’ಬೆಟ್ಟದ ಹೂವು’ ನೆನೆಪನ್ನು ಮೆಲುಕು ಹಾಕಿದ ಪವರ್ ಸ್ಟಾರ್

Published : Dec 17, 2018, 01:31 PM ISTUpdated : Dec 17, 2018, 01:39 PM IST
’ಬೆಟ್ಟದ ಹೂವು’ ನೆನೆಪನ್ನು ಮೆಲುಕು ಹಾಕಿದ ಪವರ್ ಸ್ಟಾರ್

ಸಾರಾಂಶ

ಬೆಟ್ಟದ ಹೂವು ಚತ್ರ ನೆನೆದು ಬಾಲ್ಯಕ್ಕೆ ಜಾರಿದ ಪುನೀತ್ | ಶೂಟಿಂಗ್ ಸ್ಥಳಕ್ಕೆ ಹೋಗಿ ನೆನಪು ಮೆಲುಕು ಹಾಕಿದ ಪುನೀತ್ | 

ಬೆಂಗಳೂರು (ಡಿ. 17): ಬೆಟ್ಟದ ಹೂವು ಚಿತ್ರವನ್ನು ಯಾರು ತಾನೆ ಮರೆಯಲು ಸಾಧ್ಯ ಹೇಳಿ? ಈ ಸಿನಿಮಾದ ಬಿಸಿಲೇ ಇರಲಿ... ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೇ.... ಹಾಡಲ್ಲಿ ಬಾಲನಟನಾಗಿ ಪುನೀತ್ ಅಭಿನಯಿಸಿದ್ದಂತೂ ಅದ್ಭುತ. 34 ವರ್ಷಗಳ ನಂತರ ಈ ಚಿತ್ರದ ಶೂಟಿಂಗ್ ನಡೆದ ಜಾಗಕ್ಕೆ ಪುನೀತ್ ಹೋಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

ಈಗ ಅದೇ ಚಿತ್ರದ ಪೋಸ್ಟರ್ ಹಾಕಿ ಮರೆಯಲಾಗದ ನೆನಪುಗಳು ಎಂದು ಪೋಸ್ಟರ್ ಹಾಕಿದ್ದಾರೆ. 

 

ಪುನೀತ್ ರಾಜ್ ಕುಮಾರ್ ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಈ ಚಿತ್ರದ ಬಿಸಿಲೇ ಇರಲಿ.... ಮಳೆಯೇ ಇರಲಿ... ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಚಿತ್ರದ ಅದ್ಭುತ ಅಭಿನಯಕ್ಕೆ ಪುನೀತ್ ಗೆ ರಾಷ್ಟ್ರ ಪ್ರಶಸ್ತಿ ಕೂಡಾ ಬಂದಿದೆ. 

ಬೆಟ್ಟದ ಹೂವು ಚಿತ್ರ 1985 ರಲ್ಲಿ ತೆರೆ ಕಂಡ ಚಿತ್ರ. ಚಿತ್ರ ಬಿಡುಗಡೆಯಾಗಿ 33 ವರ್ಷಗಳೇ ಕಳೆದಿವೆ. ಈಗ ಪುನೀತ್ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.  ನಟ ಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿಗೆ ಹೋಗಿದ್ದಾಗ ಬೆಟ್ಟದ ಹೂವು ಚಿತ್ರೀಕರಣದ ಸ್ಥಳ ನೆನಪಾಗಿ ಅತ್ತಿಗುಂಡಿ ಕಡೆ ಹೋಗಿದ್ದಾರೆ. ಅಲ್ಲಿಂದ ವಿಡಿಯೋ ಮಾಡಿ ಶೂಟಿಂಗ್ ಸ್ಥಳದ ಬಗ್ಗೆ ವಿವರಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!