
ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ 'ಪ್ರೇಮದ ಊರಲಿ' ಸಿನಿಮಾ, ದೊಡ್ಡ ಸ್ಟಾರ್‌ಗಳಿಲ್ಲದಿದ್ದರೂ ಗಟ್ಟಿ ಕಥೆ ಮತ್ತು ಹಳ್ಳಿ ಸೊಗಡಿದ್ದರೆ ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದೇ ರೀತಿ ಸಣ್ಣ ಬಜೆಟ್‌ನಲ್ಲಿ, ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೆ ತೆರೆಗೆ ಬಂದು ಇಡೀ ಸ್ಯಾಂಡಲ್‌ವುಡ್ ಅನ್ನೇ ಬೆರಗುಗೊಳಿಸಿದ 5 ಹಳೆಯ ಕನ್ನಡ ಚಿತ್ರಗಳ ವಿವರ ಇಲ್ಲಿದೆ.
ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನ ಮುಂಗಾರು ಮಳೆ ಸಿನಿಮಾ ಅತ್ಯಂತ ಕಡಿಮೆ ಬಜೆಟ್‌ನಲ್ಲಿ, ಹೊಸಬರ ತಂಡದಿಂದ ತಯಾರಾಗಿತ್ತು. ನಿರೀಕ್ಷೆಯೇ ಇಲ್ಲದೆ ಬಿಡುಗಡೆಯಾದ ಈ ಚಿತ್ರ, ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ (865 ದಿನಗಳು) ಪ್ರದರ್ಶನ ಕಂಡು ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತು.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕಾ-ಅಮೆರಿಕಾ ಚಿತ್ರ, ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟನೆಯ ಈ ಚಿತ್ರ ಯಾವುದೇ ಮಾಸ್ ಅಂಶಗಳಿಲ್ಲದೆ ಸರಳ ಕಥೆಯನ್ನು ಹೊಂದಿತ್ತು. ಮನೋಮೂರ್ತಿ ಅವರ ಸುಮಧುರ ಸಂಗೀತ ಮತ್ತು ಭಾವನಾತ್ಮಕ ಕಥೆಯಿಂದಾಗಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿ ಇಂದಿಗೂ ಎವರ್‌ಗ್ರೀನ್ ಸಿನಿಮಾವಾಗಿ ಉಳಿದಿದೆ.
ಟಿ.ಎಸ್. ನಾಗಾಭರಣ ನಿರ್ದೇಶನದ, ಶಿವರಾಜ್‌ಕುಮಾರ್ ಮತ್ತು ಶಿಲ್ಪಾ ನಟನೆಯ ಜನುಮದ ಜೋಡಿ ಚಿತ್ರ ಅಪ್ಪಟ ಗ್ರಾಮೀಣ ಸೊಗಡು ಮತ್ತು ಜನಪದ ಹಾಡುಗಳನ್ನು ಒಳಗೊಂಡಿತ್ತು. 'ಪ್ರೇಮದ ಊರಲಿ' ಚಿತ್ರದಂತೆಯೇ ಹಳ್ಳಿಯ ಪ್ರೀತಿ ಮತ್ತು ಸಂಬಂಧಗಳನ್ನು ಕಟ್ಟಿಕೊಟ್ಟಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದು ಭರ್ಜರಿ ಯಶಸ್ಸು ಕಂಡಿತು.
ಯಾವುದೇ ಕಮರ್ಷಿಯಲ್ ಹೀರೋ ಇಲ್ಲದೆ, ಬಾಲನಟ ವಿಜಯ ರಾಘವೇಂದ್ರ ಅವರನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಚಿನ್ನಾರಿ ಮುತ್ತ. ಈ ಚಿತ್ರ ಹಳ್ಳಿಯ ಪರಿಸರ, ಮುಗ್ಧ ಭಾವನೆಗಳು ಮತ್ತು ಸುಮಧುರ ಹಾಡುಗಳಿಂದಾಗಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡು ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು.
ರಾಮ್ ರೆಡ್ಡಿ ನಿರ್ದೇಶನದ ತಿಥಿ ಚಿತ್ರದಲ್ಲಿ ಒಬ್ಬನೇ ಒಬ್ಬ ವೃತ್ತಿಪರ ನಟರಿರಲಿಲ್ಲ. ಮಂಡ್ಯದ ಹಳ್ಳಿಯ ಸಾಮಾನ್ಯ ಜನರನ್ನೇ ಹಾಕಿಕೊಂಡು ಸಣ್ಣ ಬಜೆಟ್‌ನಲ್ಲಿ ಸಿನಿಮಾ ಮಾಡಲಾಗಿತ್ತು. ಯಾವುದೇ ಸ್ಟಾರ್ ಮೌಲ್ಯವಿಲ್ಲದಿದ್ದರೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು, ಕರ್ನಾಟಕದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡು ಎಲ್ಲರನ್ನೂ ಬೆರಗುಗೊಳಿಸಿತು. ದೊಡ್ಡ ಬಜೆಟ್ ಅಥವಾ ಸ್ಟಾರ್ ನಟರಿಗಿಂತ ಗಟ್ಟಿ ಕಥೆ ಮತ್ತು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ನಿರೂಪಣೆಯೇ ಸಿನಿಮಾದ ನಿಜವಾದ ಗೆಲುವು ಎಂಬುದನ್ನು ಈ ಚಿತ್ರಗಳು ಸಾಬೀತುಪಡಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.