ಹುಚ್ಚ ವೆಂಕಟ್, ಸ್ವಾಮಿ ಓಂ ದಾಖಲೆ ಮುರಿದ ಸ್ಪರ್ಧಿ!, ಮೊದಲ ವಾರದಲ್ಲೇ 'ಬಿಗ್' ಮನೆಯಿಂದ ಎವಿಕ್ಟ್!: ಕಾರಣವೇನು?

Published : Oct 09, 2017, 02:12 PM ISTUpdated : Apr 11, 2018, 01:07 PM IST
ಹುಚ್ಚ ವೆಂಕಟ್, ಸ್ವಾಮಿ ಓಂ ದಾಖಲೆ ಮುರಿದ ಸ್ಪರ್ಧಿ!, ಮೊದಲ ವಾರದಲ್ಲೇ 'ಬಿಗ್' ಮನೆಯಿಂದ ಎವಿಕ್ಟ್!: ಕಾರಣವೇನು?

ಸಾರಾಂಶ

ಬಿಗ್ ಬಾಸ್ ಹೆಸರು ಕೇಳಿದ್ರೆ ಸಾಕು ಚರ್ಚೆ, ಜಗಳವೇ ನೆನಪಾಗುವುದು. ಈ ಶೋ ಹಲವಾರು ಕಿರಿಕ್'ಗಳಿಂದಲೇ ಫೇಮಸ್ ಆಗಿದ್ದರೂ ಇದನ್ನು ವೀಕ್ಷಿಸುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮೊದಲು ಬಿಗ್ ಮನೆಯಲ್ಲಿ ಜಗಳವಾಗುತ್ತಿತ್ತಾದರೂ, ಮನೆಯ ಸದಸ್ಯರು ಹೊಡೆದಾಡಿಕೊಂಡು ಹೊರ ಬಂದಿದ್ದು ಮಾತ್ರ ಕಳೆದ ಸೀಜನ್'ನಲ್ಲೇ ಮೊದಲು. ಕನ್ನಡದ ಬಿಗ್ ಬಾಸ್'ನಲ್ಲಿ ಹುಚ್ಚ ವೆಂಕಟ್, ಪ್ರತಿಸ್ಪರ್ಧಿ ರವಿ ಮುರೂರ್ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಎವಿಕ್ಟ್ ಆಗಿದ್ದರೆ, ಹಿಂದಿಯ ಬಿಗ್ ಬಾಸ್'ನಲ್ಲಿ ತರರ ಮೇಲೆ ಮೂತ್ರವೆರಚಿದ ವಿಚಾರವಾಗಿ 'ಸ್ವಾಮಿ ಓಂ' ರನ್ನು ಹೊರ ಕಳುಹಿಸಲಾಗಿತ್ತು. ಮನೆಯೊಳಗಿನ ಸದಸ್ಯರನ್ನು ಹೀಗೆ ಶೋ ಮಧ್ಯದಲ್ಲೇ ಹೊರ ಕಳುಹಿಸಿದ್ದು, ಬಿಗ್ ಬಾಸ್ ಇತಿಹಾಸದಲ್ಲೇ ಮೊಸಲು. ಆದರೀಗ ವೆಂಕಟ್ ಹಾಗೂ ಸ್ವಾಮಿ ಓಂ ಹೆಸರಿನಲ್ಲಿದ್ದ  ಬಿಗ್ ಬಾಸ್ ದಾಖಲೆಯನ್ನು ಹೊಸ ಸ್ಪರ್ಧಿಯೊಬ್ಬ ಮುರಿದಿದ್ದಾನೆ. ಅಷ್ಟಕ್ಕೂ ಆತ ಯಾರು ಅಂತೀರಾ? ಇಲ್ಲಿದೆ ನೋಡಿ ವಿವರ

ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಬೇಕಾದರೆ ಅಲ್ಲಿನ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಂತಹ ನಿಯಮಗಳಲ್ಲಿ ಅತಿ ದೊಡ್ಡ ನಿಯಮವೆಂದರೆ ಯಾವುದೇ ಒಬ್ಬ ಸ್ಪರ್ಧಿ ತನ್ನ ಸಹ ಸ್ಪರ್ಧಿ ಮೇಲೆ ಕೈ ಮಾಡುವಂತಿಲ್ಲ. ಈ ನಿಯಮವನ್ನು ಅಪ್ಪಿ ತಪ್ಪಿಯಾದರೂ ಉಲ್ಲಂಘಿಸಿದರೆ ಮನೆಯಿಂದ ಹೊರಹೋಗುವುದು ಅನಿವಾರ್ಯ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಕನ್ನಡ ಬಿಗ್ ಬಾಸ್ ಸೀಜನ್ 4ರಲ್ಲಿ ಹುಚ್ಚ ವೆಂಕಟ್, ರವಿ ಮುರೂರ್ ಮೇಲೆ ನಡೆಸಿದ ಹಲ್ಲೆ, ಹಾಗೂ ಹಿಂದಿಯ ಸೀಜನ್ 10ರಲ್ಲಿ ಸ್ವಾಮಿ ಓಂ ಸಹಸ್ಪರ್ಧಿಗಳ ಮೇಲೆ ಮೂತ್ರವೆರಚಿ ಉದ್ಧಟತನ ಮೆರೆದ ರೀತಿ. ಈ ಇಬ್ಬರನ್ನು ಯಾವುದೇ ಮುಲಾಜಿಲ್ಲದೆ, ಅದೆಷ್ಟೇ ಕ್ಷಮೆ ಯಾಚಿಸಿದರೂ ಬಿಗ್ ಬಾಸ್ ಮನೆಯಿಂದ ಹೊರ ದಬ್ಬಲಾಗಿತ್ತು. ಈ ವಿಚಾರ ಬಹಳಷ್ಟು ಸದ್ದು ಮಾಡಿತ್ತು, ಯಾಕೆಂದರೆ ಬಿಗ್ ಬಾಸ್ ಕಾರ್ಯಕ್ರಮದ ಇತಿಹಾಸದಲ್ಲಿ ಸ್ಪರ್ಧಿಯೊಬ್ಬ ನಾಮಿನೇಟ್ ಆಗದೆ, ಎವಿಕ್ಟ್ ಆಗಿದ್ದು ಅದೇ ಮೊದಲು. ಈ ಎರಡೂ ಪ್ರಕರಣಗಳು ಒಂದೇ ವರ್ಷ ನಡೆದಿತ್ತು ಎಂಬುವುದು ಇನ್ನೂ ವಿಶೇಷ.

ಆದರೆ ಇಬ್ಬರೂ(ಹುಚ್ಚ ವೆಂಕಟ್ ಮತ್ತು ಸ್ವಾಮಿ ಓಂ) ಕೆಲ ಸಮಯ ಕನಿಷ್ಟ ಮೂರು ವಾರ ಮನೆಯೊಳಗಿದ್ದರು. ಆದರೀಗ  ಇಬ್ಬರ ದಾಖಲೆಯನ್ನು ಹಿಂದಿ ಬಿಗ್ ಬಾಸ್ ಸೀಜನ್ 11ರ ಸ್ಪರ್ಧಿ ಪ್ರಿಯಾಂಕ್ ಶರ್ಮಾ ಮುರಿದಿದ್ದಾರೆ!. ಹೌದು ಇವರನ್ನು ಮನೆಯೊಳಗೆ ಪ್ರವೇಶ ಪಡೆದ ಮೊದಲ ವಾರದಲ್ಲೇ ಮನೆಯಿಂದ ಎವಿಕ್ಟ್ ಮಾಡಲಾಗಿದೆ.

ಯಾರು ಈ ಪ್ರಯಾಂಕ್ ಶರ್ಮಾ? 'ಬಿಗ್' ಮನೆಯಲ್ಲಿ ನಡೆದಿದ್ದೇನು?

ಹಿಂದಿ ಬಿಗ್ ಬಾಸ್ ಸೀಜನ್ 11 ಆರಂಭವಾದ ಮೊದಲ ವಾರದಲ್ಲೇ ಮನೆಯೊಳಗಿರುವ ಸ್ಪರ್ಧಿಗಳ ಕೆಟ್ಟ ಸ್ವಭಾವ ಹಾಗೂ ಕೆಟ್ಟ ಮಾತುಗಳಿಂದ ವಿವಾದ ಮೂಡಿಸಿದೆ. ಆದರೂ ಈ ಸ್ಪರ್ಧಿಗಳ ಪೈಕಿ ಉತ್ತಮ ನಡವಳಿಕೆಯಿಂದಿದ್ದ ಪ್ರಿಯಾಂಕ್ ಶರ್ಮಾ ಎವಿಕ್ಟ್ ಆಗಿದ್ದಾರೆ. ಸಹ ಸ್ಪರ್ಧಿಯ ನೆರವಿಗೆ ಧಾವಿಸಿ ತನ್ನ ಕಾಲಿಗೆ ತಾನೇ ಕೊಡಲಿಯೇಟು ನೀಡಿದ್ದಾರೆ ಈ ಸ್ಪರ್ಧಿ.

ವಾಸ್ತವವಾಗಿ ಆರನೇ ದಿನ(ಶುಕ್ರವಾರ)ದಂದು ರಾತ್ರಿ 12 ಗಂಟೆಗೆ ಮನೆಯಲ್ಲಿರುವ ಸದಸ್ಯರಾದ ವಿಕಾಸ್ ಗುಪ್ತಾ ಹಾಗೂ ಆಕಾಶ್ ಅನಿಲ್ ದದ್ಲಾನಿ ನಡುವೆ ಜಗಳವೇರ್ಪಟ್ಟಿದೆ. ಈ ಜಗಳ ಅತಿರೇಕಕ್ಕೆ ತಿರುಗಿ ಆಕಾಶ್, ವಿಕಾಸ್'ನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಆಕಾಶ್ ವರ್ತನೆಯಿಂದ ಕೆರಳಿದ ಪ್ರಿಯಾಂಕ್ ಸುಮ್ಮನಿರದೆ ಇಬ್ಬರ ನಡುವೆ ಬಂದು ಆಕಾಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದೇ ಕಾರಣದಿಂದ ತನ್ನ ತಪ್ಪಿಲ್ಲದಿದ್ದರೂ ಪ್ರಿಯಾಂಕ್ ಶರ್ಮಾ ಮನೆಯಿಂದ ಹೊರ ನಡೆಯಬೇಕಾಯಿತು.

ಇನ್ನು ಮನೆಯಲ್ಲಿರುವ ಸದಸ್ಯರನ್ನು ಗಮನಿಸಿದರೆ ಇತರರಿಗಿಂತ ಪ್ರಿಯಾಂಕ್ ಉತ್ತಮ ವ್ಯಕ್ತಿತ್ವ ಹೊಂದಿದ್ದಾನೆ. ಆದರೆ ಆತನ ಳ್ಳೆತನವೇ ಆತನಗೆ ಮುಳುವಾಗಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಪ್ರಿಯಾಂಕ್ ಈ ಮೊದಲು 'ರೋಡೀಸ್' ಎಂಬ ಹಿಂದಿ ಶೋನಲ್ಲಿ ಭಾಗವಹಿಸಿದ್ದ. ಆದರೂ ಬಿಗ್ ಬಾಸ್'ನಲ್ಲಿ ಆತನ ನಡವಳಿಕೆಯಿಂದ ಖುದ್ದು ಸಲ್ಮಾನ್ ಖಾನ್ ಕೂಡಾ ಶಾಕ್ ಆಗಿದ್ದು, ವಿಕ್ಟ್ ಮಾಡುವುದಕ್ಕೂ ಮುನ್ನ ನಿನ್ನ ಅವಸರದ ನಿರ್ಧಾರವೇ ನಿನಗೆ ಮುಳುವಾಗಿದೆ ಎಂದು ಮರುಕ ವ್ಯಕ್ತಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮುಗ್ಧೆಯೂ ಅಲ್ಲ, ಪಾಪವೂ ಅಲ್ಲ, ಇಷ್ಟು ದ್ವೇಷವೇ?; ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty
BBK 12: ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು: ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು