'ಪಿಎಂ ನರೇಂದ್ರ ಮೋದಿ' ತೆರೆ ಕಾಣೋದು ಡೌಟ್!

Published : Mar 16, 2019, 12:00 PM IST
'ಪಿಎಂ ನರೇಂದ್ರ ಮೋದಿ' ತೆರೆ ಕಾಣೋದು ಡೌಟ್!

ಸಾರಾಂಶ

ಏ.12ಕ್ಕೆ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ತೆರೆಗೆ| 27ಭಾಷೆಗಳಲ್ಲಿ ಪೋಸ್ಟರ್‌ ಲೋಕಾರ್ಪಣೆ

ಮುಂಬೈ[ಮಾ.16]: ಚುನಾವಣೆ ಬಿಸಿಯ ನಡುವೆಯೇ ನಟ ವಿವೇಕ ಒಬೇರಾಯ್‌ ಪ್ರಧಾನ ಪಾತ್ರದಲ್ಲಿರುವ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಆಧಾರಿತ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ದೇಶಾದ್ಯಂತ ಏ.12ರಂದು ತೆರೆಕಾಣಲಿದೆ.

ಕ್ರೀಡಾಪಟುಗಳಾದ ಮೇರಿ ಕೋಮ್‌ ಮತ್ತು ಸರಬ್ಜಿತ್‌ ಸಿಂಗ್‌ ಅವರ ಜೀವನಾಧಾರಿತ ಚಿತ್ರ ನಿರ್ದೇಶಿಸಿದ್ದ ಒಮಂಗ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಳೆದ ಜನವರಿಯಿಂದ ಗುಜರಾತ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಮುಂಬೈನಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ.

ಮೋದಿ ಜೀವನದಲ್ಲಿನ ಹಲವು ಕ್ಷೇತ್ರಗಳೂ ಚಿತ್ರೀಕರಣಗೊಂಡಿವೆ. ಮೋದಿ ಗುಜರಾತ್‌ ಸಿಎಂ ಆದಾಗಿನ ಸಾಧನೆಗಳು, 2014ರಲ್ಲಿ ಪ್ರಧಾನಿ ಆಗಿ ನೇಮಕಗೊಳ್ಳುವವರೆಗಿನ ಹಲವು ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಸಂದೀಪ್‌ ಸಿಂಗ್‌ ನಿರ್ಮಾಪಕರಾಗಿದ್ದು, ಇದರ ಪೋಸ್ಟರ್‌ 27 ಭಾಷೆಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ನೀತಿ ಸಂಹಿತೆ ಅಡ್ಡಿ?:

ಚುನಾವಣಾ ಸಂಹಿತೆ ಜಾರಿಯ ಸಂದರ್ಭದಲ್ಲೇ ಮೋದಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿರುವುದು ಸಂಹಿತೆಯ ಅಡಿ ಬರುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!