ಸಲ್ಲುಗೆ ಟಾಂಗ್ ಕೊಟ್ಟ ಅಜಯ್ ದೇವಗನ್ : ಪಾಕ್ ಕಾಲಾವಿದರ ಬಗ್ಗೆ ಕೋಪ

Published : Oct 08, 2016, 05:36 PM ISTUpdated : Apr 11, 2018, 12:38 PM IST
ಸಲ್ಲುಗೆ ಟಾಂಗ್ ಕೊಟ್ಟ ಅಜಯ್ ದೇವಗನ್ : ಪಾಕ್ ಕಾಲಾವಿದರ ಬಗ್ಗೆ ಕೋಪ

ಸಾರಾಂಶ

ಪಾಕ್‌ ಕಲಾವಿದರು ಭಾರತಕ್ಕೆ ಬಂದು ಪ್ರಗತಿ ಸಾಧಿಸಿದ್ದರೂ ಅವರು ತಮ್ಮ ದೇಶಕ್ಕೆ ಬೆಂಬಲ ಸೂಚಿಸಿದ್ದಾರೆ

ಮುಂಬೈ(ಅ.8): ಪಾಕ್‌ ಕಲಾವಿದರೊಂದಿಗೆ ನಟಿಸುವುದಿಲ್ಲ, ಹಾಗೂ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಬಾಲಿವುಡ್‌ ನಟ ಅಜಯ್‌ ದೇವಗನ್‌ ತಿಳಿಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ ಪ್ರಸ್ತುತ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ದೇಶದ ವಿಚಾರ ಹಾಗೂ ಸಂಸ್ಕೃತಿಯ ಬಗ್ಗೆ ಮಾತನಾಡಿ ಒಬ್ಬರನ್ನೊಬ್ಬರು ಪ್ರತ್ಯೇಕಿಸಿಕೊಳ್ಳಬಾರದು. ಪಾಕಿಸ್ತಾನಿ ಕಲಾವಿದರೊಂದಿಗೆ ಸದ್ಯದ ಪರಿಸ್ಥಿತಿಯಲ್ಲಿ ನಟಿಸುವುದಿಲ್ಲ. ನನ್ನ ಚಿತ್ರ ‘ಶಿವಾಯ್’ ಪಾಕಿಸ್ತಾನದಲ್ಲಿ ಬಿಡುಗಡೆಯಾಗದಿದ್ದರೂ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ. ‘ಮೊದಲು ನಾವು ಭಾರತೀಯರು. ಪಾಕ್‌ ಕಲಾವಿದರು ಭಾರತಕ್ಕೆ ಬಂದು ಪ್ರಗತಿ ಸಾಧಿಸಿದ್ದರೂ ಅವರು ತಮ್ಮ ದೇಶಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಅಜಯ್‌ ದೇವಗನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಅಜಯ್‌ ದೇವಗನ್‌ ಅವರ ಪತ್ನಿ ಕಾಜೋಲ್‌ ತಮ್ಮ ಪತಿ ಕೈಗೊಂಡ ನಿರ್ಧಾರಕ್ಕೆ ಟ್ವೀಟರ್‌ನಲ್ಲಿ ಸಂತಸ  ಹಂಚಿಕೊಂಡಿದ್ದಾರೆ. ಈ ಮೊದಲು ಮತ್ತೊಬ್ಬ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪಾಕಿಸ್ತಾನ ಕಲಾವಿದರ ಬಗ್ಗೆ ಮಾತನಾಡಿದ್ದರು. ಅದಕ್ಕೆ ಪ್ರತಿಯಾಗಿ ಅಜಯ್ ಸಲ್ಲುಗೆ ಟಾಂಗ್ ಕೊಡುವ ರೀತಿಯಲ್ಲಿ ದೇಶಭಕ್ತಿತನ ಪ್ರದರ್ಶಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇದ್ದಕ್ಕಿದ್ದಂತೆ ಮದುವೆಯಾದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ? ತಲೆಕೆಡಿಸಿಕೊಂಡ ಫ್ಯಾನ್ಸ್!
'ಧುರಂಧರ್' ಸಿನಿಮಾ ಭಾರತೀಯರ ಗರ್ವ: ಆರ್‌ಜಿವಿ ಹೊಗಳಿಕೆ ಕೇಳಿ ಕಣ್ಣೀರಾದ ನಿರ್ದೇಶಕ ಆದಿತ್ಯ ಧರ್!