ಕಥೆ ಕೊಡಿ, ಕೆ ಮಂಜು ಸಿನಿಮಾ ಮಾಡ್ತಾರೆ, ಒಂದು ಲಕ್ಷ ಕೊಡ್ತಾರೆ!

By Web DeskFirst Published Jun 25, 2019, 10:26 AM IST
Highlights

ನಿರ್ಮಾಪಕ ಕೆ ಮಂಜು ಲೇಖಕರಿಗೆ ಹಾಗೂ ಕತೆಗಾರರಿಗೆ ಒಂದು ವೇದಿಕೆ ಕೊಡಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರದ ಹೆಸರು ‘ಕೆ ಮಂಜು ಸ್ಕ್ರಿಪ್ಟ್ ಯೋಜನೆ’. ಈ ಮೂಲಕ ಸ್ವ ರಚಿತ
ಚಿತ್ರಕಥೆಗಳನ್ನು ಅಹ್ವಾನ ನೀಡಿದ್ದು, ತಜ್ಞರ ಸಮಿತಿ ಆಯ್ಕೆ ಮಾಡುವ ಕತೆಗೆ ಒಂದು ಲಕ್ಷ ರುಪಾಯಿ ನಗದು ಸಂಭಾವನೆ ಕೊಡಲಾಗುವುದು.

ಯಾರು ಕಳುಹಿಸಬಹುದು?

ಸಾಹಿತಿ, ಯುವ ಬರಹಗಾರರು, ಲೇಖರು, ಕತೆಗಾರರು ಹೀಗೆ ಬರೆಯುವ ಉತ್ಸಾಹ ಇರುವ ಯಾರು ಬೇಕಾದರೂ ಕತೆ ಕಳುಹಿಸಬಹುದು. ಹೊಸತನದಿಂದ ಕೂಡಿದ, ಈಗಿನ ಟ್ರೆಂಡ್‌ಗೆ ಸೂಕ್ತ ಎನಿಸುವ ಕತೆಗಳಿಗೆ ಮೊದಲ ಅದ್ಯತೆ. ಅಲ್ಲದೆ ಇದು ಸ್ವಮೇಕ್ ಕತೆ ಆಗಿರಬೇಕು. ಯಾವುದೇ ಕೃತಿ, ಕಾದಂಬರಿ, ಪ್ರಕಟಗೊಂಡ ಲೇಖನ ಅಥವಾ ನಾಟಕವನ್ನು
ಆಧರಿಸಿ ಕತೆ ಬರೆಯಬಾರದು.

ಎಲ್ಲಿಗೆ ಕಳುಹಿಸಬೇಕು?

ಕೆ ಮಂಜು, ನಂ.26, 7ನೇ ಮುಖ್ಯ ರಸ್ತೆ, 4ನೇ ಬ್ಲಾಕ್ ಜಯನಗರ, ಬೆಂಗಳೂರು- 560041. ಇಲ್ಲಿಗೆ ಅಂಚೆ ಮೂಲಕ ತಮ್ಮ ಕತೆಗಳನ್ನು ಕಳುಹಿಸಬಹುದು. ಜುಲೈ ೧೯ ಕತೆಗಳನ್ನು ಸಲ್ಲಿಸುವುದಕ್ಕೆ
ಕಡೆಯ ದಿನ.

ಷರತ್ತುಗಳೇನು?

ಚಿತ್ರದ ಕತೆಯ ಸಾರಾಂಶ ರೂಪದಲ್ಲಿ ಎರಡು ಪುಟ ಇರಬೇಕು. ಇದನ್ನು ಬೌಂಡ್ ಸ್ಕ್ರಿಪ್ಟ್ ಜತೆಗೆ ಲಗತ್ತಿಸಬೇಕು. ಚಿತ್ರಕಥೆ ಕನ್ನಡದಲ್ಲೇ ಇರಬೇಕು. ಜತೆಗೆ ಇದು ಟೈಪ್ ಮಾಡಿರಬೇಕು. ಕೈ ಬರಹಗಳನ್ನು ಸ್ವೀಕರಿಸಲಾಗದು. ಆಯ್ಕೆ ಸಮಿತಿ ಸೂಚಿಸಿದ ಕತೆಗಳನ್ನು ಪರಿಗಣಿಸಲಾಗುವುದು. ಒಬ್ಬರು ಒಂದೇ ಚಿತ್ರಕಥೆ ಕಳುಹಿಸಬೇಕು.

ಆಯ್ಕೆಯಾದ ಕತೆಗೆಷ್ಟು ದುಡ್ಡು?

ಆಯ್ಕೆ ಆದ ಕತೆಗಳು ಕೆ ಮಂಜು ಫಿಲಮ್ಸ್‌ಗೆ ಸೇರಿದ್ದು, ಹೀಗೆ ಆಯ್ಕೆಗೊಂಡ ಒಂದು ಕತೆಗೆ ಒಂದು ಲಕ್ಷ ರುಪಾಯಿಗಳನ್ನು ಲೇಖಕ ಹಾಗೂ ಕತೆಗಾರನಿಗೆ ನೀಡಲಾಗುವುದು. ಆಯ್ಕೆ ಆಗದ ಕತೆಗಳನ್ನು ಬರೆದವರಿಗೆ ವಾಪಸ್ಸು ತಲುಪಿಸಲಾಗುವುದು.

ನೇರ ಭೇಟಿ:

ಕತೆಗಳ ಜತೆಗೆ ನಿರ್ಮಾಪಕ ಕೆ ಮಂಜು ಅವರನ್ನು ನೇರವಾಗಿ ಭೇಟಿ ಮಾಡಬಹುದು. ಶನಿವಾರ ಮತ್ತು ಭಾನುವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ಒಳಗೆ ಅವರ ನಿವಾಸದಲ್ಲಿ ಭೇಟಿಯಾಗಬಹುದು. 

 

click me!