
ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಗೆದ್ದು, ನಂತರ ಪವರ್ ಸ್ಟಾರ್ ಆಗಿ ಮಿಂಚಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಹೀರೋ ಆಗಿ ಎಂಟ್ರಿ ಕೊಡುವ ಮುನ್ನ ಅಪ್ಪು ಅವರು ತಮ್ಮ ತಂದೆ ಡಾ. ರಾಜ್‌ಕುಮಾರ್ ಅವರ ಎರಡು ಮೆಗಾ ಹಿಟ್ ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ್ದರು ಎಂಬುದು ಬಹಳಷ್ಟು ಅಭಿಮಾನಿಗಳಿಗೆ ತಿಳಿದಿಲ್ಲ. ಆ ಎರಡು ಚಿತ್ರ ಯಾವುವು? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
1992ರಲ್ಲಿ ಬಿಡುಗಡೆಯಾದ ಡಾ. ರಾಜ್‌ಕುಮಾರ್ ಅವರ ಕಮ್‌ಬ್ಯಾಕ್ ಸಿನಿಮಾ ಜೀವನ ಚೈತ್ರಕ್ಕೆ ಪುನೀತ್ ಮೊದಲ ಬಾರಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡು, ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ (52 ವಾರಗಳು) ಪ್ರದರ್ಶನ ಕಂಡಿತ್ತು. ಅಣ್ಣಾವ್ರ ಸರಳ ಮತ್ತು ಆಕರ್ಷಕ ಉಡುಗೆಗಳ ಹಿಂದೆ ಪುನೀತ್ ಅವರ ಆಯ್ಕೆಯಿತ್ತು ಎನ್ನುವುದು ನಿಜವಾಗಿಯೂ ಆಸಕ್ತಿಕರ ವಿಚಾರ.
ಜೀವನ ಚೈತ್ರ ನಂತರ 1993ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ಆಕಸ್ಮಿಕದಲ್ಲೂ ಡಾ. ರಾಜ್‌ಕುಮಾರ್ ಅವರಿಗೆ ಪುನೀತ್ ವಸ್ತ್ರ ವಿನ್ಯಾಸ ಮಾಡಿದ್ದರು. ಚಿತ್ರದಲ್ಲಿ ಅಣ್ಣಾವ್ರು ಕಾಣಿಸಿಕೊಂಡಿದ್ದ ಸ್ಟೈಲಿಶ್ ಕಾಸ್ಟ್ಯೂಮ್‌ಗಳಿಗೆ ಅಪ್ಪು ಅವರೇ ಡಿಸೈನರ್ ಆಗಿದ್ದರು. ಈ ಚಿತ್ರವೂ 25 ವಾರಗಳ ಭರ್ಜರಿ ಪ್ರದರ್ಶನ ಕಂಡಿತ್ತು.
ಕೇವಲ ತಂದೆಗೆ ಮಾತ್ರವಲ್ಲದೆ, 1992 ರಲ್ಲಿ ತೆರೆಕಂಡ ಸಹೋದರ ರಾಘವೇಂದ್ರ ರಾಜ್‌ಕುಮಾರ್ ನಟನೆಯ 'ಭರ್ಜರಿ ಗಂಡು' (1992) ಮತ್ತು 1993ರಲ್ಲಿ ನಾವಿಬ್ಬರು ನಮಗಿಬ್ಬರು' (1993) ಚಿತ್ರಗಳಿಗೂ ಪುನೀತ್ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದರು. ನಟನೆ, ಗಾಯನ, ನಿರ್ಮಾಣದ ಜೊತೆಗೆ ವಸ್ತ್ರ ವಿನ್ಯಾಸದಲ್ಲೂ ತಮ್ಮ ಅಭಿರುಚಿಯನ್ನು ತೋರಿಸಿದ್ದ ಪುನೀತ್ ರಾಜ್‌ಕುಮಾರ್, ತಂದೆಯ ಎರಡು ಅತ್ಯಂತ ಯಶಸ್ವಿ ಚಿತ್ರಗಳ ತೆರೆಯ ಹಿಂದಿನ ಶಕ್ತಿಯಾಗಿದ್ದರು. ಬಾಲನಟನಾಗಿ ನಟನೆಗೆ ವಿರಾಮ ನೀಡಿದ ನಂತರ, ಪುನೀತ್ ಸುಮ್ಮನೆ ಕೂರದೆ ಸಿನಿಮಾ ನಿರ್ಮಾಣದ ವಿವಿಧ ವಿಭಾಗಗಳನ್ನು ಕಲಿಯಲು ಆರಂಭಿಸಿದರು. ತಂದೆ ಡಾ. ರಾಜ್‌ಕುಮಾರ್ ಅವರಿಗೆ ಯಾವ ಬಣ್ಣ ಮತ್ತು ಶೈಲಿಯ ಬಟ್ಟೆಗಳು ಚೆನ್ನಾಗಿ ಒಪ್ಪುತ್ತವೆ ಎಂಬುದನ್ನು ಅರಿತು, ಪುನೀತ್ ಸ್ವತಃ ಆಸಕ್ತಿಯಿಂದ ಕಾಸ್ಟ್ಯೂಮ್‌ಗಳನ್ನು ಆಯ್ಕೆ ಮಾಡಿ ವಿನ್ಯಾಸಗೊಳಿಸುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.