ಸತೀಶ್ 15 ಸಲ ನೋಡಿದ ಸಿನಿಮಾ

By Kannadaprabha NewsFirst Published Aug 17, 2018, 1:20 PM IST
Highlights

ಅಯೋಗ್ಯ ಅಂತ ಹೆಸರಿಟ್ಟಿರೆ ನಾಯಕನ ಯೋಗ್ಯತೆಗೆ ಕುಂದು ಬರುತ್ತದೆಯೇ? ಇಲ್ಲ ಅಂತಾರ ಸತೀಶ್ ನೀನಾಸಂ. ಇವತ್ತು ತೆರೆಕಾಣುತ್ತಿರುವ ಚಿತ್ರದ ಬಗ್ಗೆ ಅಪಾರ ಭರವಸೆ ಮತ್ತು ಭರಪೂರ ಮೆಚ್ಚುಗೆ ಇಟ್ಟುಕೊಂಡಿರುವ ಸರೀಶ್ ಇಡೀ ಸಿನಿಮಾ ಮೂಡಿ ಬಂದ ಬಗ್ಗೆ ಮಾತಾಡಿದ್ದಾರೆ.

ಅಯೋಗ್ಯನಾದರೆ ಯೋಗ್ಯನಾಗುತ್ತಾನೆ: ಸತೀಶ್ ನೀನಾಸಂ

ಅಯೋಗ್ಯ ಚಿತ್ರದ ಬಗೆಗಿನ ನಿರೀಕ್ಷೆಗೆ ಕಾರಣವೇನು?

ಬಾ ದಿನಗಳ ನಂತರ ಬರುತ್ತಿರುವ ಹಳ್ಳಿ ಹಿನ್ನೆಲೆಯ ಕತೆಯ ಚಿತ್ರವಿದು. ನನ್ನ ನಟನೆಯ ಚಿತ್ರದ ಹಾಡುಗಳು ಚೆನ್ನಾಗಿದ್ದರೂ ಮಿಲಿಯನ್‌ಗಳ ಗಡಿದಾಟಿದ್ದು ಇದೇ ಮೊದಲು. ತೆರೆಗೆ ಬರುವ ಮುನ್ನವೇ ಹಿಂದಿ ಡಬ್ಬಿಂಗ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಅಪ್ಪಟ ನಮ್ಮ ಭಾಷೆಯ ಸೊಗಡಿನ ಸಿನಿಮಾ. ಕಲಾವಿದರ ನಟನೆ, ನಿರ್ದೇಶಕರ ಟೇಕಿಂಗ್, ನನ್ನ ಪಾತ್ರದ ರೀತಿ, ಅದ್ದೂರಿ ನಿರ್ಮಾಣ ಇವೆಲ್ಲವೂ ಕಾರಣ.

ಈ ಚಿತ್ರದ ಹೆಸರು ನೆಗೆಟಿವ್ ಅನಿಸುತ್ತಿಲ್ಲವೆ?

ಸುಮ್ಮನೆ ಅಯೋಗ್ಯ ಅಂತ ಕೇಳಿದರೆ ಹಾಗೆ ಅನಿಸಬಹುದು. ಆದರೆ, ಕತೆಯ ಕತೆಗೆ ಚಿತ್ರದ ಹೆಸರು ಕೇಳಿದರೆ ಖಂಡಿತ ಅಯೋಗ್ಯನಾಗುವುದೇ ಒಳ್ಳೆಯದು ಎನ್ನುವ ಭಾವನೆ ಮೂಡುತ್ತದೆ. ಯಾಕೆಂದರೆ ‘ಅಯೋಗ್ಯ’ನಾದ ಮೇಲೆಯೇ ಯೋಗ್ಯನಾಗುವುದಕ್ಕೆ ಸಾಧ್ಯ ಎನ್ನುತ್ತದೆ ಈ ಸಿನಿಮಾ.

ಅಯೋಗ್ಯ ಇಲ್ಲಿ ಏನೆಲ್ಲ ಮಾಡುತ್ತಾನೆ?

ಚಿತ್ರದ ಹೆಸರಿನಂತೆ ಕತೆ ನೆಗೆಟಿವ್ ಅಲ್ಲ. ಎಲ್ಲರೂ ತಿಳಿದುಕೊಂಡಂತೆ, ಈ ಅಯೋಗ್ಯ ಕೆಟ್ಟವನಲ್ಲ. ಸಮಾಜಕ್ಕೆ ದೊಡ್ಡ ಸಂದೇಶ ಹೇಳಲು ಹೊರಟಿದ್ದಾನೆ. ನಮ್ಮ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನ ಅವನದು. ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿ, ಇಷ್ಟೆಲ್ಲಾ ಸಮಸ್ಯೆ ಇದೆಯಾ, ಆ ಸಮಸ್ಯೆಗಳಿಗೆ ಪರಿಹಾರ ಹೀಗೂ ಇರುತ್ತವೆಯೇ ಎಂಬುದನ್ನು ಒಬ್ಬ ಹಳ್ಳಿ ಹುಡುಗನ ಮೂಲಕ ಹೇಳಲಾಗುತ್ತದೆ. ಆದರೆ, ಆತನ ಆ ಮಾತುಗಳು ಆರಂಭದಲ್ಲಿ ಯಾರಿಗೂ ನಂಬಿಕೆ ಮೂಡಿಸಲ್ಲ. ರಾಂಗ್ ರೂಟ್‌ನಲ್ಲಿ ಹೋಗಿ ಅಯೋಗ್ಯ ಅನಿಸಿಕೊಂಡು, ರೈಟ್ ಕತೆ ಹೇಳಿ ಯೋಗ್ಯನಾಗುತ್ತಾನೆ.

ಹಳ್ಳಿ ಕತೆ ಎನ್ನುತ್ತಿದ್ದೀರಿ, ಪೋಸ್ಟರ್, ಟ್ರೇಲರ್ ಸಿಕ್ಕಾಪಟ್ಟೆ ಕಲರ್‌ಫುಲ್ಲಾಗಿದೆಯಲ್ಲ? 

ಹಳ್ಳಿಯ ಜೀವನ ಕಲರ್‌ಫುಲ್ಲಾಗಿರಲ್ಲ ಅಂತ ಹೇಳಿದ್ದು ಯಾರು? ಅಲ್ಲಿನ ಸ್ವಚ್ಚ ವಾತಾವರಣ, ಹಸಿರು ತೋಟಗಳು, ಬತ್ತದ ಗದ್ದೆಗಳಷ್ಟೆ ಹಳ್ಳಿ ಸಮೃದ್ಧವಾಗಿರುತ್ತದೆ. ಅದನ್ನು ಪೋಸ್ಟರ್‌ಗಳಲ್ಲಿ ಕಲರ್‌ಫುಲ್ಲಾಗಿ ಬಿಂಬಿಸಿದ್ದೇವೆ. ಇಡೀ ಸಿನಿಮಾ ಕೂಡ ಇಷ್ಟೇ ರಂಗುರಂಗಿನ ನೆರಳಿನಲ್ಲಿ ಮನರಂಜನಾತ್ಮಕವಾಗಿರುತ್ತದೆ.

ನಿಮಗೆ ಮಂಡ್ಯ ಭಾಷೆ ಶೈಲಿಯ ಸಿನಿಮಾಗಳು ಅದೃಷ್ಟವಂತೆ ಹೌದೇ?

ಒಂಥರಾ ಹೌದು. ಯಾಕೆಂದರೆ ಈ ಹಿಂದೆ ‘ಲವ್ ಇನ್ ಮಂಡ್ಯ’ ಸಿನಿಮಾದ ಬಗ್ಗೆಯೂ ಒಳ್ಳೆಯ ಅಭಿಪ್ರಾಯಗಳು ಬಂದವು. ಅದರ ಹಾಡೊಂದು ತುಂಬಾ ಹಿಟ್ ಆಯಿತು. ಇದಕ್ಕೂ ಮುನ್ನ ‘ಡ್ರಾಮಾ’ ಚಿತ್ರದಲ್ಲೂ ಮಂಡ್ಯ ಭಾಷೆಯ ಶೈಲಿಗೆ ನನ್ನ ಪಾತ್ರ ಸೂಕ್ತವಾಗಿತ್ತು. ಅಲ್ಲೂ ಜನ ಮೆಚ್ಚಿಕೊಂಡರು. ಈಗಲೂ ‘ಅಯೋಗ್ಯ’ ಮೂಲಕ ಮಂಡ್ಯ ಗ್ರಾಮಾದ ಡ್ರಾಮಾಯಣವನ್ನೇ ಹೇಳಿಕ್ಕೆ ಹೊರಟಿದ್ದು, ಈ ಚಿತ್ರವೂ ಬಿಡುಗಡೆಗೂ ಮುನ್ನವೇ ಯಶಸ್ಸಿನ ಸೂಚನೆಗಳು ಕೊಡುತ್ತಿದೆ.

ಈ ಅಯೋಗ್ಯ ಸಿನಿಮಾ ನಿಮ್ಮ ಕೆರಿಯರ್‌ಗೆ ಎಷ್ಟು ಮಹತ್ವ ಅನಿಸುತ್ತಿದೆ?

‘ಏನಮ್ಮಿ, ಏನಮ್ಮಿ’ ಹಾಡು ೫ ಮಿಲಿಯನ್ ಹಿಟ್ ಪಡೆದುಕೊಳ್ಳುವ ಜತೆಗೆ ೨೦ ಸಾವಿರ ಡಬ್‌ಸ್ಮ್ಯಾಷ್ ಆಗಿದೆ. ಮತ್ತೊಂದು ಹಾಡು ಒಂದೇ ದಿನದಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ. ನನ್ನ ಹಿಂದಿನ ಚಿತ್ರಗಳು ಈ ಹಂತಕ್ಕೆ ಬಿಡುಗಡೆ ಮುನ್ನವೇ ಸೌಂಡು ಮಾಡಿರಲಿಲ್ಲ. ಮ್ಯೂಸಿಕಲಿ, ಕತೆ, ಹಾಡು ಇವೆಲ್ಲವೂ ಹೊಸದಾಗಿದೆ. ಮೊದಲಿಗೆ ಇದು ಅಪ್ಪಟ ದೇಸಿ ಚಿತ್ರ. ಎಲ್ಲೂ ಕಾಣದ, ಕೇಳದ ಕಥೆ ಇಲ್ಲಿದೆ. ಎಲ್ಲೂ ಕದಿಯದ, ಸ್ಫೂರ್ತಿ ಪಡೆಯದ ಚಿತ್ರಣ ಇಲ್ಲಿದೆ. ಈ ಚಿತ್ರವನ್ನು ನಾನು ಸುಮಾರು ಹದಿನೈದು ಸಲ ನೋಡಿದ್ದೇನೆ. ಎಲ್ಲೂ ಬೋರ್ ಎನಿಸಿಲ್ಲ. 

click me!