ಕಲ್ಪನೆಯನ್ನು ಹುಸಿಯಾಗಿಸುತ್ತಾಳೆ ಮಿ. ಬೀನ್ ಮಗಳು!

Published : Dec 07, 2016, 05:49 AM ISTUpdated : Apr 11, 2018, 12:56 PM IST
ಕಲ್ಪನೆಯನ್ನು ಹುಸಿಯಾಗಿಸುತ್ತಾಳೆ ಮಿ. ಬೀನ್ ಮಗಳು!

ಸಾರಾಂಶ

ಮಿಸ್ಟರ್ ಬೀನ್ ಹೆಸರು ಕೇಳದವರು ಯಾರೂ ಇಲ್ಲ. ತನ್ನ ವಿಭಿನ್ನವಾದ ಮುಖಭಾವ ಹಾಗೂ ಹಾಸ್ಯಾಸ್ಪದ ವರ್ತನೆಯಿಂದಲೇ ಜನರನ್ನು ರಂಜಿಸಿದ ರೋವನ್ ಸೆಬಾಸ್ಟಿಯನ್ ಅಟ್ಕಿನ್ಸನ್ ವಿಶ್ವದಾದ್ಯಂತ ಮಿಸ್ಟರ್ ಬೀನ್ ಎಂಬ ಹೆಸರಿನೊಂದಿಗೇ ಫೇಮಸ್ ಆಗಿದ್ದಾರೆ. ಆದರೆ ಸದ್ಯ ಬಹುತೇಕರ ದೃಷ್ಟಿ ಇವರ 20 ವರ್ಷದ ಮಗಳು ಲಿಲ್ಲಿ ಮೇಲೆ ನೆಟ್ಟಿದೆ. ಈಕೆ ಹೇಗಿರಬಹುದೆಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ. ಕೆಲವರಂತೂ ಮಿ. ಬೀನ್ ಮಗಳು ನೋಡಲು ಅವರಂತೇ ಇರಬಹುದೆಂಬ ಕಲ್ಪನೆಯನ್ನೂ ಮಾಡಿಕೊಂಡಿರುತ್ತಾರೆ.

ಮಿ. ಬೀನ್ ಭಾವನೆಗಳನ್ನು ಕೇವಲ ತನ್ನ ಮುಖಭಾವದಿಂದಲೇ ಅದ್ಭುತವಾಗಿ ವ್ಯಕ್ತಪಡಿಸುವ ಉತ್ತಮ ಕಲಾವಿದ. ಹಾಗಾದರೆ ಅವರ ಮಗಳು ಹೇಗಿರಬಹುದು?ಇಂತಹುದೊಂದು ಪ್ರಶ್ನೆ ಎದುರಾದಾಗ ಆಕೆಯ ಮುಖವನ್ನು ನಾವಾಗಲೇ ನಮ್ಮ ಮನದಲ್ಲಿ ಕಲ್ಪಿಸಿಕೊಂಡಾಗಿರುತ್ತದೆ. ನಮ್ಮ ಕಲ್ಪನೆಯ ಮಿ. ಬೀನ್ ಮಗಳು ನೋಡಲು ಸೇಮ್ ಟು ಸೇಮ್ ಮಿ. ಬೀನ್'ನಂತಿರುತ್ತಾಳೆ. ಆದರೆ ಲಿಲ್ಲಿ ಮಾತ್ರ ಜನರ ಕಲ್ಪನೆಯನ್ನು ಹುಸಿಯಾಗಿಸಿದ್ದಾಳೆ. ವಾಸ್ತವವಾಗಿ ಲಿಲ್ಲಿ ನೋಡಲು ತನ್ನ ತಾಯಿಯಂತೆ ಸೌಂದರ್ಯವತಿ ಹಾಗೂ ತಂದೆಯಂತೆ ಪ್ರತಿಭಾವಂತಳು. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಈಕೆ ತನ್ನ ತಂದೆಯ 'Mr. Bean’s Holiday' ಹಾಗೂ 'Johnny English Reborn' ಸಿನಿಮಾದಲ್ಲೂ ನಟಿಸಿದ್ದಾಳೆ.

ಆದರೆ ಲಿಲ್ಲಿ ತನ್ನನ್ನು ಓರ್ವ ನಟಿ ಎಂದು ಬಿಂಬಿಸುವುದಿಲ್ಲ. ಬದಲಾಗಿ ತಾನು ಓರ್ವ ಗಾಯಕಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಅಲ್ಲದೇ ಹಲವಾರು ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸುತ್ತಾಳೆ.

5 ವರ್ಷದವಳಾಗಿದ್ದಾಗಲೇ ಹಾಡು, ನೃತ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಲಿಲ್ಲಿ, 14 ವರ್ಷವಾಗುತ್ತಿದ್ದಂತೆಯೇ ಈ ತನ್ನ ಹವ್ಯಾಸವನ್ನು ವೃತ್ತಿಯಾಗಿಸಿಕೊಳ್ಳ ಬಯಸಿದಳು. ತನ್ನಿಚ್ಛೆಯಂತೆ ಈಕೆ ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿ ತನ್ನ ಪ್ರತಿಭೆಯನ್ನು ಪರಿಚಯಿಸಿದಳು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?