
ಕೆಲವೊಮ್ಮೆ ಅತಿ ವಿಶ್ವಾಸ ಹೇಗೆ ಕೈ ಕೊಡುತ್ತೆ ಅನ್ನುವುದಕ್ಕೆ ಶ್ರುತಿ ಹಾಸನ್ ತಮಾಷೆಯೇ ಸಾಕ್ಷಿ. ಒಂದು ಕಾಲದಲ್ಲಿ ಯಾವ ನಟಿಗಾದರೂ ನಿಮ್ಮ ಕನಸಿನ ಪಾತ್ರ ಯಾವುದು ಎಂದು ಕೇಳಿದರೆ ‘ಅರುಂಧತಿ' ಅನ್ನುತ್ತಿದ್ದರು. ಒಬ್ಬ ರಾಜಕುಮಾರಿಯ ಪಾತ್ರ ಮಾಡುವುದಕ್ಕೆ ಅಷ್ಟೊಂದು ಕ್ರೇಜ್ ಇತ್ತು. ‘ಸಂಗಮಿತ್ರ' ಸಿನಿಮಾದ ಮೂಲಕ ಶ್ರುತಿ ಹಾಸನ್‌ರ ಕನಸು ಈಡೇರಿತ್ತು. ಅದೂ ಪ್ರತಿಷ್ಠಿತ ಕ್ಯಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆ ಸಿನಿಮಾ ಲಾಂಚ್ ಆಗತ್ತೆ ಅಂತ ಕೇಳಿ ಶ್ರುತಿ ಹಾರುವುದೊಂದು ಬಾಕಿ. ಇದುವರೆಗೆ ಕ್ಯಾನ್ ಫೆಸ್ಟಿವಲ್‌ನಲ್ಲಿ ಭಾಗವಹಿಸದೇ ಇದ್ದ ಶ್ರುತಿ ಥ್ರಿಲ್ ಆದರು.
ಬಾಲಿವುಡ್‌ನ ಅನೇಕ ನಟೀಮಣಿಯರು ಆ ಫೆಸ್ಟಿವಲ್‌ಗೆ ಅಂತ್ಲೇ ಸಕತ್ತಾಗಿ ಡ್ರೆಸ್ ಹೊಲಿಸಿಕೊಂಡು ಅಲ್ಲಿ ಮಿಂಚುವುದು ನೋಡಿ ತಾನೂ ಸಕತ್ತಾಗಿ ಮಿಂಚಬೇಕು ಅಂತ ಪ್ಲಾನ್ ಹಾಕಿದ್ದರು. ಅದೇ ಥರ ಉದ್ದದ ಕಪ್ಪು ಗೌನ್ ಹಾಕಿಕೊಂಡು ಕ್ಯಾನ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ನಡೆದುಕೊಂಡು ಬರಬೇಕಾದರೆ ಯಾರೂ ಸಂಭ್ರಮಿಸುತ್ತಿಲ್ಲ. ಯಾರೂ ವಿಶಿಲ್ ಹೊಡೆಯಲಿಲ್ಲ. ಒಂದೆರಡು ವೆಬ್ ಮೀಡಿಯಾ ಅದನ್ನು ನೋಡಿ ರೇಗಿಸಿ ಬರೆದವು. ಶ್ರುತಿ ಹಾಸನ್ ಕ್ಯಾನ್ ಫೆಸ್ಟಿವಲ್‌ಗೆ ಹೊಂದಿಕೆಯಾಗದ ದಿರಿಸು ಧರಿಸಿ ಬಂದು ಪೆಚ್ಚಾದರು. ಅತಿ ಉತ್ಸಾಹವೇ ಈ ಅವಘಡಕ್ಕೆ ಕಾರಣವೆಂದು ನಂಬಲಾಗಿದೆ.
ವರದಿ: ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.