
‘ಕೆಲವು ನಾಯಕ ನಟರಿಗೆ ಹೋಲಿಕೆ ಮಾಡಿದರೆ, ನಾವು ಅವರಷ್ಟುಕೆಟ್ಟವರಲ್ಲ. ಆದರೂ ಖಳನಟರೆಂದರೆ ಕೆಟ್ಟವರೇ ಇರಬೇಕೆನ್ನುವ ಎನ್ನುವ ಮನೋಭಾವ ಪ್ರೇಕ್ಷಕರಲ್ಲಿದೆ. ಅದು ಸಿನಿಮಾಗಳಲ್ಲಿ ಅವರು ಅಭಿನಯಿಸುವ ಪಾತ್ರದ ಮೂಲಕ ಬಂದಿದ್ದು. ಆದರೆ ಖಳನಟರೆಲ್ಲ ಕೆಟ್ಟವರಲ್ಲ, ಕೆಟ್ಟವರೆಲ್ಲ ಖಳನಟರಲ್ಲ. ಅವರಲ್ಲೂ ಹೃದಯವಂತಿಕೆಯಿದೆ. ಮಾನವೀಯತೆ ಇದೆ. ಎಷ್ಟೋ ಜನ ನಾಯಕ ನಟರಿಗೆ ಹೋಲಿಕೆ ಮಾಡಿದರೆ, ಅವರೇ ಉತ್ತಮರು’ ಎನ್ನುವ ಮಾತುಗಳ ಮೂಲಕ ಖಳನಟರ ಬಗ್ಗೆ ಜನರಲ್ಲಿರುವ ಮನೋಭಾವ ಮತ್ತು ವಾಸ್ತವದ ಕುರಿತು ಹೇಳುವುದರ ಜತೆಗೆ ಕೆಲವು ನಾಯಕ ನಟರ ನಿಜ ವ್ಯಕ್ತಿತ್ವವನ್ನು ತಮ್ಮದೇ ಮಾತುಗಳಲ್ಲಿ ಕಟ್ಟಿಕೊಟ್ಟರು ನಟ ಮುಖ್ಯಮಂತ್ರಿಚಂದ್ರು.
ಅವರು ಹಾಗೆ ಮಾತನಾಡಿದ್ದು ‘ನಮ್ ಗಣಿ ಬಿಕಾಂ ಪಾಸ್’ ಚಿತ್ರದ ಆಡಿಯೋ ಲಾಂಚ್ ಸಂದರ್ಭ. ಬೃಂದಾವನ ಬ್ಯಾನರ್‌ನಲ್ಲಿ ನಾಗೇಶ್ ಕುಮಾರ್ ನಿರ್ಮಿಸಿ, ಅಭಿಷೇಕ್ ಶೆಟ್ಟಿನಿರ್ದೇಶಿಸಿರುವ ಸಿನಿಮಾ ‘ನಮ್ ಗಣಿ ಬಿಕಾಂ ಪಾಸ್’.
ನಾಟಕ ಆಡುವ ಮುನ್ನ ಕುಸಿದ ಮುಖ್ಯಮಂತ್ರಿ ಚಂದ್ರು; ಆಸ್ಪತ್ರೆಗೆ ದಾಖಲು
ಆಡಿಯೋ ಲಾಂಚ್ ಜತೆಗೆ ಚಿತ್ರ ತಂಡ ಹಿರಿಯ ನಟ ದೊಡ್ಡಣ್ಣ ಅವರಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿಗೆ ಅತಿಥಿಯಾಗಿ ಬಂದು ದೊಡ್ಡಣ್ಣನವರ ಸಿನಿ ಜರ್ನಿ, ನಿಜ ಜೀವನದಲ್ಲಿನ ಅವರ ವ್ಯಕ್ತಿತ್ವಗಳ ಕುರಿತು ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಸಿನಿಮಾಗಳಲ್ಲಿ ದೊಡ್ಡಣ್ಣ ಖಳ ನಟನಂತೆ ಕಾಣಿಸಿಕೊಂಡರೂ, ನಿಜ ಜೀವನದಲ್ಲಿ ಅವರು ಹೀರೋ ಎಂದು ಬಣ್ಣಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.