ನಿಖಿತಾ ಮದ್ವೆ ಆಯ್ತು

Published : Oct 09, 2016, 03:41 PM ISTUpdated : Apr 11, 2018, 01:12 PM IST
ನಿಖಿತಾ ಮದ್ವೆ ಆಯ್ತು

ಸಾರಾಂಶ

ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ನಿಖಿತಾ ಅವರನ್ನು ನೋಡಿದ ಗಗನ್ ದೀಪ್ ಸಿಂಗ್ ಅವರು ಒಂದೇ ನೋಟಕ್ಕೆ ಮೆಚ್ಚಿಕೊಂಡಿದ್ದರು.

ಮುಂಬೈ(ಅ.9): ಕನ್ನಡ ಹಾಗು ತೆಲುಗು ಚಿತ್ರಗಳಲ್ಲಿ ತನ್ನ ಗ್ಲ್ಯಾಮರ್ ನಿಂದಲೇ ಬೋಲ್ಡ್ ಮಾಡಿದ ನಟಿ  ನಿಖಿತಾ ತುಕ್ರಾಲ್ ಉದ್ಯಮಿ ಗಗನ್‍ದೀಪ್ ಸಿಂಗ್ ಮಾವೋ ಜೊತೆ  ಸಪ್ತಪದಿ ತುಳಿದಿದ್ದಾರೆ. ನಿನ್ನೆ ಬೆಳಗ್ಗೆ ಶುಭ ಮುಹೂರ್ತದಲ್ಲಿ ನಟಿ ನಿಖಿತಾ ತುಕ್ರಾಲ್ ಅವರು, ಎರಡು ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ತಾವು ಪ್ರೇಮಿಸಿದ ಪಂಜಾಬಿ ಹುಡುಗ ಗಗನ್ ದೀಪ್ ಸಿಂಗ್ ಮಾಗೋ ಅವರ ಕೈ ಹಿಡಿದಿದ್ದಾರೆ.

ಈ ಸಮಾರಂಭ  ಮುಂಬೈನಲ್ಲಿ ನಡೆದಿದ್ದು, ಇಂದು ಮುಂಬೈನಲ್ಲೇ ಆರತಕ್ಷತೆ ನಡೆಯಲಿದೆ. ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ನಿಖಿತಾ ಅವರನ್ನು ನೋಡಿದ ಗಗನ್ ದೀಪ್ ಸಿಂಗ್ ಅವರು ಒಂದೇ ನೋಟಕ್ಕೆ ಮೆಚ್ಚಿಕೊಂಡಿದ್ದರು. ಆಮೇಲೆ ಮಾತುಕತೆ ಆಗಿ ಲವ್ ಆಗಿ ಇದೀಗ ಮದುವೆ ಕೂಡ ಮಾಡಿಕೊಂಡಿದ್ದಾರೆ. ಪಕ್ಕಾ ಪಂಜಾಬಿ ಶೈಲಿ ಅಂದರೆ ಉತ್ತರ ಭಾರತೀಯ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ನೆರವೇರಿದೆ. ಮುಂಬೈನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇದ್ದಕ್ಕಿದ್ದಂತೆ ಮದುವೆಯಾದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ? ತಲೆಕೆಡಿಸಿಕೊಂಡ ಫ್ಯಾನ್ಸ್!
'ಧುರಂಧರ್' ಸಿನಿಮಾ ಭಾರತೀಯರ ಗರ್ವ: ಆರ್‌ಜಿವಿ ಹೊಗಳಿಕೆ ಕೇಳಿ ಕಣ್ಣೀರಾದ ನಿರ್ದೇಶಕ ಆದಿತ್ಯ ಧರ್!