ಟಿವಿ ಶೋನಲ್ಲಿ ಗಾಯಗೊಂಡ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

Published : Jan 14, 2017, 07:50 AM ISTUpdated : Apr 11, 2018, 12:52 PM IST
ಟಿವಿ ಶೋನಲ್ಲಿ ಗಾಯಗೊಂಡ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ಸಾರಾಂಶ

ಅವರ ತಲೆಗೆ ಪೆಟ್ಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಟಿವಿ ಶೋನಲ್ಲಿ ನಟಿಸುತ್ತಿರುವಾಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮೆರಿಕಾದ ಎಬಿಸಿ ಚಾನಲ್'ನಲ್ಲಿ ಪ್ರಸಾರವಾಗುವ 'ಕ್ವಾಟಿಕೊ' ಟಿವಿ ಶೋ ಕಾರ್ಯಕ್ರಮದಲ್ಲಿ ಕಳೆದ 2 ವರ್ಷದಿಂದ ಈ ಕಾರ್ಯಕ್ರಮದಲ್ಲಿ ನಟಿಸುತ್ತಿರುವ 34 ವರ್ಷದ ನಟಿ ನಿನ್ನೆ ಸಾಹಸ ದೃಶ್ಯದಲ್ಲಿ ನಟಿಸುವಾಗ ಆಯತಪ್ಪಿ ಬಿದ್ದಿದ್ದಾರೆ. ಅವರ ತಲೆಗೆ ಪೆಟ್ಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಕೆಲವು ಗಂಟೆಗಳ ಚಿಕಿತ್ಸೆಯ ನಂತರ  ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ವೈದ್ಯರ ಸಲಹೆ ಮೇರೆಗೆ ಪ್ರಸ್ತುತ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ' ಎಂದು ಎಬಿಸಿ ಸಂಸ್ಥೆ ದೃಢಪಡಿಸಿದೆ.ಭಾನುವಾರ ನಡೆದ 74ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ವಾರ್ಷಿಕ ಪ್ರಶಸ್ತಿ ಸಮಾರಂಭದಿಂದ ವಾಪಸಾದ ಬಳಿಕ ಈ ಘಟನೆ ಸಂಭವಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 Grand Finale Winner Gilli Nata:‌ ಆರು ಶೋ ಸೋತು, ಬಿಗ್‌ ಬಾಸ್ ಗೆದ್ದ ಪಳಾರ್ ಗಿಲ್ಲಿ ನಟ
ಭಾರತದ Bigg Boss ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ನಟ ಕಿಚ್ಚ ಸುದೀಪ್​- ಏನಿದು ರೆಕಾರ್ಡ್​?