
ಬೆಂಗಳೂರು(ಡಿ.07): ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್ ಮದುವೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯ 6 ಎಕರೆ ಜಾಗದಲ್ಲಿ ಅದ್ಭೂರಿ ಹಾಕಲಾಗುತ್ತಿದೆ. 100 ಅಡಿ ಉದ್ದ 40 ಅಡಿ ಅಗಲದ ಸ್ಟೇಜ್ ಮೇಲೆ ಅರಮನೆಯ ಸೆಟನ್ನೆ ಹಾಕಲಾಗುತ್ತಿದೆ. ಕಲಾ ನಿರ್ದೇಶಕ ಅರುಣ್ ಸಾಗರ್ ಕಲ್ಪನೆಯಲ್ಲಿಯೇ ಎಲ್ಲವೂ ಮೂಡಿ ಬರುತ್ತಿವೆ. ಆದರೆ, ಫ್ಲಾವರ್ ಡೆಕೋರೆಷನ್ ಜವಾಬ್ಧಾರಿಯನ್ನ ಮಸ್ತಾನ್ ಮತ್ತು ಧೃವ ತೆಗೆದುಕೊಂಡಿದ್ದಾರೆ.
10 ಮತ್ತು 11 ರಂದು ತ್ರಿಪುರವಾಸಿನಿಯಲ್ಲಿ ಅದ್ದೂರಿ ರೆಸೆಪ್ಸನ್ ಕಾರ್ಯಕ್ರಮ ನಡೆಯಲಿದೆ. 9 ರಂದು ತಾಜ್ ಹೋಟೆಲ್ ನಲ್ಲಿ ಮುಹೂರ್ತ ನೆರವೇರಲಿದೆ. ಸೋಮನಾಥ ಟೆಂಪಲ್ ಹೋಲುವ ಸೆಟನ್ನೇ ಇಲ್ಲಿ ಹಾಕಲಾಗುತ್ತಿದೆ. ರಾಧಿಕಾ ಪಂಡಿತ್ ಆಸೆಯಂತೆಯೇ ಕಲಾ ನಿರ್ದೇಶಕ ಅರುಣ್ ಸಾಗರ್ ಸೋಮನಾಥ ಟೆಂಪಲ್ ಹೋಲುವ ಸೆಟ್ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.