
ಬೆಂಗಳೂರು(ಅ.09): ಬಿಗ್'ಬಾಸ್ ಸೀಸನ್-5 ಹವಾ ಶುರುವಾಗಿದೆ. ಬಿಗ್'ಬಾಸ್ ಗೃಹಪ್ರವೇಶ ಮಾಡಲಿರುವವರ ಪಟ್ಟಿ ಅಂತಿಮಗೊಳ್ಳುತ್ತಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಪ್ರಜೆಯೂ ಇರುವುದರಿಂದ ಸಹಜವಾಗಿಯೇ ಕುತೂಹಲ ಕೂಡ ಹೆಚ್ಚಿದೆ. ಬಿಗ್‌ಬಾಸ್ ಮನೆಗೆ ಹೋಗಲಿರುವ ಸ್ಪರ್ಧಾಳಿಗಳು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ನಮಗೆ ಸಿಕ್ಕ ಪಟ್ಟಿ ಇದು.
ಹಿರಿಯ ನಟ ಸಿಹಿಕಹಿ ಚಂದ್ರು, ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ, ಕಿರುತೆರೆ ನಟಿ ವರ್ಷಿಣಿ ಕುಸುಮಾ, ರ್ಯಾಪರ್ ಚಂದನ್ ಶೆಟ್ಟಿ, ಗಾಯಕಿಯರಾದ ಅನುರಾಧ್ ಅಥವಾ ಸುಪ್ರಿಯಾ ಲೋಹಿತ್, ಆರ್‌ಜೆ ರಿಯಾಜ್ ಹೆಸರುಗಳು ಅಂತಿಮಗೊಂಡಿವೆ ಎನ್ನುವ ಸುದ್ದಿಯಿದೆ.
ಇವರೊಂದಗೆ ಕಲರ್ಸ್ ಕನ್ನಡ ಕಿರುತೆರೆ ನಟಿ ಕವಿತಾ ಗೌಡ, ನಟ ರಾಜೇಶ್ ನಟರಂಗ - ಇಬ್ಬರನ್ನೂ ಮನೆಯೊಳಗೆ ಕಳುಹಿಸಲು ನಿರ್ಧರಿಸಿದೆ ಎಂಬ ಮಾತೂ ಕೇಳಿಬರುತ್ತಿದೆ.
ಈ ಸಲದ ಬಿಗ್ ಬಾಸ್ ವಿಭಿನ್ನವಾಗಿ ನಡೆಯಲಿದೆ ಎಂಬುದಂತೂ ನಿಜ. ಸೆಲೆಬ್ರಿಟಿಗಳು ಮತ್ತು ಸಾಮಾನ್ಯರ ನಡುವಿನ ಹೊಂದಾಣಿಕೆ ಹೇಗೆ ಎಂಬುದನ್ನು ನೋಡಿಯೇ ತಿಳಿಯಬೇಕು. ಅಲ್ಲದೇ, ಸುದೀಪ್ ಈ ಸಲ ಬೇರೆ ಬೇರೆ ಪ್ರತಿಭೆಗಳನ್ನು ತೋರಲಿದ್ದಾರಂತೆ. ಅವರು ಅಡುಗೆ ಮನೆಗೂ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಸುದೀಪ್ ಕೂಡ ಇದನ್ನು ಖಚಿತ ಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.