
ನಟಿಯೊಬ್ಬರು ಹೈದರಾಬಾದ್‌ನ ಪಬ್‌ನಲ್ಲಿ ಬರ್ತ್‌ಡೇ ಆಚರಿಸಲು ಹೋಗಿ ಕಿರಿಕ್ ಮಾಡಿಕೊಂಡಿದ್ದಾರೆ. ತೆಲುಗು ನಟಿ ಕಲ್ಪಿಕಾ ಗಣೇಶ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಹೈದರಾಬಾದ್‌ನ ಪ್ರತಿಷ್ಠಿತ ಪಬ್‌ಗೆ ಹೋಗಿದ್ದರು. ಈ ವೇಳೆ ಪಬ್‌ನ ಮ್ಯಾನೇಜ್‌ಮೆಂಟ್ ಹಾಗೂ ನಟಿ ಮಧ್ಯೆ ದೊಡ್ಡ ಕಿರಿಕ್ ಆಗಿದ್ದು, ನಟಿ ಪೊಲೀಸರನ್ನು ಕರೆದಿದ್ದಾರೆ. ಈ ಪೊಲೀಸರು ಕೂಡ ಪಬ್ ಪರವೇ ನಿಂತರು ಎಂದು ನಟಿ ಕಲ್ಪಿಕಾ ಆರೋಪಿಸಿದ್ದಾರೆ.
ಪಬ್‌ನಲ್ಲಿ ನನಗೆ ಗೌರವ ಕೊಡಲಿಲ್ಲ, ಬರ್ತ್‌ಡೇ ಆದರೂ ಕೇಕ್ ನೀಡಲು ನಿರಾಕರಿಸಿದರು ಎಂದು ಕಲ್ಪಿಕಾ ದೂರಿದ್ದಾರೆ. ಜೊತೆಗೆ ಈ ಗಲಾಟೆಯ ವೀಡಿಯೋವನ್ನು ಕಲ್ಪಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಕಲ್ಪಿಕಾ ಪ್ರೀ ಕೇಕ್‌ಗಾಗಿ ನೀಡದ್ದಕ್ಕೆ ಪಬ್ ವಿರುದ್ಧ ಆರೋಪ ಮಾಡಿದ್ದಾರೆ, ಉದ್ದೇಶಪೂರ್ವಕವಾಗಿ ಸೀನ್ ಕ್ರಿಯೇಟ್ ಮಾಡಿದ್ದಾರೆ ಎಂದು ದೂರಿದ್ದಾರೆ. ಹೈದರಾಬಾದ್‌ನ ಗಚ್ಚಿಬೌಲಿಯ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ.
ತನ್ನ ಬರ್ತ್‌ಡೇಯನ್ನು ಸ್ಪೆಷಲ್ ಆಗಿ ಆಚರಿಸಬೇಕು ಎಂದು ಕಲ್ಪಿಕಾ ತನ್ನ ಸ್ನೇಹಿತರೊಂದಿಗೆ ಗಚ್ಚಿಬೌಲಿಯ ಪಬ್‌ವೊಂದಕ್ಕೆ ಹೋಗಿದ್ದರು. ಅವರ ಜೊತೆ ವಿಶೇಷಚೇತನ ಸಂಗಾತಿಯೂ ಒಬ್ಬರು ಇದ್ದರು. ಕಲ್ಪಿಕಾ ಹೇಳುವ ಪ್ರಕಾರ, ಪಬ್ ಸಿಬ್ಬಂದಿ ಆಕೆಗೆ ಆಕೆಯ ಹುಟ್ಟುಹಬ್ಬದ ಗೌರವಾರ್ಥ ಕೇಕ್ ತರಲು ನಿರಾಕರಿಸಿದರು. ಅದರ ಬದಲು ಅವರು ಆಕೆಗೆ ಬ್ರೌನಿಯನ್ನು ನೀಡಿದರು. (ಬ್ರೌನಿ ಎಂಬುದು ಸ್ಮಾಲ್ ಪ್ಯಾಕೇಟ್ ಕೇಕ್ ಪೀಸ್) ಅಲ್ಲದೇ ಅವರು ಅದನ್ನು ಕೈನಲ್ಲಿ ನೀಡುವ ಬದಲು ಮೇಜಿನ ಮೇಲೆ ಎಸೆದರು ಎಂದು ಕಲ್ಪಿಕಾ ಆರೋಪಿಸಿದ್ದಾರೆ.
ಇದರಿಂದ ನಂತರ ಪಬ್ ಸಿಬ್ಬಂದಿಯ ಜೊತೆ ದೊಡ್ಡ ಗಲಾಟೆ ನಡೆದಿದ್ದು, ಈ ಗಲಾಟೆಯ ವೀಡಿಯೋವನ್ನು ಕಲ್ಪಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕ್ಲಬ್‌ನ ಸಿಬ್ಬಂದಿ ಹಾಗೂ ಕಲ್ಪಿಕಾ ಗಣೇಶ್ ಪರಸ್ಪರ ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯವಿದೆ. ವೀಡಿಯೋದಲ್ಲಿ ನಿಮ್ಮ ಗೌರವ ಹೋಗುವಂತೆ ಮಾಡುತ್ತೇನೆ ಎಂದು ಕಲ್ಪಿಕಾ ಪಬ್ ನಿರ್ವಾಹಕರಿಗೆ ಎಚ್ಚರಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಇದರ ನಡುವೆ ಪಬ್ ಮ್ಯಾನೇಜ್‌ಮೆಂಟ್ ಆಕೆಗೆ ಬಿಲ್ ಪಾವತಿ ಮಾಡುಂತೆ ಕೇಳಿದೆ. ಜೊತೆಗೆ ಸಣ್ಣ ವಿಷಯಕ್ಕೆ ಹುಟ್ಟುಹಬ್ಬದ ಖುಷಿಯನ್ನು ಹಾಳು ಮಾಡಿಕೊಳ್ಳದಂತೆ ಸಲಹೆ ನೀಡಿದೆ. ಅಲ್ಲದೇ ಬಿಲ್ ಪಾವತಿಸುವುದನ್ನು ತಪ್ಪಿಸುವುದಕ್ಕಾಗಿ ದೊಡ್ಡ ಸೀನ್ ಸೃಷ್ಟಿಸಿರುವುದಾಗಿ ಪಬ್ ಮ್ಯಾನೇಜ್‌ಮೆಂಟ್ ಆಕೆಯ ವಿರುದ್ಧ ಆರೋಪ ಮಾಡಿದ್ದಾರೆ.
ಈ ವೇಳೆ ಸಿಟ್ಟಿಗೆದ್ದ ಕಲ್ಪಿಕಾ ಬಿಲ್‌ನ್ನು ಹರಿದು ಕೋಪದಲ್ಲಿ ಎಸೆದಿದ್ದಾರೆ. ಈ ಮಧ್ಯೆ ಆಕೆ ಪೊಲೀಸರನ್ನು ಪಬ್‌ಗೆ ಕರೆಸಿದ್ದು, ಅವರು ಕೂಡ ಮ್ಯಾನೇಜ್‌ಮೆಂಟ್ ಪರವೇ ನಿಂತರೂ ಎಂದು ಆಕೆ ಆರೋಪಿಸಿದ್ದಾರೆ. ನನ್ನ ಸಮಸ್ಯೆ ಕೇಕ್ ಬಗ್ಗೆ ಅಲ್ಲ, ಬದಲಿಗೆ ನನಗೆ ಅವಮಾನಿಸಲಾಯ್ತು ಎಂದು ಕಲ್ಪಿಕಾ ಆರೋಪಿಸಿದ್ದಾರೆ. ಇದರ ಜೊತೆಗೆ 40 ನಿಮಿಷಗಳ ಪೂರ್ತಿ ವೀಡಿಯೋವನ್ನು ಕೂಡ ಕಲ್ಪಿಕಾ ಪೋಸ್ಟ್ ಮಾಡಿದ್ದು, ಅಲ್ಲಿನ ಸಿಬ್ಬಂದಿ, ನನ್ನ ಬಟ್ಟೆ ಕೂದಲು, ಗುರುತಿನ ಬಗ್ಗೆ ಅವಹೇಳನ ಮಾಡಿದರು ಎಂದು ಅವರು ಆರೋಪಿಸಿದ್ದಾರೆ.
ಈ ವೀಡಿಯೋ ನೋಡಿದ ಅನೇಕರು ನಟಿ ಕಲ್ಪಿಕಾ ಉಚಿತ ಟೀಕೆಗೆ ಬೇಡಿಕೆ ಇಟ್ಟು ಜಗಳ ತೆಗೆದಿದ್ದಾರೆ. ಎಲ್ಲಾ ಕಡೆ ಉಚಿತ ಕೇಕ್ ಕೊಡುವುದಿಲ್ಲ, ಕೊಡಬೇಕು ಎಂಬ ರೂಲ್ ಇಲ್ಲ, ಕೆಲವು ಪಬ್‌ಗಳಲ್ಲಿ ನೀಡುತ್ತಾರೆ ಅಷ್ಟೇ, ವ್ಯವಹಾರದಲ್ಲಿ ಉಚಿತವಾಗಿ ಏನನ್ನೂ ನೀಡಲಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.