
ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಮೋದಿ 69 ನೇ ಬರ್ತಡೇ ದಿನವಾದ ಇಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಚಿತ್ರಕ್ಕೆ ಮನ್ ಭೈರಾಗಿ ಎಂದು ಹೆಸರಿಡಲಾಗಿದೆ.
#HappyBdayPMModi| ಭಿನ್ನ ವಿಭಿನ್ನ: ನೀವು ನೋಡಿರದ ಮೋದಿ ಫೋಟೋಗಳು ಅದೆಷ್ಟು ಚೆನ್ನ!
ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುತ್ತಾ, ಸಂಜಯ್ ಲೀಲಾ ಬನ್ಸಾಲಿ ಹಾಗೂ ಮಹಾವೀರ್ ಜೈನ್ ಸ್ಪೆಷಲ್ ಫೀಚರ್ ಸಿನಿಮಾ #MannBairagi ಫಸ್ಟ್ ಲುಕ್ ನೋಡಲು ಖುಷಿಯಾಗುತ್ತಿದೆ. ‘ಹ್ಯಾಪಿ ಬರ್ತಡೇ ಪಿಎಂ ಮೋದಿ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ಸಿನಿಮಾವೊಂದು ಬರುತ್ತಿರುವುದು ಇದೇ ಮೊದಲಲ್ಲ. ವಿವೇಕ್ ಓಬೆರಾಯ್ ‘PM Narendra Modi' ಎನ್ನುವ ಸಿನಿಮಾವೊಂದನ್ನು ಮಾಡಿದ್ದರು. ಆದರೆ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಲಿಲ್ಲ. Modi: Journey of a common man ಎನ್ನುವ ವೆಬ್ ಸೀರೀಸ್ ವೊಂದು ಬಂದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.