ಎಫ್‌ಐಆರ್‌ ರದ್ದು ಕೋರಿ ಪ್ರಿಯಾ ಸುಪ್ರೀಂಕೋರ್ಟ್‌ಗೆ

By Suvarna Web DeskFirst Published Feb 20, 2018, 8:44 AM IST
Highlights

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಸಂಬಂಧ ‘ಒರು ಅಡಾರ್‌ ಲವ್‌’ ಮಲಯಾಳಂ ಚಿತ್ರ ತಂಡ ಹಾಗೂ ತಮ್ಮ ಮೇಲೆ ಹೂಡಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಚಿತ್ರದ ನಟಿ ಪ್ರಿಯಾ ವಾರಿಯರ್‌ ಸೋಮವಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಹೈದರಾಬಾದ್‌: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಸಂಬಂಧ ‘ಒರು ಅಡಾರ್‌ ಲವ್‌’ ಮಲಯಾಳಂ ಚಿತ್ರ ತಂಡ ಹಾಗೂ ತಮ್ಮ ಮೇಲೆ ಹೂಡಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಚಿತ್ರದ ನಟಿ ಪ್ರಿಯಾ ವಾರಿಯರ್‌ ಸೋಮವಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ವೈರಲ್‌ ಆಗಿರುವ ಮಾಣಿಕ್ಯಾ ಮಲರಾಯ ಪೂವಿ ಹಾಡಿನಲ್ಲಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಕೆಲ ಮುಸ್ಲಿಮರು ಹೈದ್ರಾಬಾದ್‌ನಲ್ಲಿ ದೂರು ನೀಡಿದ್ದರು. ಜೊತೆಗೆ ಮುಂಬೈನ ರಝಾ ಅಕಾಡೆಮಿ ಕೂಡಾ ಚಿತ್ರದ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಿಯಾ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ನಡುವೆ ಚಿತ್ರದಲ್ಲಿ ಮುಸ್ಲಿಮರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಅರೋಪಿಸಿ ಸಲ್ಲಿಸಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಹೈದ್ರಾಬಾದ್‌ ಪೊಲೀಸರು, ಚಿತ್ರದ ನಿರ್ದೇಶಕಗೆ ನೋಟಿಸ್‌ ಜಾರಿ ಮಾಡಿದ್ದಾರೆ.

 

click me!