ಅಬ್ಬಾ ! ದಾಸನ ಭರ್ಜರಿ ದಾಖಲೆಯಿದು

Published : Mar 16, 2019, 11:30 AM IST
ಅಬ್ಬಾ ! ದಾಸನ ಭರ್ಜರಿ ದಾಖಲೆಯಿದು

ಸಾರಾಂಶ

 ಜಾಲೆಂಜಿಂಗ್ ಸ್ಟಾರ್ ದರ್ಶನ್ ಕೆಲ ತಿಂಗಳಿಂದ ಅದೆಷ್ಟೂ ಸಿನಿಮಾಗಳ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಆ ಚಿತ್ರಗಳು ರಿಲೀಸ್ ಗೆ ರೆಡಿ ಆಗುತ್ತಿವೆ. ಅಂತಹ ಚಿತ್ರಗಳ ಲಿಸ್ಟ್ ಇಲ್ಲಿದೆ. 

ಕನ್ನಡ ಚಿತ್ರರಂಗದ ದಿ ಮೋಸ್ಟ್ ಬ್ಯುಸಿ ನಟರೆಂದರೆ ದರ್ಶನ್. ತಮ್ಮ ಚಿತ್ರಗಳನ್ನು ಮಾಡುವುದಲ್ಲದೆ ಇತರರ ಸಿನಿಮಾಗಳ ಟ್ರೈಲರ್ ರಿಲೀಸ್ ನಲ್ಲಿಯೂ ಪಾಲ್ಗೊಳ್ಳುತ್ತಾರೆ. 

ಕೆಲ ದಿನಗಳ ಹಿಂದೆ ಬಿಡುಗಡೆ ಆದ ‘ಯಜಮಾನ’ ಚಿತ್ರ ರಾಜ್ಯಾದ್ಯಂತ ಯಶಸ್ಸು ಕಾಣುತ್ತಿದೆ. ಅಷ್ಟೇ ಅಲ್ಲದೇ ಈ ಚಿತ್ರವನ್ನು ವಿದೇಶಗಲ್ಲೂ ಮೆಚ್ಚಿದ್ದಾರೆ. 

ದರ್ಶನ್ ರಿಂದ ತಮ್ಮ ಚಿತ್ರಗಳ ಟ್ರೈಲರ್ ರಿಲೀಸ್ ಮಾಡಿಸಬೇಕೆಂದು ಅದೆಷ್ಟೋ  ಮಂದಿ ಕಾಯುತ್ತಾರೆ. ಯಾರಿಗೂ ನಿರಾಸೆ ಮಾಡದೆ ಸಮನಾಗಿ ಬಿಡುವು ಮಾಡಿಕೊಳ್ಳುತ್ತಾರೆ.  ತಮ್ಮ ಸಿನಿಮಾಗಳಿಗಿಂತಲೂ ಹೊಸಬರ ಸಿನಿಮಾಗೆ ಹೆಚ್ಚು ಆದ್ಯತೆ ನೀಡುತ್ತಾರೆ ಸ್ಯಾಂಡಲ್ ವುಡ್ ಸರದಾರ.

ಇನ್ನು ಯಜಮಾನ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ  ಅನೂಪ್  ಅಭಿನಯದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರ ‘ಉದ್ಘರ್ಷ’ ಟ್ರೈಲರ್ ರಿಲೀಸ್ ಮಾಡಿದ್ದಾರೆ.  ಪ್ರೀಮಿಯರ್ ಪದ್ಮಿನಿ ಚಿತ್ರಕ್ಕೂ ಸಾಥ್ ಕೊಟ್ಟವರು ದರ್ಶನ್.

ಸ್ಯಾಂಡಲ್ ವುಡ್ ಗಂಡುಗಲಿ ಕೆ.ಮಂಜು ಪುತ್ರ ಅಭಿನಯದ ಸಿನಿಮಾ ಪಡ್ಡೆಹುಲಿ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.  

ಈ ಹಿಂದೆ ಬಜಾರ್, ಮದಗಜ,  ಭರಾಟೆ,  ಬಿಚ್ಚುಗತ್ತಿ, ಚಾಣಕ್ಷ, ಮೊಡವೆ, ಇರುವುದೆಲ್ಲವ ಬಿಟ್ಟು, ವಾಸು ನಾನ್ ಪಕ್ಕಾ ಚಿತ್ರಗಳಿಗಳ ಟ್ರೈಲರ್ ಕೂಡ ದರ್ಶನ್ ಕೈಯಿಂದಲೇ  ರಿಲೀಸ್ ಮಾಡಿಸಲಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!
ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ