ನೆಗೆಟಿವ್ ಕಾಮೆಂಟಿಗೆ ಪ್ರಿಯಾಂಕ ಚೋಪ್ರಾ ದಿಟ್ಟ ಉತ್ತರ!

By Web Desk  |  First Published Jun 6, 2019, 2:18 PM IST

ನೆಗೆಟಿವ್ ಕಾಮೆಂಟ್‌ಗೆ ಪ್ರಿಯಾಂಕ ಚೋಪ್ರಾ ದಿಟ್ಟ ಉತ್ತರ! ಪತಿ ನಿಕ್ ಜೊತೆಗಿನ ಫೋಟೋಗಳು ವೈರಲ್ | 


ಟ್ರೋಲಿಗರಿಗೂ ಪ್ರಿಯಾಂಕಾಗೂ ಅವಿನಾಭಾವ ನಂಟು. ಪ್ರಿಯಾಂಕಾ ಏನೇ ಮಾಡಿದರೂ ಅದು ಟ್ರೋಲಿಗರಿಗೆ ಒಳ್ಳೆಯ ಸರಕಾಗಿ ಪರಿಣಮಿಸುತ್ತಿದೆ. ಇತ್ತೀಚೆಗೆ ಪತಿ ನಿಕ್‌ ಜಾನ್‌ರೊಟ್ಟಿಗೆ ಇರುವ ಫೋಟೋಗಳು, ಪರಸ್ಪರ ಅಪ್ಪುಗೆ, ಮುತ್ತು ಕೊಡುವ ಫೋಟೋಗಳೆಲ್ಲವನ್ನೂ ಪ್ರಿಯಾಂಕ ಸೋಷಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದರು.

Tap to resize

Latest Videos

ಇವೆಲ್ಲವೂ ಟ್ರೋಲ್‌ ಆಗಿ ನೆಗೆಟಿವ್‌ ಕಾಮೆಂಟ್‌ಗಳೂ ಬರುತ್ತಿದ್ದವು. ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ ಪ್ರಿಯಾಂಕಾ ಚೋಪ್ರಾ. ಅದು ಹೀಗೆ-

‘ನಾನೊಬ್ಬಳು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಹೀಗೆಲ್ಲಾ ಆಗುತ್ತಿದೆ. ನಾನು ನಿಕ್‌ ಜಾನ್‌ ಜೊತೆಗೆ ಇರುವ ಫೋಟೋಗಳನ್ನು ಶೇರ್‌ ಮಾಡಿ ಮತ್ತಷ್ಟು ಪ್ರಸಿದ್ಧಿ ಹೊಂದಬೇಕಾದ ಅಗತ್ಯ ಇಲ್ಲ. ನಾನು ಸಾರ್ವಜನಿಕ ವ್ಯಕ್ತಿಯಾಗಿ ಏನೇನು ಶೇರ್‌ ಮಾಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ನನ್ನ ವೈಯಕ್ತಿಕ ಜೀವನದ ಸಾಕಷ್ಟುಮಾಹಿತಿಗಳನ್ನು ನಾನು ನನ್ನೊಳಗೇ ಇಟ್ಟುಕೊಂಡಿದ್ದೇನೆ. ಯಾವುದನ್ನು ಹಂಚಿಕೊಳ್ಳಬೇಕೋ ಅದನ್ನು ಮಾತ್ರವೇ ಹಂಚಿಕೊಂಡಿದ್ದೇನೆ’ ಎಂದು ಹೇಳುವ ಮೂಲಕ ತನ್ನ ಬಗ್ಗೆ ಬರುತ್ತಿದ್ದ ನೆಗೆಟಿವ್‌ ಕಾಮೆಂಟ್‌ಗಳಿಗೆ ಉತ್ತರ ಕೊಟ್ಟಿದ್ದಾರೆ ಪ್ರಿಯಾಂಕಾ ಚೋಪ್ರಾ.

click me!