.’ಎಂದು ಕೇಳಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
The Devil Movie: ಏನ್ರೀ ಹವಾ ಇದು... ಗಿಲ್ಲಿ ನಟ ಎಣ್ಣೆಯಲ್ಲಿ ಮುಖ ತೊಳ್ಕೊಂಡಿದ್ದಾರೆ ಎಂದ ವೀಕ್ಷಕರು