ಈ 'ಮನಿ ಕ್ವೀನ್' ಭಾರತದ ಅತ್ಯಂತ ದುಬಾರಿ ನಟಿ.. ಸ್ಟಾರ್ ಹೀರೋ ಅಲ್ಲ, ಇವ್ರ ಕಾಲ್‌ಶೀಟ್ ಸಿಗೋದೇ ಕಷ್ಟವಂತೆ!

Published : Aug 04, 2026, 12:26 AM IST
Priyanka Chopra

ಸಾರಾಂಶ

ಕಳೆದ ಆರು ವರ್ಷಗಳಿಂದ ಬಾಲಿವುಡ್‌ನಿಂದ ದೂರವಿದ್ದು ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ, ಈಗ ಹತ್ತಕ್ಕೂ ಹೆಚ್ಚು ಇಂಗ್ಲಿಷ್ ಪ್ರಾಜೆಕ್ಟ್‌ಗಳನ್ನು ಮುಗಿಸಿ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಸಂಭಾವನೆ ಈಗ ಎಷ್ಟು ಗೊತ್ತಾ? ಶಾಕ್ ಆಗ್ತೀರಾ…!

Priyanka Chopra- India's No 1 Highiest Paid Indian Actress: ಸ್ಟಾರ್ ಹೀರೋಗಿಂತಲೂ ಕಾಲ್‌ಶೀಟ್ ಸಿಗೋದು ಇವ್ರದ್ದೇ ಕಷ್ಟ! ಯಾರು ಗೊತ್ತಾ ಈ ಸುಂದರಿ?

ಸಾಮಾನ್ಯವಾಗಿ ಚಿತ್ರರಂಗ ಅಂದ್ರೆ ಅಲ್ಲಿ ಹೀರೋಗಳದ್ದೇ ಅಬ್ಬರ, ನಾಯಕ ನಟರಿಗೇ ಕೋಟಿ ಕೋಟಿ ಸಂಭಾವನೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಈಗ ಕಾಲ ಬದಲಾಗಿದೆ. ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕ್ಯೂ ನಿಲ್ಲುವಂತೆ ಮಾಡಿರೋದು ಒಬ್ಬ ಹೀರೋ ಅಲ್ಲ, ಬದಲಿಗೆ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ! ಸದ್ಯ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ, ಟಾಲಿವುಡ್‌ನಿಂದ ಹಾಲಿವುಡ್‌ವರೆಗೆ ಎಲ್ಲಿ ಕೇಳಿದ್ರೂ ಪ್ರಿಯಾಂಕಾ ಚೋಪ್ರಾ (Priyanka Chopra) ಅವರದ್ದೇ ಮಾತು. ಅದಕ್ಕೆ ಕಾರಣ ಅವರು ಪಡೆಯುತ್ತಿರುವ ಬೃಹತ್ ಮೊತ್ತದ ಸಂಭಾವನೆ.

ರೆಕಾರ್ಡ್ ಬ್ರೇಕ್ ಮಾಡಿದ 'ದೇಶಿ ಗರ್ಲ್'!

ಹೌದು, ಪ್ರಿಯಾಂಕಾ ಚೋಪ್ರಾ ಈಗ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಪಟ್ಟಕ್ಕೇರಿದ್ದಾರೆ. ಮೊನ್ನೆಯವರೆಗೂ ಒಂದು ಚಿತ್ರಕ್ಕೆ 20 ಕೋಟಿ ರೂಪಾಯಿ ಪಡೆಯುತ್ತಿದ್ದ ಈ ಸುಂದರಿ, ಈಗ ತಾನು ನಟಿಸುತ್ತಿರುವ 'ವಾರಣಾಸಿ' ಎಂಬ ತೆಲುಗು ಸಿನಿಮಾಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ! ಈ ಮೂಲಕ ಲೇಡಿ ಸೂಪರ್‌ಸ್ಟಾರ್ ನಯನತಾರಾ (15 ಕೋಟಿ), ತ್ರಿಷಾ (15 ಕೋಟಿ) ಮತ್ತು ಸಾಯಿ ಪಲ್ಲವಿ (20 ಕೋಟಿ - ರಾಮಾಯಣ ಚಿತ್ರಕ್ಕಾಗಿ) ಅವರನ್ನೆಲ್ಲಾ ಸಂಭಾವನೆ ವಿಚಾರದಲ್ಲಿ ಪ್ರಿಯಾಂಕಾ ಹಿಂದಿಕ್ಕಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಸಿನಿಮಾದಲ್ಲಿ ಪ್ರಿಯಾಂಕಾ ದರ್ಬಾರ್!

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ, ಸಿನಿಮಾ ಮಾಂತ್ರಿಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಚಿತ್ರ 'ವಾರಣಾಸಿ' (SSMB29) ಮೇಲೆ ಇಡೀ ವಿಶ್ವದ ಕಣ್ಣಿದೆ. ಸುಮಾರು 1,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಾಯಕ. ಈ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಮತ್ತೆ ತೆಲುಗು ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ರಾಮ್ ಚರಣ್ ಜೊತೆ 'ತುಫಾನ್' ಸಿನಿಮಾದಲ್ಲಿ ಮಿಂಚಿದ್ದ ಪ್ರಿಯಾಂಕಾ, ಈಗ ಜಕ್ಕಣ್ಣನ ದೃಶ್ಯಕಾವ್ಯದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಅಭಿಮಾನಿಗಳ ದೊಡ್ಡ ಕುತೂಹಲ.

ಸತತ 7 ಫ್ಲಾಪ್‌ಗಳ ನಡುವೆಯೂ ಎದ್ದು ಬಂದ ಫೀನಿಕ್ಸ್!

ಪ್ರಿಯಾಂಕಾ ಚೋಪ್ರಾ ಅವರ ಇಂದಿನ ಈ ಯಶಸ್ಸಿನ ಹಿಂದೆ ದೊಡ್ಡ ಹೋರಾಟವೇ ಇದೆ. 2002ರಲ್ಲಿ ವಿಜಯ್ ನಟನೆಯ 'ತಮಿಜಾನ್' ಮೂಲಕ ಕೆರಿಯರ್ ಶುರು ಮಾಡಿದ ಇವರು ಬಾಲಿವುಡ್‌ನಲ್ಲಿ ಸ್ಟಾರ್ ಆದರು. ಆದರೆ 2006 ರಿಂದ 2008ರ ಅವಧಿಯಲ್ಲಿ ಇವರು ನಟಿಸಿದ ಸತತ 7 ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿದವು. ಎಲ್ಲರೂ ಪ್ರಿಯಾಂಕಾ ಕೆರಿಯರ್ ಮುಗಿಯಿತು ಅಂದುಕೊಂಡಾಗ 'ದೋಸ್ತಾನಾ' ಚಿತ್ರದ ಮೂಲಕ ಫೀನಿಕ್ಸ್‌ನಂತೆ ಎದ್ದು ಬಂದರು. ಅಂದಿನಿಂದ ಇಂದಿನವರೆಗೆ ಅವರು ತಿರುಗಿ ನೋಡಿಯೇ ಇಲ್ಲ.

ಕಳೆದ ಆರು ವರ್ಷಗಳಿಂದ ಬಾಲಿವುಡ್‌ನಿಂದ ದೂರವಿದ್ದು ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ, ಈಗ ಹತ್ತಕ್ಕೂ ಹೆಚ್ಚು ಇಂಗ್ಲಿಷ್ ಪ್ರಾಜೆಕ್ಟ್‌ಗಳನ್ನು ಮುಗಿಸಿ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ಯಾವ ಭಾಷೆಯಲ್ಲೇ ನಟಿಸಿದರೂ ಆ ಸಿನಿಮಾ ಹಿಟ್ ಆಗುತ್ತೆ ಅನ್ನೋ ನಂಬಿಕೆ ನಿರ್ಮಾಪಕರಲ್ಲಿದೆ. ಹೀಗಾಗಿಯೇ ಅವರಿಗೆ ಕೇಳಿದಷ್ಟು ಸಂಭಾವನೆ ನೀಡಲು ಸಿನಿವಲಯ ರೆಡಿಯಾಗಿದೆ. ಒಟ್ಟಿನಲ್ಲಿ ಹಾಲಿವುಡ್‌ನಿಂದ ಟಾಲಿವುಡ್‌ಗೆ ಲಗ್ಗೆ ಇಟ್ಟಿರೋ ಈ ಸುಂದರಿಯ 'ವಾರಣಾಸಿ' ಸಿನಿಮಾ ಸೃಷ್ಟಿಸಲಿರೋ ದಾಖಲೆಗಳಿಗೆ ಈಗಿನಿಂದಲೇ ಕೌಂಟ್ ಡೌನ್ ಶುರುವಾಗಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lenin OTT: 100 ಕೋಟಿ ಕ್ಲಬ್ ಸೇರಿದ ಅಖಿಲ್ ಸಿನಿಮಾ ಓಟಿಟಿಗೆ: ಯಾವಾಗ, ಎಲ್ಲಿ ಸ್ಟ್ರೀಮಿಂಗ್?
4 ನಿಮಿಷದ ಸ್ಪೆಷಲ್ ಸಾಂಗ್‌ಗೆ 1 ಕೋಟಿ? ಕೀರ್ತಿ ಸುರೇಶ್ ಸಂಭಾವನೆ ಸತ್ಯಾಸತ್ಯತೆ ಏನು?