ಮುಂಬೈ[ಫೆ.18] ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕ್ ಕಲಾವಿದರಿಗೆ ನಿಷೇಧ ಹೇರಲಾಗಿದ್ದು ಬಾಲಿವುಡ್ ಅಭಿಮಾನಿಗಳ ಒತ್ತಾಯವೂ ಕೇಳಿ ಬಂದ ನಂತರ ಸಲ್ಮಾನ್ ಖಾನ್ ಮೊದಲ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಸಲ್ಮಾನ್ ತಮ್ಮ 'ನೋಟ್ಬುಕ್' ಹಾಗೂ 'ಭಾರತ್' ಚಿತ್ರದಲ್ಲಿಯ ಸಾಂಗ್ ರೀ-ರೆಕಾರ್ಡಿಂಗ್‌ನಲ್ಲಿ ಪಾಕ್ ಕಲಾವಿದರನ್ನು ಬಳಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಎರಡು ಚಿತ್ರಗಳಲ್ಲಿಯ ಒಂದೊಂದು ಹಾಡಿಗೆ ಪಾಕ್ ಗಾಯಕ ಅತಿಫ್ ಅಸ್ಲಾಮ್ ಹಾಗೂ ರಹಾತ್ ಫತೇಶ್ ಅಲಿ ಖಾನ್ ಧ್ವನಿ ನೀಡಿದ್ದಾರೆ. ನಿನ್ನೆಯಷ್ಟೆ ಪಾಕ್ ಕಲಾವಿದರಿಗೆ ಬಾಲಿವುಡ್ ಬ್ಯಾನ್ ಮಾಡಿದ್ದಕ್ಕೆ ಈ ಹಾಡುಗಳನ್ನು ಮರು ರೆಕಾರ್ಡಿಂಗ್ ಮಾಡಲು ಸಲ್ಮಾನ್ ನಿರ್ಧಾರ ಮಾಡಿದ್ದಾರೆ.
ಸುದ್ದಿಯನ್ನು ಅಧಿಕೃತವಾಗಿ ಪ್ರಕಟಮಾಡಿಲ್ಲವಾದರೂ ಸಲ್ಲು ಈ ಹೆಜ್ಜೆ ಇಡಲು ಸಿದ್ಧರಾಗಿರುವುದನ್ನು ಅವರ ಆಪ್ತ ವಲಯ ಹೇಳಿದೆ. ಒಟ್ಟಿನಲ್ಲಿ ಬಾಲಿವುಡ್ ತೆಗೆದುಕೊಂಡ ನಿರ್ಧಾರ ಪಾಕ್ ಕಲಾವಿದರ ಮೇಲೆ ಪರಿಣಾಮ ಬೀರುವುದೆಂತೂ ಸುಳ್ಳಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.