ಬಿಗ್ ಬಾಸ್ ಸಂಜನಾಳ 2ನೇ ಐಟಂ ಸಾಂಗ್

Published : May 22, 2017, 10:32 AM ISTUpdated : Apr 11, 2018, 12:41 PM IST
ಬಿಗ್ ಬಾಸ್ ಸಂಜನಾಳ 2ನೇ ಐಟಂ ಸಾಂಗ್

ಸಾರಾಂಶ

ಸಂಜನಾ ಕಿರುತೆರೆಯಲ್ಲಿ ಜನಪ್ರಿಯರಾದರೂ ಬಿಗ್‌ಬಾಸ್‌ ಮನೆಯೊಳಗೆ ಬಂದ ತಕ್ಷಣ ಅದೃಷ್ಟ ಮತ್ತು ದುರಾದೃಷ್ಟಎರಡೂ ಖುಲಾಯಿಸಿತು.‘ಬಿಗ್‌ಬಾಸ್‌' ಸೀಸನ್‌ 4ರಲ್ಲಿದ್ದ ಅಷ್ಟೂಸ್ಪರ್ಧಿಗಳ ಪೈಕಿ ಸಂಜನಾ ನಿತ್ಯವೂ ಗಾಸಿಪ್‌ನಲ್ಲಿ ರಾರಾಜಿಸಿದ್ದು ತನ್ನ ಒನಪು, ವಯ್ಯಾರದ ಮೂಲಕ. ಅವರಿಗಿರುವ ಅಪಾರ ಲೋಕಜ್ಞಾನದ ಮೂಲಕ. ಜೊತೆಗೆ ಉಪ್ಪು ಹುಳಿ ಖಾರವೂ ಸೇರಿಕೊಂಡಿದ್ದು ಭುವನ್‌ ಗೌಡ ಜತೆಗಿನ ಲವ್ವಿ​​-ಡವ್ವಿ ಗಿಮಿಕ್‌. ಭುವನ್‌ ಹಾಗೂ ಸಂಜನಾ ರೋಮಿಯೋ ಜೂಲಿಯೆಟ್‌ ರೀತಿ ಪೋಸು ಕೊಟ್ಟರು. ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ನಂತರ ಮುಂದೇನು ಎನ್ನುವ ಹೊತ್ತಿಗೆ ಮೂಂಬತ್ತಿ ಚಿತ್ರದ ಸ್ಪೆಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಂಡರು.

ಬಿಗ್‌ಬಾಸ್‌ ಖ್ಯಾತಿಯ ಸಂಜನಾ ಚಿದಾನಂದ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್‌ ವುಡ್‌ನಲ್ಲಿ ಸಂಜನಾ ಐಟಂ ಸಾಂಗ್‌ ಗೆ ಫಿಕ್ಸ್‌ ಆಗಿಬಿಟ್ರಾ ಎನ್ನುವುದೇ ಈಗ ಅನುಮಾನ. ಯಾಕಂದ್ರೆ ‘ಮೊಂಬತ್ತಿ' ನಂತರ ‘ಗೂಳಿಹಟ್ಟಿ' ಚಿತ್ರದ ಖ್ಯಾತಿಯ ನಟ ಪವನ್‌ ಅಭಿನಯದ ‘ಉಡುಂಬಾ' ಚಿತ್ರದ ಐಟಂ ಸಾಂಗ್‌ಗೆ ಸಂಜನಾ ಫ್ರೆಶ್‌ ಆಗಿ ಹೆಜ್ಜೆ ಹಾಕಿದ್ದಾರೆ. ರಾಮನಗರದ ಬಳಿ ಹಾಕಿದ ಅದ್ದೂರಿ ಸೆಟ್‌ನಲ್ಲಿ ಶನಿವಾರ ಶೂಟಿಂಗ್‌ ಮುಕ್ತಾಯವಾಗಿದೆ. ನಟಿ ಸಂಜನಾ ಅವರ ಐಟಂ ಸಾಂಗ್‌ ಯಾನ ಶುರುವಾಗಿದ್ದು ಬಿಗ್‌ಬಾಸ್‌ನಿಂದ ಹೊರ ಬಂದ ನಂತರ. ಅದಕ್ಕೂ ಮುನ್ನ ಅವರು ಕಿರುತೆರೆ ನಟಿಯಾಗಿದ್ದವರು.

ಸಂಜನಾ ಕಿರುತೆರೆಯಲ್ಲಿ ಜನಪ್ರಿಯರಾದರೂ ಬಿಗ್‌ಬಾಸ್‌ ಮನೆಯೊಳಗೆ ಬಂದ ತಕ್ಷಣ ಅದೃಷ್ಟ ಮತ್ತು ದುರಾದೃಷ್ಟಎರಡೂ ಖುಲಾಯಿಸಿತು.‘ಬಿಗ್‌ಬಾಸ್‌' ಸೀಸನ್‌ 4ರಲ್ಲಿದ್ದ ಅಷ್ಟೂಸ್ಪರ್ಧಿಗಳ ಪೈಕಿ ಸಂಜನಾ ನಿತ್ಯವೂ ಗಾಸಿಪ್‌ನಲ್ಲಿ ರಾರಾಜಿಸಿದ್ದು ತನ್ನ ಒನಪು, ವಯ್ಯಾರದ ಮೂಲಕ. ಅವರಿಗಿರುವ ಅಪಾರ ಲೋಕಜ್ಞಾನದ ಮೂಲಕ. ಜೊತೆಗೆ ಉಪ್ಪು ಹುಳಿ ಖಾರವೂ ಸೇರಿಕೊಂಡಿದ್ದು ಭುವನ್‌ ಗೌಡ ಜತೆಗಿನ ಲವ್ವಿ​​-ಡವ್ವಿ ಗಿಮಿಕ್‌. ಭುವನ್‌ ಹಾಗೂ ಸಂಜನಾ ರೋಮಿಯೋ ಜೂಲಿಯೆಟ್‌ ರೀತಿ ಪೋಸು ಕೊಟ್ಟರು. ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ನಂತರ ಮುಂದೇನು ಎನ್ನುವ ಹೊತ್ತಿಗೆ ಮೂಂಬತ್ತಿ ಚಿತ್ರದ ಸ್ಪೆಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಂಡರು.

ಈಗ ಅವರ ಕೈಯಲ್ಲಿ ‘ಸಂಜು ಮತ್ತು ನಾನು' ವೀಕೆಂಡ್‌ ಶೋ ಜತೆಗೆ ಎರಡು ಚಿತ್ರಗಳು ಕೈಲಿವೆ. ಕಿರಿಕ್‌ ಕೀರ್ತಿ ಜತೆಗಿನ ಚಿತ್ರ ಫೋಟೋ ಶೂಟ್‌ ಆಗಿ, ಚಿತ್ರದಿಂದ ಸಂಜನಾ ಹೊರಬಂದಿ​ದ್ದಾರೆ. ಪ್ರಥಮ್‌ ಜೊತೆಗೊಂದು ಚಿತ್ರದಲ್ಲಿ ಆಕೆ ಸದ್ಯ ನಟಿಸುತ್ತಿದ್ದಾರೆ. ಈ ನಡುವೆಯೇ ‘ಉಡುಂಬಾ' ಚಿತ್ರದ ಐಟಂ ಸಾಂಗ್‌ ಸಪ್ಪಳ ಮಾಡಿದೆ.

ವರದಿ: ಕನ್ನಡಪ್ರಭ, ಸಿನಿವಾರ್ತೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಮಿಡಿಯನ್ ಜೊತೆ ರೊಮ್ಯಾನ್ಸ್ ಮಾಡಿದ ಶ್ರೀದೇವಿ.. ಚಿರು, ರಜನಿ ಜೊತೆ ನಟಿಸಿದ್ದ ನಟಿ ಯಾಕಿಂಗೆ ಮಾಡಿದ್ರು?
ಪತ್ನಿ ನಮ್ರತಾ ಮಾತು ಕೇಳದೆ ಮಹೇಶ್ ಬಾಬು ದೊಡ್ಡ ಫ್ಲಾಪ್ ಸಿನಿಮಾ ಮಾಡಿದ್ರಾ? ಆ ಚಿತ್ರ ಮಾಡಿ ತಪ್ಪಾಯ್ತಾ?