ಸೋಷಿಯಲ್ ಮೀಡಿಯಾಗೆ ರಕ್ಷಿತ್ ಶೆಟ್ಟಿ ವಾಪಸ್ | ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಾಯಣ ಟೀಸರ್ ಗಿಫ್ಟ್ | ಟ್ವಿಟರ್ ನಲ್ಲಿ ಮೊದಲ ಸಂದೇಶ ಏನ್ ಗೊತ್ತಾ?
ಸ್ಯಾಂಡಲ್ ವುಡ್ ಕಿರಿಕ್ ಹುಡುಗ, ಸಿಂಪಲ್ ಸ್ಟಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜೊತೆಗೆ ಸೋಷಿಯಲ್ ಮೀಡಿಯಾಗೆ ವಾಪಸ್ಸಾಗಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಡಬಲ್ ಸಂಭ್ರಮ.
‘ಕಿರಿಕ್ ಹುಡುಗ’ನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ
‘ಅಭಿಮಾನಿಗಳ ಜತೆ ನೇರ ಸಂಪರ್ಕದಲ್ಲಿರುವುದಕ್ಕೆ ಸೋಷಲ್ ಮೀಡಿಯಾ ದೊಡ್ಡ ಮಟ್ಟದಲ್ಲಿ ಸೇತುವೆ ಆಗುತ್ತಿದೆ. ಅದರಿಂದ ನಾನು ಇಷ್ಟುದಿನ ದೂರ ಇದ್ದೆ. ಈಗ ಮತ್ತೆ ಸೋಷಲ್ ಮೀಡಿಯಾಗೆ ಮರಳುತ್ತಿದ್ದೇನೆ. ಟೀಮ್ ರಕ್ಷಿತ್ ಶೆಟ್ಟಿಹೆಸರಿನಲ್ಲಿ ನೇರವಾಗಿ ಅಭಿಮಾನಿಗಳ ಜತೆ ಮಾತನಾಡುತ್ತೇನೆ. ನನ್ನ ಚಿತ್ರಗಳ ವಿವರಣೆಗಳನ್ನು ಹೇಳುತ್ತೇನೆ. ಸದ್ಯಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ಹೊಸ ವಿಚಾರಗಳನ್ನು ಹೇಳಲಿದ್ದೇನೆ’ ಎಂದಿದ್ದರು. ಈಗ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾಗೆ ವಾಪಸ್ಸಾಗಿದ್ದಾರೆ. ಅವರ ಮೊದಲ ಸಂದೇಶ ಏನು ಗೊತ್ತಾ?
Was there a silence before the storm? 😎
— Rakshit Shetty (@rakshitshetty)ಬಿರುಗಾಳಿ ಏಳುವ ಮುನ್ನ ಮೌನವಿತ್ತಾ? ಎಂದು ಹಾಕಿದ್ದಾರೆ. ಇದರ ಅರ್ಥವೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇಷ್ಟು ದಿನ ಸೈಲೆಂಟಾಗಿದ್ದೆ. ಈಗ ವಾಪಸ್ಸಾಗಿದ್ದೇನೆ. ಇನ್ನು ಮುಂದೆ ಹವಾ ಶುರುವಾಗುತ್ತದೆ ಎಂಬರ್ಥದಲ್ಲಿ ಹೇಳಿರಬಹುದಾ? ಎಂದು ಅಭಿಮಾನಿಗಳು ಅರ್ಥೈಸಿಕೊಂಡಿದ್ದಾರೆ.