ಸಿಎಂ ಆದ್ಮೇಲೆ ವಿಜಯ್ ಚಿತ್ರಕ್ಕೆ ಫುಲ್ ಡಿಮ್ಯಾಂಡ್: ಅಂದು ಬೇಡ ಅಂದವ್ರು ಇಂದು ಹಿಂದೆ ಬಿದ್ದಿದ್ದಾರೆ!

Published : May 13, 2026, 04:34 PM IST
Jana Nayagan

ಸಾರಾಂಶ

ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ 'ಜನನಾಯಗನ್' ರಿಲೀಸ್ ಆಗುತ್ತಾ ಇಲ್ವಾ ಅನ್ನೋ ಚರ್ಚೆ ಜೋರಾಗಿದೆ. ಆದರೆ ಸೆನ್ಸಾರ್ ಸಮಸ್ಯೆಗಳಿಂದಾಗಿ ಈ ಚಿತ್ರದ ಬಿಡುಗಡೆ ತಡವಾಗಿತ್ತು.

ಸೆನ್ಸಾರ್ ಸಮಸ್ಯೆಗಳಿಂದಾಗಿ ರಿಲೀಸ್ ಆಗದೆ ಉಳಿದಿದ್ದ ನಟ ವಿಜಯ್ ಅವರ ಕೊನೆಯ ಸಿನಿಮಾ 'ಜನನಾಯಗನ್' ಮೌಲ್ಯ ಈಗ ಗಗನಕ್ಕೇರಿದೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗ್ತಿದ್ದಂತೆ, ಇದೇ ಸಿನಿಮಾವನ್ನ ಹಿಂದೆ ತಿರಸ್ಕರಿಸಿದ್ದ ಪ್ರಮುಖ ಒಟಿಟಿ ಕಂಪನಿಗಳು ಈಗ ರೆಕಾರ್ಡ್ ಮೊತ್ತ ನೀಡಿ ಸ್ಟ್ರೀಮಿಂಗ್ ಹಕ್ಕು ಪಡೆಯಲು ಮುಗಿಬಿದ್ದಿವೆ. ದೊಡ್ಡ ಪರದೆ ಮೇಲೆ 'ದಳಪತಿ' ಆಗಿ ಮೆರೆದಿದ್ದ ವಿಜಯ್, ಈಗ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಮೂರು ದಿನಗಳಾಗಿವೆ.

ಅಷ್ಟರಲ್ಲೇ, ಮುಖ್ಯಮಂತ್ರಿ ಜೋಸೆಫ್ ವಿಜಯ್ ತೆಗೆದುಕೊಂಡಿರುವ ಕೆಲವೊಂದು ನಿರ್ಧಾರಗಳು ಭಾರೀ ಮೆಚ್ಚುಗೆಗೆ ಪಾತ್ರವಾಗಿವೆ. ಇದರ ನಡುವೆಯೇ, ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ 'ಜನನಾಯಗನ್' ರಿಲೀಸ್ ಆಗುತ್ತಾ ಇಲ್ವಾ ಅನ್ನೋ ಚರ್ಚೆ ಜೋರಾಗಿದೆ. ಸೆನ್ಸಾರ್ ಸಮಸ್ಯೆಗಳಿಂದಾಗಿ ಈ ಚಿತ್ರದ ಬಿಡುಗಡೆ ತಡವಾಗಿತ್ತು. ಅಷ್ಟೇ ಅಲ್ಲ, ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್‌ಗೆ ದೊಡ್ಡ ನಷ್ಟವನ್ನೂ ಉಂಟುಮಾಡಿತ್ತು. ಆದರೂ, 'ಜನನಾಯಕನ್' ಶೀಘ್ರದಲ್ಲೇ ತೆರೆಗೆ ಬರಲಿದೆ ಅನ್ನೋ ಮಾಹಿತಿ ಇದೆ.

ಈ ಮಧ್ಯೆ, 'ಜನನಾಯಗನ್' ಚಿತ್ರದ ಒಟಿಟಿ ಹಕ್ಕುಗಳಿಗಾಗಿ ದೊಡ್ಡ ಸ್ಟ್ರೀಮಿಂಗ್ ಕಂಪನಿಗಳ ನಡುವೆ ದೊಡ್ಡ ಸ್ಪರ್ಧೆಯೇ ಶುರುವಾಗಿದೆ ಅನ್ನೋ ಸುದ್ದಿ ಹೊರಬಿದ್ದಿದೆ. 'ದಿ ಹಿಂದೂ' ವರದಿ ಪ್ರಕಾರ, ಈ ಮೊದಲು ಅಮೆಜಾನ್ ಪ್ರೈಮ್ ವಿಡಿಯೋ 'ಜನನಾಯಗನ್' ಚಿತ್ರದ ಒಟಿಟಿ ಹಕ್ಕುಗಳನ್ನು ಪಡೆದಿತ್ತು. ಆದರೆ, ಸೆನ್ಸಾರ್ ಸಮಸ್ಯೆಗಳು ಮತ್ತು ಕಾನೂನು ಹೋರಾಟಗಳಿಂದಾಗಿ ಅಮೆಜಾನ್ ಈ ಒಪ್ಪಂದದಿಂದ ಹಿಂದೆ ಸರಿದಿತ್ತು. ಆದರೆ ಈಗ ಕಥೆಯೇ ಬದಲಾಗಿದೆ. ವಿಜಯ್ ಅವರ ರಾಜಕೀಯ ಗೆಲುವು ಮತ್ತು ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಅಮೆಜಾನ್ ಪ್ರೈಮ್ ಸೇರಿದಂತೆ ಎಲ್ಲಾ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಮತ್ತೆ ರೇಸ್‌ಗೆ ಇಳಿದಿವೆ.

ನಿರ್ಮಾಪಕರಿಗೆ ತಲೆನೋವು

'ಟೈಮ್ಸ್ ಆಫ್ ಇಂಡಿಯಾ' ವರದಿಯ ಪ್ರಕಾರ, 'ಜನನಾಯಗನ್' ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳಿಗೆ ಬೇಡಿಕೆ ವಿಪರೀತವಾಗಿ ಹೆಚ್ಚಾಗಿದ್ದು, ಈ ಸಿನಿಮಾಕ್ಕೆ ಹಿಂದೆಂದೂ ಸಿಗದಂತಹ ದಾಖಲೆ ಮೊತ್ತ ಸಿಗಲಿದೆ. ಈ ಸಂಬಂಧ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕೆವಿಎನ್ ಪ್ರೊಡಕ್ಷನ್ಸ್‌ ಜೊತೆ ಮಾತುಕತೆ ಆರಂಭಿಸಿದ್ದು, ದಾಖಲೆಯ ಮೊತ್ತವನ್ನು ಆಫರ್ ಮಾಡುತ್ತಿವೆ. ಅನಿರೀಕ್ಷಿತ ಸಮಸ್ಯೆಗಳು ನಿರ್ಮಾಪಕರಿಗೆ ತಲೆನೋವು ತಂದಿದ್ದರೂ, ವಿಜಯ್ ಅವರ ಜನಪ್ರಿಯತೆ ಮತ್ತು ರಾಜಕೀಯ ಬೆಳವಣಿಗೆಗಳಿಂದಾಗಿ ಸಿನಿಮಾದ ಮಾರುಕಟ್ಟೆ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಎಚ್. ವಿನೋದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಜನವರಿಯಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದ ಕಾರಣ ರಿಲೀಸ್ ಮುಂದಕ್ಕೆ ಹೋಯ್ತು. ಸುಮಾರು 250 ರಿಂದ 300 ಕೋಟಿ ರೂಪಾಯಿ ಬಜೆಟ್‌ನಲ್ಲಿ 'ಜನನಾಯಗನ್' ಚಿತ್ರವನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ. ನಷ್ಟ ಅನುಭವಿಸಿರುವ ನಿರ್ಮಾಪಕರಿಗಾಗಿ ವಿಜಯ್ ಇನ್ನೊಂದು ಸಿನಿಮಾ ಮಾಡಿಕೊಡಬೇಕು ಎಂಬ ಒತ್ತಾಯ ಹಲವು ಕಡೆಗಳಿಂದ ಕೇಳಿಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕನ್ನಡ ಮರೆತಿಲ್ಲ, ಟಚ್ ಬಿಟ್ಟುಹೋಗಿದೆ ಅಷ್ಟೇ' ಎಂದ ರಜನಿಕಾಂತ್; ರವಿಶಂಕರ್ ಗುರೂಜಿ ಸತ್ಸಂಗದಲ್ಲಿ 'ತಲೈವಾ' ಮತ್ತೇನು ಹೇಳಿದ್ರು?
ಸ್ಮಾರ್ಟ್​ವಾಚ್​ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್​ ರಾಜ್​? ಮಧ್ಯರಾತ್ರಿ ಆಗಿದ್ದೇನು