
ಬೆಂಗಳೂರು(ಅ.16): ಕನ್ನಡದ ಬಿಗ್ಬಾಸ್ 5ನೇ ಸೀಸನ್ ಶುರುವಾಗಿದೆ . ಶೋ ಆರಂಭಿಸುವ ಮೊದಲು ಬಿಗ್ಬಾಸ್ ಮನೆ ಹೇಗಿದೆ ಅನ್ನೋದನ್ನು ನಟ ಸುದೀಪ್ ಪರಿಚಯಿಸಿ ಕೊಟ್ರು.
ಬಳಿಕ ವೇದಿಕೆಗೆ ಬಂದ ನಟ ಸುದೀಪ್ ಸ್ಪರ್ಧಾಳುಗಳನ್ನು ಆಹ್ವಾನಿಸಿದರು. ಬಿಗ್'ಬಾಸ್ ಮನೆಗೆ ಕಳುಹಿಸುವ ಮೊದಲು ಪ್ರತಿಯೊಬ್ಬರೊಂದಿಗೂ ಸುದೀಪ್ ಕುಶಲೋಪರಿ ನಡೆಸಿದರು. ಇದೇ ಮೊದಲ ಬಾರಿಗೆ ಸುದೀಪ್ ಸ್ಪರ್ಧಾಳುಗಳ ತೂಕ ಚೆಕ್ ಮಾಡಿಸಿ, ಬಿಗ್ಬಾಸ್ ಮನೆಯೊಳಗೆ ಕಳುಹಿಸಿದ್ರು.
ಯಾಱರಿದ್ದಾರೆ ಬಿಗ್'ಬಾಸ್ ಮನೆಯಲ್ಲಿ?`
ಮೊದಲನೇ ಸ್ಪರ್ಧಿ ಜ್ಯೋತಿಷಿ ಜಯಶ್ರೀನಿವಾಸನ್
ಎರಡನೇ ಸ್ಪರ್ಧಿ ಕೊಡಗಿನ ಮೇಘಾ ( ಜನಸಾಮಾನ್ಯ)
ಮೂರನೇ ಸ್ಪರ್ಧಿ ನಿರ್ದೇಶಕ ದಯಾಳ್ ಪದ್ಮನಾಭ
ನಾಲ್ಕನೇ ಸ್ಪರ್ಧಿ ಸಿಹಿಕಹಿ ಚಂದ್ರು
5ನೇ ಸ್ಪರ್ಧಿ ಬಾಲಿವುಡ್ ಕಿರುತೆರೆ ನಟಿ ಶ್ರುತಿ (ಬೆಳಗಾವಿ ಹುಡುಗಿ)
6ನೇ ಸ್ಪರ್ಧಿ ಕನ್ನಡದ ಕಿರುತೆರೆ ನಟಿ ಅನುಪಮಾ
7ನೇ ಸ್ಪರ್ಧಿ ಆರ್ಜೆ ರಿಯಾಸ್ ಭಾಷಾ
8ನೇ ಸ್ಪರ್ಧಿ ಮೈಸೂರಿನ ನಿವೇದಿತಾಗೌಡ (ಜನಸಾಮಾನ್ಯ)
9ನೇ ಸ್ಪರ್ಧಿ ಹುಬ್ಬಳ್ಳಿಯ ಸಮೀರ್ ಆಚಾರ್ಯ
10ನೇ ಸ್ಪರ್ಧಿ ನಟ ಜೆಕೆ -ಕಾರ್ತಿಕ್ ಜಯರಾಂ
11ನೇ ಸ್ಪರ್ಧಿ ಸೇಲ್ಸ್ ಮ್ಯಾನ್ ದಿವಾಕರ್ ( ಜನಸಾಮಾನ್ಯ)
12ನೇ ಸ್ಪರ್ಧಿ ಕಿರುತೆರೆ ನಟಿ ಆಶಿತಾ ಚಂದ್ರಪ್ಪ
13ನೇ ಸ್ಪರ್ಧಿ ನಟಿ ತೇಜಸ್ವಿನಿರಾವ್
14ನೇ ಸ್ಪರ್ಧಿ ಚಂದನ್ಶೆಟ್ಟಿ
15ನೇ ಸ್ಪರ್ಧಿ ಸುಮಾ ರಾಜಕುಮಾರ್(ಜನಸಾಮಾನ್ಯ)
16ನೇ ಸ್ಪರ್ಧಿ ನಟಿ ಕೃಷಿ ತಾಪಂಡ
17 ನೇ ಸ್ಪರ್ಧಿ ಕಿರುತೆರೆ ನಟ ಜಗನಾಥ್
ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ರು. ಒಟ್ಟಿನಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಮನೆಗೆ 17 ಜನರು ನೂರಾರು ಕನಸುಗಳು ಇಟ್ಟುಕೊಂಡು ಪ್ರವೇಶ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.