‘ಐ ಲವ್ ಯೂ’ ಚಿತ್ರದಲ್ಲಿ ಉಪ್ಪಿ-ರಚಿತಾ ರಾಮ್ ರೊಮ್ಯಾನ್ಸ್ | ರಚಿತಾ ರಾಮ್ ಹೇಳಿಕೆ ಮೇಲೆ ಪ್ರಿಯಾಂಕ ಉಪೇಂದ್ರ ಫುಲ್ ಗರಂ
ನಟಿ ರಚಿತಾ ರಾಮ್ ಮೇಲೆ ಉಪ್ಪಿ ಪತ್ನಿ ಪ್ರಿಯಾಂಕ ಉಪೇಂದ್ರ ಗರಂ ಆಗಿದ್ದಾರೆ.
ಉಪೇಂದ್ರ ಹಾಗೂ ರಚಿತಾ ರಾಮ್ ಬಹುನಿರೀಕ್ಷಿತ ಚಿತ್ರ I love u ಚಿತ್ರದ ಹಸಿಬಿಸಿ ದೃಶ್ಯಗಳ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ. ಈ ವೇಳೆ ಉಪೇಂದ್ರ ಹೆಸರು ಉಲ್ಲೇಖಿಸಿದ್ದಕ್ಕೆ ಪತ್ನಿ ಪ್ರಿಯಾಂಕ ಉಪೇಂದ್ರ ಗರಂ ಆಗಿದ್ದಾರೆ.
ಐ ಲವ್ ಯು ಟೀಂ ವಿರುದ್ಧ ಸಿಟ್ಟಾಗಿದ್ದಾರಾ ರಚಿತಾ ?
ರಚಿತಾ ರಾಮ್ ಚಿತ್ರರಂಗಕ್ಕೆ ಹೊಸಬರಲ್ಲ. ಅವರು ತಮ್ಮ ಅಭಿನಯದ ಬಗ್ಗೆ ಹೇಳಲಿ ಅದು ಬಿಟ್ಟು ಉಪೇಂದ್ರ ಬಗ್ಗೆ ಅಲ್ಲ. ಇಡೀ ಚಿತ್ರ ಕೌಟುಂಬಿಕ ಕಥಾ ವಸ್ತು ಇದೆ. ಚಿತ್ರದ ಕಥೆಯನ್ನು ನಾನು ಕೇಳಿದ್ದೇನೆ. ಈ ಹಾಡಿನ ಬಗ್ಗೆ ಮಾಹಿತಿ ಇರಲಿಲ್ಲ. ಟ್ರೇಲರ್ ನೋಡಿದ ನಂತರವೇ ಈ ಬಗ್ಗೆ ತಿಳಿದಿದ್ದು ಎಂದು ಪ್ರಿಯಾಂಕ ಹೇಳಿದ್ದಾರೆ.
ರಷ್ಯಾದಲ್ಲಿ ನೆಟ್ ಇರ್ಲಿಲ್ವ, ಮತ್ತೆ ಟ್ರೋಲ್ ಆದ ಸ್ವರಾ ಭಾಸ್ಕರ್
ಈ ಹಾಡನ್ನ ಉಪೇಂದ್ರ ನಿರ್ದೇಶಿಸಿದ್ದಾರೆ ಅಂತಾರೆ. ಇದೆಲ್ಲಾ ಹೇಗೆ ಸಾಧ್ಯ? ಹಸಿಬಿಸಿ ದೃಶ್ಯಗಳಿಗೆ ಉಪೇಂದ್ರ ಕಾರಣ ಅನ್ನೋ ಥರದ ಮಾತುಗಳು ಬೇಡ ಎಂದಿದ್ದಾರೆ.