ಬಾಹುಬಲಿ ದೃಶ್ಯ ಸೋರಿಕೆಯಾಗಿದ್ದಕ್ಕೆ ಪ್ರಭಾಸ್ ಕೊಟ್ಟ ಉತ್ತರ ಇದು

Published : Dec 07, 2016, 07:11 PM ISTUpdated : Apr 11, 2018, 01:05 PM IST
ಬಾಹುಬಲಿ ದೃಶ್ಯ ಸೋರಿಕೆಯಾಗಿದ್ದಕ್ಕೆ ಪ್ರಭಾಸ್ ಕೊಟ್ಟ ಉತ್ತರ ಇದು

ಸಾರಾಂಶ

ಏಪ್ರಿಲ್ 28ರ ತನಕ ಕಾಯಿರಿ. ಅಲ್ಲೊಂದು ತಮಾಷೆಯೇ ಇದೆ. ಎರಡನೇ ಭಾಗ ತುಂಬಾ ಡ್ರಾಮಾಟಿಕ್ ಆಗಿದೆ.

1. ‘ಬಾಹುಬಲಿ 2’ರಲ್ಲಿ ಕಟ್ಟಪ್ಪ ಯಾಕೆ ಅಮರೇಂದ್ರ ಬಾಹುಬಲಿಯನ್ನು ಕೊಂದ ಎಂಬ ಗುಟ್ಟನ್ನು ಅಡಗಿದೆ. ಯಾಕೆ ಅವನು ಕೊಂದಿದ್ದು?

ಯಾರಿಗೆ ಗೊತ್ತು? ಬಹುಶಃ ನೀವದನ್ನು ತಿಳಿಯಲು ಮೂರನೇ ಭಾಗದವರೆಗೆ ಕಾಯಬೇಕು! ಎರಡನೇ ಭಾಗದಲ್ಲಿ ನಿರ್ದೇಶಕರು ಏನು ಪಂಚ್ ಕೊಟ್ಟಿದ್ದಾರೆಂದು ಈಗಲೇ ಹೇಳಲಾಗದು. ಏಪ್ರಿಲ್ 28ರ ತನಕ ಕಾಯಿರಿ. ಅಲ್ಲೊಂದು ತಮಾಷೆಯೇ ಇದೆ. ಎರಡನೇ ಭಾಗ ತುಂಬಾ ಡ್ರಾಮಾಟಿಕ್ ಆಗಿದೆ. ‘ಬಾಹುಬಲಿ’ ಮೊದಲ ಭಾಗ ಕೇವಲ ಪ್ರಾಯೋಗಿಕ ಚಿತ್ರ. ಅದರ ಯಶಸ್ಸು ಈ ಸೀಕ್ವೆಲ್‌ಗೆ ಹಲವು ಲಾಭಗಳನ್ನು ತಂದುಕೊಟ್ಟಿದೆ. ಸಿನಿಮಾ ನೋಡಿದರೆ ಅವೂ ನಿಮಗೆ ತಿಳಿಯುತ್ತವೆ.

2. ‘ಬಾಹುಬಲಿ 2’ರ ದೃಶ್ಯಗಳು ಸೋರಿಕೆ ಆದವಲ್ಲಾ?

ಆಗಿದ್ದು ನಿಜ. ಇವೆಲ್ಲಕ್ಕೂ ಕಾರಣ ಕೇವಲ ಕುತೂಹಲ. ತಪ್ಪತಸ್ಥರಿಗೆ ಈಗಾಗಲೇ ಶಿಕ್ಷೆ ಆಗಿದೆ. ನಾನು ಆ ಬಗ್ಗೆ ಮಾತನಾಡಲಾರೆ. ಆದರೆ, ಸೋರಿಕೆ ಆದ ದೃಶ್ಯಗಳನ್ನು ಕೈಬಿಟ್ಟು ‘ಬಾಹುಬಲಿ 2’ ತೆರೆಕಾಣಲಿದೆ ಎಂಬುದನ್ನು ಪ್ರಾಮಿಸ್ ಮಾಡಬಲ್ಲೆ.

 

3. ‘ಬಾಹುಬಲಿ’ಗಾಗಿ ನೀವು ದೇಹವನ್ನು ಹುರಿಗೊಳಿಸಿದ್ದು ಹೇಗೆ?

ಅದೊಂದು ಅದ್ಭುತ ಟಾಸ್ಕ್ ಎಂದುಕೊಂಡೇ ಸ್ವೀಕರಿಸಿದೆ. ಮಹೇಂದ್ರ ಬಾಹುಬಲಿ ಮತ್ತು ಅಮರೇಂದ್ರ ಬಾಹುಬಲಿ ಎರಡೂ ವಿಶೇಷ ದೇಹಾಕೃತಿಗಳನ್ನು ಬಯಸುವ ಪಾತ್ರಗಳು. ಎರಡೂ ಪಾತ್ರಗಳಿಗೂ ಬೇರೆ ಬೇರೆ ಆಹಾರಕ್ರಮ, ಜಿಮ್ ಪ್ರಾಕ್ಟೀಸ್ ಇತ್ತು. ಆದರೆ, ಈ ಬಾರಿ ಹೈದರಾಬಾದಿನ ರಾಮೋಜಿರಾವ್ ಫಿಲ್ಮ್‌ಸಿಟಿಯಲ್ಲಿ ಚಿತ್ರೀಕರಣ ಇದ್ದಿದ್ದರಿಂದ ಕುಟುಂಬದವರನ್ನು, ಆಪ್ತ ಗೆಳೆಯರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅಷ್ಟು ಹೊತ್ತು ಜಿಮ್‌ನಲ್ಲಿ, ನಟನೆಯ ಅಭ್ಯಾಸದಲ್ಲಿ ಮುಳುಗಿರುತ್ತಿದ್ದ ನಾನು ಅವರು ಬಂದಾಗಲಷ್ಟೇ ವಾಸ್ತವಕ್ಕೆ ಮರಳುತ್ತಿದ್ದೆ.

4. ‘ಬಾಹುಬಲಿ’ ನಿಮ್ಮ ಬದುಕನ್ನು ಹೇಗೆ ಬದಲಿಸಿತು?

ಇದು ನನ್ನ ಕನಸಿನ ಪ್ರಾಜೆಕ್ಟ್. ಜಗತ್ತಿನಲ್ಲೆಡೆ ಹೋದರೂ ನನ್ನನ್ನೀಗ ಸೂಪರ್‌ಮ್ಯಾನ್ ರೀತಿ ನೋಡ್ತಾರೆ. ಜನರ ಈ ಭಾವನೆಯಿಂದ ಮುಂದಿನ ಚಿತ್ರಗಳ ಸಾಧಾರಣ ಪಾತ್ರಗಳು ನನ್ನ ನಿದ್ದೆಗೆಡಿಸುತ್ತಿವೆ. ಅಂಥದ್ದೇ ಕತೆಗಳನ್ನು ಎದುರು ನೋಡಬೇಕೋ ಅಥವಾ ಈ ಅತಿಮಾನುಷ ಪಾತ್ರದಿಂದ ಆಚೆ ನೋಡಬೇಕೋ ಎಂಬ ಗೊಂದಲವೂ ಸಹಜವೇ.

5. ಬಾಹುಬಲಿ ಚಿತ್ರೀಕರಣದ ವೇಳೆ ನಿಮ್ಮನ್ನು ಕಾಡಿದಂಥ ಪ್ರದೇಶ ಯಾವುದು?

ಬಾಹುಬಲಿಯ ಹಲವು ಭಾಗದ ಚಿತ್ರೀಕರಣ ಕೇರಳದಲ್ಲಿಯೇ ನಡೆಯಿತು. ಅಲ್ಲಿನ ಅಲೆಪ್ಪಿಯನ್ನು ನನಗೆ ಬಿಟ್ಟು ಬರಲು ಸಾಧ್ಯವಾಗಲಿಲ್ಲ. ಅಲ್ಲಿನ ದೋಣಿಮನೆಯಲ್ಲಿ ನಿದ್ರಿಸುವ ಆನಂದವೇ ಬೇರೆ. ಆ ಹಸಿರು, ಅದರಾಚೆ ಬೊಬ್ಬಿರುವ ಕಡಲ ಸೌಂದರ್ಯ, ಎಳನೀರಿನ ಸಿಹಿ, ಪಾಮ್ ಮರಗಳ ಸೊಬಗು ನಿಜಕ್ಕೂ ಅದ್ಭುತ. ಅಲ್ಲಿ ಬೋಟ್‌ರೈಟ್ ಮಾಡಿ ಕೆಲ ಹೊತ್ತು ಕಳೆಯುತ್ತಿದ್ದೆ.

6. ಸಿನಿಮಾ ಹೊರತಾಗಿ ಪ್ರಭಾಸ್ ಏನ್ಮಾಡ್ತಾರೆ?

ಗೆಳೆಯರೊಂದಿಗೆ ಪ್ರವಾಸ ಇಲ್ಲವೇ ವಾಲಿಬಾಲ್ ಆಡೋದು.

7. ನಿಮ್ಮ ವಯಸ್ಸೀಗ 37. ಬ್ಯಾಚುಲರ್ ಅಂದಮೇಲೆ ಗಾಸಿಪ್ ಇದ್ದಿದ್ದೇ. ಅದು ನಿಜ ಆಗೋದು ಯಾವಾಗ?

ಮತ್ತೆ ಅಲ್ಲಿಗೆ ಬಂದುಬಿಟ್ರಿ. ‘ಬಾಹುಬಲಿ 2’ ಮುಗಿದ ಮೇಲೆ ಎಲ್ಲವನ್ನೂ ಹೇಳುವೆ. ಅಲ್ಲಿಯ ತನಕ ಗಾಸಿಪ್ ಹಬ್ಬಿಸಬೇಡಿ ಪ್ಲೀಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?